ಬಿಸಿಲಲ್ಲಿ ಗಾಢ ನಿದ್ರೆಯಲ್ಲಿ ಜಾರಿದ ಮರಿಯಾನೆಯನ್ನು ಎಬ್ಬಿಸಲೆತ್ನಿಸಿ ವಿಫಲವಾದಾಗ ತಾಯಿಯಾನೆ ಮಾಡಿದ್ದೇನು? ನೋಡಿ ಈ ಕ್ಯೂಟ್ ವಿಡಿಯೋ!
ಮಕ್ಕಳಿಗೆ ನಿದ್ರೆಯಿಂದ ಎಬ್ಬಿಸುವುದು ಎಂದರೆ ಪೋಷಕರಿಗೆ ಒಂದು ದೊಡ್ಡ ಸವಾಲೇ ಸರಿ. ಇದು ಬರೀ ಮನುಷ್ಯ ಪ್ರಾಣಿಗಳಲ್ಲಿ ಅಷ್ಟೇ ಅಲ್ಲ ಭೂಮಿಯ ಮೇಲಿನ ಇನ್ನಿತರ ಪ್ರಾಣಿಗಳಿಗೂ ಅನ್ವಯಿಸುತ್ತದೆ. ಇದೇ ರೀತಿಯ ಗಾಢ ನಿದ್ರೆಯಲ್ಲಿ ಮುಳುಗಿದ ಮರಿಯಾನೆ ಮತ್ತು ಅದಕ್ಕೆ ನಿದ್ರೆಯಿಂದ ಎಬ್ಬಿಸಲು ಪ್ರಯತ್ನಿಸುತ್ತಿರುವ ವಾತ್ಸಲ್ಯ ಮೂರ್ತಿ ತಾಯಿಯ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳ ಮನವನ್ನು ಗೆದ್ದಿದೆ. ಮರಿಯಾನೆಗೆ ಎಬ್ಬಿಸಲು ಪ್ರಯತ್ನಿದರೂ ಅದು ಏಳದೆ ಇದ್ದಾಗ ತಾಯಿಯಾನೆ ಮಾಡಿದ್ದೇನು ನೋಡಿ ಈ ವಿಡಿಯೋದಲ್ಲಿ…
ತಾಯಿ ತನ್ನ ಮಗುವಿಗೆ ನಿದ್ರೆಯಿಂದ ಎಚ್ಚೆತ್ತುಕೊಳ್ಳಲು ಪ್ರಯತ್ನಿಸುವ ಹಾಗೆ ಇಲ್ಲಿ ತಾಯಿಯಾನೆಯೂ ಸಹ ಅದೇ ರೀತಿಯಲ್ಲಿ ಪ್ರಯತ್ನಿಸಿದೆ. ಆದರೆ ಮರಿಯಾನೆ ಮಾತ್ರ ಗಾಢ ನಿದ್ರೆಯಲ್ಲಿ ಜಾರಿರುವದರಿಂದ ಅದು ಎಳುವದೇ ಇಲ್ಲ. ಅದು ಮಲಗಿಕೊಂಡಿರುವ ರೀತಿ ನೋಡಿದರೇನೆ ಗೊತ್ತಾಗುತ್ತದೆ ಮರಿಯಾನೆ ಗಾಢವಾಗಿ ಮಲಗಿದೆ ಎಂದು. ಆನೆಯು ಎಷ್ಟು ಎಬ್ಬಿಸಿದರೂ ಎಳದೇ ಇದ್ದಾಗ ತಾಯಿಯಾನೆ ಕೊನೆಗೆ ಸೋತು ತನ್ನ ಕೇರ್ ಟೇಕರ್ ಕಡೆಗೆ ಹೋಗಿ ಅವರ ಸಹಾಯ ಬೇಡುತ್ತದೆ. ಆನೆಯು ಕೇರ್ ಟೇಕರ್ ನ್ನು ಕರೆದುಕೊಂಡು ಮರಿಯ ಹತ್ತಿರ ಬರುತ್ತದೆ. ಆತ ಮರಿಯ ಹತ್ತಿರ ಹೋಗಿ ಎಬ್ಬಿಸಲು ಪ್ರಯತ್ನಿಸುತ್ತಾನೆ. ಆಗಲೂ ಎಳದೇ ಇದ್ದಾಗ ಕೇರ್ ಟೇಕರ್ ಸ್ವಲ್ಪ ಜೋರಾಗಿ ತಟ್ಟುತ್ತಾನೆ. ಆಗ ಮಾತ್ರ ಆನೆಯ ಮರಿಯು ಒಮ್ಮೆಲೆ ನಿದ್ರೆಯಿಂದ ಎಚ್ಚೆತ್ತುಕೊಂಡು ಕೇರ್ ಟೇಕರ್ ಗೆ ನೋಡಿ ಒಂದು ಕ್ಷಣ ಗಾಬರಿಯಾಗುತ್ತದೆ ನಂತರ ತಾಯಿಯ ಕಡೆಗೆ ಓಡುತ್ತದೆ. ಪ್ರತಿಯೊಂದು ಜೀವಿಯು ತಮ್ಮ ಜೀವದ ಕುಡಿಯ ಮೇಲೆ ಸಾಕಷ್ಟು ಪ್ರೀತಿ ಮಾಡುವ ಹಾಗೆ ಆನೆಯು ಸಹ ತನ್ನ ಮರಿಯನ್ನು ತುಂಬಾ ತುಂಬಾ ಪ್ರೀತಿ ಮಾಡುತ್ತದೆ.
ನೋಡಿ ಈ ಸೂಪರ್ ವಿಡಿಯೋ…