ಬೆಂಗಳೂರಿನಲ್ಲಿದ್ದ ತಮ್ಮ ಸಾಕುನಾಯಿಯನ್ನು ವಾಪಸ್ ತರಲು ಚಾರ್ಟರ್ಡ್ ಪ್ಲೇನ್ ಬುಕ್ ಮಾಡಿದ ಮುಂಬೈ ಮೂಲದ ಉದ್ಯೋಗಪತಿ!
ಬೆಂಗಳೂರು:- ಕೋರೊನಾ ವೈರಸ್ ಸೋಂಕು ಹರಡುವದನ್ನು ತಡೆಯಲು ದೇಶದಲ್ಲಿ ಲಾಕ್ಡೌನ್ ಜಾರಿಗೆ ತರಲಾಗಿದೆ. ಆದುದರಿಂದ ವಲಸೆ ಕಾರ್ಮಿಕರು ತಮ್ಮ ಮನೆಯ ದಾರಿ ಹಿಡಿಯುತ್ತಿದ್ದಾರೆ, ಅಲ್ಲದೆ ಅವರಿಗೆ ತಮ್ಮ ಮನೆಗೆ ತಲುಪಲು ಯಾವುದೇ ಪ್ರಕಾರದ ವಾಹನಗಳು ಸಿಗದ ಕಾರಣ ನಡೆದುಕೊಂಡು ಹೋಗಿದ್ದನ್ನು ನಾವು ನೋಡಿದ್ದೇವೆ ಹಾಗೂ ಕೇಳುತ್ತಿದ್ದೇವೆ. ಆದರೆ ಇಂಥ ಸಮಯದಲ್ಲಿ ಮುಂಬೈ ಯಲ್ಲಿಯ ಒಬ್ಬ ಉದ್ಯೋಗಪತಿ ತನ್ನ ಸಾಕು ನಾಯಿಯನ್ನು ತರುವ ಸಲುವಾಗಿ ಒಂದು ಚಾರ್ಟರ್ಡ್ ಫ್ಲಾಯಿಟ್(Charterd Flight) ಬುಕ್ ಮಾಡಿದ್ದಾರೆ. ಸೂತ್ರಗಳಿಂದ ದೊರೆತ ಮಾಹಿತಿಯ ಅನುಸಾರ ಜೂನ್ 4 ರಂದು ಈ ಸಾಕು ನಾಯಿಯನ್ನು ತರಲು 4 ಜನರು ಮುಂಬಯಿಯಿಂದ ಬೆಂಗಳೂರಿಗೆ ಫ್ಲಾಯಿಟ್ ನಿಂದ ಹಾರಾಟ ಮಾಡಿದ್ದಾರೆ. ಈ ನಾಯಿ ಒಂದು ಪ್ರವಾಸದ ಸಮಯದಲ್ಲಿ ಅವರಿಂದ ಕಳೆದುಕೊಂಡಿತ್ತು.
ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ ದ ಸೂತ್ರ ಹೇಳಿದ ಪ್ರಕಾರ, ಈ ಕುಟುಂಬ ಮಧ್ಯಾಹ್ನ 1.30 ಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರಸ್ಥಾನ ಮಾಡಿದರು. ಅಲ್ಲದೆ ನಾಯಿಯನ್ನು ಕರೆದುಕೊಂಡು ಹೋಗುವ ಮುಂಚೆ ಬೆಂಗಳೂರು ಪಟ್ಟಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆದಿದ್ದಾರೆ.
ಪರಿವಾರ ಕೋವಿಡ್-19 ಟೆಸ್ಟ್ ದ ನೆಗೆಟಿವ್ ರಿಜಲ್ಟ್ ತಮ್ಮ ಜೊತೆಗೆ ಇಟ್ಟುಕೊಂಡಿದ್ದರು. ಏಕೆಂದರೆ ಕರ್ನಾಟಕ ಸರಕಾರವು ಹೊರ ರಾಜ್ಯದಿಂದ ಬರುವ ಪ್ರತಿಯೊಂದು ವ್ಯಕ್ತಿಗೆ ಕಡ್ಡಾಯವಾಗಿ ಕೋವಿಡ್-19 ತಪಾಸಣೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರಿಂದ ಈ ಪರಿವಾರ ಸಾಕು ನಾಯಿಯನ್ನು ಹುಡುಕಲು ಬರುವಾಗ ಅವರೊಂದಿಗೆ ತಮ್ಮ ಕೋವಿಡ್ ರಿಪೋರ್ಟ್ ಸಹ ಅಳವಡಿಸಿಕೊಂಡಿದ್ದರು.

ಇವರು ಯಾವ ಲ್ಯಾಬ್ ದಿಂದ ತಮ್ಮ ಕೋವಿಡ್-19 ತಪಾಸಣೆ ಮಾಡಿಕೊಂಡು ರಿಪೋರ್ಟ್ ತಂದಿದ್ದರೋ ಆ ಲ್ಯಾಬ್ ಭಾರತೀಯ ಚಿಕಿತ್ಸಾ ಅನುಸಂಧಾನ ಪರಿಷದ(ICMR) ಸೂಚಿಸಿದ ಆಸ್ಪತ್ರೆಗಳ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಇದರಿಂದ ವಿಮಾನ ನಿಲ್ದಾಣದಲ್ಲಿ ಗೊಂದಲ ನಿರ್ಮಾಣವಾಯಿತು. ಏಕೆಂದರೆ ಅಲ್ಲಿದ್ದ ಅಧಿಕಾರಿಗಳಿಗೆ ಇವರ ರಿಪೋರ್ಟ್ ನಿಜವಾಗಿಯೂ ನೆಗೆಟಿವ್ ಇದೆಯಾ ಎಂಬ ಸಂಶಯ ಇದ್ದುದರಿಂದ ಅವರಿಗೆ ಈ ಪ್ರಕಾರದ ವಿಚಾರಣೆ ಮಾಡಬೇಕಾಯಿತು. ತದನಂತರ ಅವರನ್ನು ಪ್ರಯಾಣ ಮಾಡಲು ಅನುಮತಿ ನೀಡಿದರು.
ಸರಕಾರಿ ಸೂತ್ರಗಳ ಹೇಳಿದ್ದೇನೆಂದರೆ, ‘ ಅವರ ಪ್ರಯಾಣ ಮಾಡುತ್ತಿರುವ ಉದ್ದೇಶ ನಮ್ಮದೇನು ಸಮಸ್ಯೆ ಅಲ್ಲ” ನಾವು ಸಾಮಾನ್ಯ ಯಾತ್ರಿಗರಂತೆ ಅವರ ತಪಾಸಣೆ ಮಾಡಿದ್ದೇವೆ, ಅಲ್ಲದೆ ಅವರ ಪ್ರಯಾಣದ ಉದ್ದೇಶ ಸರಿಯಾಗಿಯೇ ಇದೆ ಅವರು ತಮ್ಮ ಮೆಚ್ಚಿನ ಪ್ರಾಣಿಗಾಗಿ ಇಷ್ಟೊಂದು ಕಷ್ಟಪಡುತ್ತಿದ್ದಾರೆ ಅದರಲ್ಲೇನು ತಪ್ಪೇನಿಲ್ಲ ಎಂದು ಹೇಳಿದ್ದಾರೆ.
ತದನಂತರ ಅವರು ನಾಯಿ ವಾಸವಾಗಿದ್ದ ಮನೆಗೆ ಹೋದರು. ಅಲ್ಲಿಂದ ನಾಯಿಮರಿಯನ್ನು ತಗೆದುಕೊಂಡು ಮರಳಿ ವಿಮಾನ ನಿಲ್ದಾಣಕ್ಕೆ ಬಂದರು. ಅದರ ನಂತರ ಮತ್ತೆ ಫ್ಲೈಟ್ ಮುಖಾಂತರ ಮರಳಿ ಬಂದರು.