ಬುದ್ಧಿವಂತ ಮನುಷ್ಯನ ಅತಿಯಾಸೆಗೆ ಬಲಿಯಾಗುತ್ತಿವೆ ಮೂಕ ಜೀವಿಗಳು: ಈ ಸೀಲ್ ನ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ!
ಮಾನವ ಸಂಸ್ಕೃತಿ ಹೆಚ್ಚು ಅಭಿವೃದ್ಧಿ ಹೊಂದಿದ ಹಾಗೆ ಮಾನವ ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಹೇಗಿದೆಯೆಂದರೆ ಒಂದು ಕಡೆ ಮಾಲಿನ್ಯ ತುಂಬಿ ತುಳುಕುತ್ತಿದ್ದರೆ, ಇನ್ನೊಂದೆಡೆ ಪ್ರಾಣಿ ಸಂಕುಲವು ಮಾನವನ ಚಟುವಟಕೆಗಳಿಂದಾಗಿ ಅವಸಾನದ ಅಂಚನ್ನು ತಲುಪುತ್ತಿವೆ. ಅದು ಮಾತ್ರವೇ ಅಲ್ಲದೇ ಅನೇಕ ಜೀವಿಗಳು ಮಾನವನ ಚಟುವಟಿಕೆಗಳಿಂದ ಪ್ರಾಣಪಾಯದಲ್ಲಿ ಬದುಕು ವಂತಾಗಿದೆ. ಹೌದು ಮನುಷ್ಯನ ಚಟುವಟಿಕೆಗಳು ಭೂಮಿಯ ಮೇಲೆ ಮಾತ್ರವೇ ಅಲ್ಲದೇ ಜಲಚರ ಗಳ ಜೀವಕ್ಕೆ ಸಹಾ ಕುತ್ತನ್ನು ತಂದು ಒಡ್ಡಿವೆ. ಪ್ರವಾಸ, ಪಿಕ್ ನಿಕ್ ಎಂದು ಸಾಗರ ತೀರಗಳಿಗೆ ಹೋಗುವ ವಿದ್ಯಾವಂತರು ಕೂಡಾ ಅನಾಗರಿಕರಂತೆ ಮಾಡುವ ಮಾಲಿನ್ಯದಿಂದ ಜಲಚರಗಳ ಜೀವನ ನರಕ ಸದೃಶವಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಮಾನವರಿಂದ ಹೇಗೆ ಜಲ ಚರಗಳು ತೊಂದರೆಗೆ ಒಳಗಾಗಿವೆ ಎನ್ನುವುದನ್ನು ತೋರಿಸುವ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಸಾಕಷ್ಟು ವೈರಲ್ ಆಗಿವೆ. ಜನರು ಅವುಗಳನ್ನು ನೋಡಿ ಅಯ್ಯೋ ಪಾಪ ಎನ್ನುತ್ತಿದ್ದಾರೆಯೇ ಹೊರತು ಪರಿಸ್ಥಿತಿಗಳು ಮಾತ್ರ ಯಾವುದೇ ಕಾರಣಕ್ಕೂ ಬದಲಾಗಿಲ್ಲ, ಇನ್ನೂ ಸಹಾ ಅನೇಕರಲ್ಲಿ ಜಾಗೃತಿ ಎನ್ನುವುದು ಮೂಡಿಲ್ಲ ಎನ್ನುವುದು ವಿಷಾದನೀಯ ವಿಚಾರ ಎಂದೇ ಹೇಳಬಹುದು. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಅಂತಹುದೇ ಒಂದು ಹೃದಯ ವಿ ದ್ರಾ ವಕ ಘಟನೆಯ ಬಗ್ಗೆ ನಾವು ಹೇಳಲು ಹೊರಟಿದ್ದೇವೆ.
ವೀಡಿಯೋದಲ್ಲಿನ ಘಟನೆಯು ನಮೀಬಿಯಾದ ಸಾಗರ ತೀರದಲ್ಲಿ ನಡೆದಿರುವುದು ಎನ್ನಲಾಗಿದೆ. ಇಲ್ಲಿ ಆಂಟೋನಿಯೋ ಮತ್ತು ನಾಡೆ ಎನ್ನುವ ಸಾಗರ ಜೀವಿಗಳ ರಕ್ಷಣಾ ಕಾರ್ಯಕರ್ತರು ಜಲಚರವಾದ ಸೀಲ್ ಮರಿಯೊಂದು ಸಾಮಾನ್ಯವಾಗಿ ನಡೆಯಲಾಗದೆ ಅದು ಕಷ್ಟಪಡುತ್ತಿರುವುದನ್ನು ನೋಡಿ, ಅದರ ಬಳಿಗೆ ಹೋಗಿ ಹಿಡಿದುಕೊಂಡಿದ್ದಾರೆ. ಸೀಲ್ ಭಯದಿಂದ ತಪ್ಪಿಸಿಕೊಳ್ಳಲು ನೋಡಿದೆ. ಆದರೆ ಅವರು ಹಿಡಿದಿದ್ದು ತನ್ನನ್ನು ಕಾಪಾಡಲು ಎಂದು ಅದಕ್ಕೆ ಗೊತ್ತಿರಲಿಲ್ಲ. ಆ ಇಬ್ಬರು ಕಾರ್ಯಕರ್ತರು ಸೀಲ್ ಅನ್ನು ಹಿಡಿದು ನೋಡಿದಾಗ ಅದರ ಕೊರಳಿನ ಭಾಗದಲ್ಲಿ ತಂತಿಯಂತಹ ವಸ್ತು ಸುತ್ತಿಕೊಂಡು ತೀವ್ರವಾದ ಗಾಯವನ್ನೇ ಮಾಡಿದೆ.
ಆ ಇಬ್ಬರೂ ಬಹಳ ಎಚ್ಚರಿಕೆಯಿಂದ ಸೀಲ್ ಕೊರಳಿಗೆ ನೇಣಿನಂತೆ ಬಿಗಿದ ತಂತಿಯನ್ನು ತೆಗೆದಿದ್ದಾರೆ, ಆದರೆ ಸೀಲ್ ನ ಕೊರಳ ಸುತ್ತ ಆಗಿರುವ ಗಾಯ ನೋಡಿದಾಗ ಆ ಮೂಕ ಪ್ರಾಣಿ ಎಷ್ಟು ವೇದನೆ ಅನುಭವಿಸಿತ್ತಿದೆ ಎನ್ನುವುದರ ಅರಿವಾಗುತ್ತದೆ. ಅನಂತರ ಅದು ಮತ್ತೆ ಸಾಗರದೊಳಗೆ ಓಡಿ ಹೋಗುತ್ತದೆ. ಅದರ ನೋವು ನಿಜಕ್ಕೂ ಕಡಿಮೆಯಾಗಿರುತ್ತದೆ. ಹೀಗೆ ಅನೇಕ ಸೀಲ್ ಗಳು, ಆಮೆಗಳು ಇಂತಹ ಮೀನುಗಳನ್ನು ಹಿಡಿಯಲು ಬಳಸುವ ಬಲೆಗಳ ವೈರ್ ಗಳಿಗೆ ಸಿಲುಕಿ ಸಾಯುತ್ತಿವೆ ಎನ್ನಲಾಗಿದೆ. ಇನ್ನು ಆ ಕಾರ್ಯಕರ್ತರಿಗೆ ಮತ್ತೊಮ್ಮೆ ಗಾಯಗೊಂಡ ಸೀಲ್ ಕಾಣಿಸಿದೆ. ಅದರ ಗಾಯ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಎರಡು ಕೋಟಿಗಿಂತಲೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಹದಿನೈದು ಸಾವಿರಕ್ಕಿಂತ ಅಧಿಕ ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಗಳನ್ನು ಮಾಡಿದವರಲ್ಲಿ ಬಹುತೇಕ ಅನೇಕರು ಸೀಲ್ ಪರಿಸ್ಥಿತಿ ಕಂಡು ಅಯ್ಯೋ ಪಾಪ ಎಂದು ಮರುಗಿದ್ದಾರೆ. ಜಲಚರಗಳ ಪರಿಸ್ಥಿತಿ ಕಂಡು ಬೇಸರವನ್ನು ಹೊರ ಹಾಕಿದ್ದಾರೆ. ಕೆಲವರು ಜಲಜೀವಿಗಳ ಈ ಪರಿಸ್ಥಿತಿಗೆ ಕಾರಣರಾದ ಮಾನವರು ಎಲ್ಲರಿಗಿಂತ ಕ್ರೂ ರ ಜಂತುಗಳು ಎಂದು ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಒಟ್ಟಾರೆ ಈ ವೀಡಿಯೋ ಮನುಷ್ಯನಲ್ಲಿ ಅನ್ಯ ಜೀವಿಗಳ ಕುರಿತಾದ ಕಾಳಜಿ ಇನ್ನಾದರೂ ಜಾಗೃತವಾಗಲೆಂದು ಹೇಳಿದಂತೆ ಇದೆ.