ಬಿಲ್ ತುಂಬದ ಕಾರಣ 60 ವರ್ಷದ ವೃದ್ಧನಿಗೆ ಬೆಡ್ ಗೆ ಕಟ್ಟಿ ಹಾಕಿದ ಆಸ್ಪತ್ರೆ! ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸಿಎಂ ಆದೇಶ!

ಘಟನೆ ಮಧ್ಯಪ್ರದೇಶದ ಶಾಜಾಪುರ್ ದ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ. ಉಪಚಾರದ ಬಿಲ್ ಪಾವತಿಸಲು ಹಣವಿಲ್ಲದ ಕಾರಣ ಆಸ್ಪತ್ರೆಯ ವ್ಯವಸ್ಥಾ ಮಂಡಳಿ ಈ ರೀತಿ ಮಾಡಿದೆ ಎಂದು ಮಗಳು ಆರೋಪಿಸಿದ್ದಾಳೆ. ರೋಗಿಯ ಜೊತೆಗೆ ಆಸ್ಪತ್ರೆ ನಡೆದುಕೊಂಡೇ ರೀತಿಯನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿಯ ಈ ಕರುಣಾಜನಕ ಚಿತ್ರಗಳನ್ನು ಮತ್ತು ವಿಡಿಯೋವನ್ನು ನೋಡಿದ ಮಧ್ಯಪ್ರದೇಶ ಸರಕಾರದ ಮುಖ್ಯಮಂತ್ರಿ ತಕ್ಷಣ ಆಸ್ಪತ್ರೆಯ ವ್ಯವಸ್ಥಾಪನದ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ಆಸ್ಪತ್ರೆಯ ಮಂಡಳಿಯು ರೋಗಿಯ ಮಗಳು ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದಾಳೆ. ರೋಗಿಗೆ ನೋವು ಆಗುತ್ತಿರುವದರಿಂದ ಆತ ಉಪಚಾರಕ್ಕೆ ಸ್ಪಂದಿಸದೆ ಮೇಲಿಂದಮೇಲೆ ಎದ್ದು ಓಡಿ ಹೋಗುತ್ತಿದ್ದ ಕಾರಣದಿಂದ ಆತನನ್ನು ಬೆಡ್ಡಿಗೆ ಕಟ್ಟಿ ಹಾಕಲಾಗಿದೆ.

ಪ್ರಸ್ತುತ ಘಟನೆಯ ಬಗ್ಗೆ ಸಿ ಎಂ ಶಿವರಾಜ್ ಸಿಂಹ ಚೌಹಾಣ್ ಅವರು ‘ವೃದ್ಧರ ಮೇಲೆ ಈ ರೀತಿ ಅತ್ಯಾಚಾರ ಮಾಡುವದು ಸರಿಯಲ್ಲ, ದೋಷಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು’ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಗಡ್ ಜಿಲ್ಲೆಯ ರನಾರಾ ಊರಿನ ನಿವಾಸಿಯಾದ 60 ವರ್ಷ ವಯಸ್ಸಿನ ಲಕ್ಷ್ಮೀನಾರಾಯಣ ದಾಂಗಿ ಹೊಟ್ಟೆ ನೋವಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನೋವು ಕಡಿಮೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ತೆಗೆದುಕೊಂಡು ಮನೆಗೆ ಹೋಗಬೇನ್ನುವಷ್ಟರಲ್ಲಿ ಬಿಲ್ ದ ಸಂಪೂರ್ಣ ಹಣವಿಲ್ಲದ ಕಾರಣ ರೋಗಿಯನ್ನು ಬೆಡ್ ಗೆ ಕಟ್ಟಿ ಹಾಕಿದ್ದಾರೆ.

ಆಸ್ಪತ್ರೆಯ ಸ್ಟಾಫ್ ಜೊತೆಗೆ ಹಣದ ಕಾರಣದಿಂದ ಜಗಳವಾಗಿ ರೋಗಿಗೆ ಬೆಡ್ ಗೆ ಕಟ್ಟಿ ಹಾಕಿ ಅನ್ನ ಮತ್ತು ನೀರಿಲ್ಲದೆ ಹಾಗೆ ಬಿಟ್ಟಿದ್ದಾರೆಂದು ಅಲ್ಲಿಯ ಪ್ರತ್ಯಕ್ಷದರ್ಶಿ ರೋಗಿಯೊಬ್ಬ ಹೇಳಿದ್ದಾನೆ. ಸದ್ಯಕ್ಕೆ ಈ ಪ್ರಕರಣದ ತನಿಖೆ ನಡೆಯುತ್ತಿದೆ.