ಬೆಂಬಿಡದ ಭೂತ ಪಾತಾಳದಲ್ಲಿ ಅವಿತು ಕುಳಿತರೂ ಬಿಡೋದಿಲ್ಲ! ಇದಕ್ಕೆ ಸರಿಯಾದ ಉದಾಹರಣೆ ಈ ವಿಡಿಯೋ…ಒಮ್ಮೆ ನೋಡಿ.
ಅನೇಕ ಸಲ ನಾವು ಮಾಡುವ ಆಟಗಳು ನಮಗೆ ತಿರುಗುಬಾಣಗಳಾಗುತ್ತವೆ. ಇಂಥ ಎಷ್ಟೋ ಉದಾಹರಣೆಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತೇವೆ. ಸದ್ಯ ಇದೇ ರೀತಿಯ ತುಂಬಾ ವಿಚಿತ್ರ ಹಾಗೂ ಅಷ್ಟೇ ತಮಾಷೆಯ ವಿಡಿಯೋ ಒಂದು ನೀವಿಲ್ಲಿ ನೋಡಬಹುದು.
ಪ್ರಸ್ತುತ ವಿಡಿಯೋದಲ್ಲಿ 5 ಜನ ಕೂಡಿಕೊಂಡು ಪಟಾಕಿಯನ್ನು ಹಾರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಬ್ಬನು ಪಟಾಕಿಗೆ ಬೆಂಕಿ ತಗಲಿಸಿದ ನಂತರ ಎಲ್ಲರೂ ಕೂಡಿ ಓಡಿಹೋಗಿ ಒಂದು ದಿಬ್ಬದ ಆಚೆ ಅವಿತು ಕುಳಿತುಕೊಳ್ಳುತ್ತಾರೆ. ಆದರೆ ಪಟಾಕಿ ಬಾಣ ಬಿಟ್ಟಿತೇ? ಅದು ಮಾತ್ರ ನೇರ ಅವರನ್ನೇ ಭೇದಿಸುತ್ತಾ ಹೋಗಿ ಅವರ ಹತ್ತಿರವೇ ಧಮ್ ಎಂದು ಹಾರಿ ಬಿಡಬೇಕಾ? ಈ ದೃಶ್ಯ ನಿಜಕ್ಕೂ ತಮಾಷೆಯ ಜೊತೆಗೆ ಒಂದು ಸೈಲೆಂಟ್ ಮೆಸೇಜ್ ಸಹ ಕೊಡುತ್ತದೆ. ಅದೃಷ್ಟ ಖರಾಬು ಆಗಿದ್ದರೆ ಹೀಗೆ ಆಗುವುದು, ಅಲ್ವಾ? ಬೆಂಬಿಡದ ಭೂತ ಪಾತಾಳಕ್ಕೆ ಹೋದರೂ ಬೆನ್ನಟ್ಟಿ ಬಂದಿತ್ತಂತೆ ಎನ್ನೋ ಹಾಗಿದೆ ಈ ವಿಡಿಯೋ.
ವಿಡಿಯೋ ನೋಡಿ
https://twitter.com/vivenmenosviral/status/1590714511899721731?t=nQ-QvuOiwVSk83ikAGJS-g&s=19
ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 2.2 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ 81,000 ಕ್ಕೂ ಹೆಚ್ಚು ಲೈಕ್ಸಗಳನ್ನು ಪಡೆದಿದೆ.