ಬೆಕ್ಕಿಗೆ ಸುಳಿವು ನೀಡದೆ ಜಾಣ್ಮೆಯಿಂದ ನಟಿಸುತ್ತ ಫಾಲೋ ಮಾಡುವ ಡಿಟೆಕ್ಟಿವ್ ನಾಯಿಯ ನಾಟಕದ ಗಮ್ಮತ್ತಿನ ವಿಡಿಯೋ ನೋಡಿ;

ಈಗಿನ ಪ್ರಾಣಿಗಳು ಸಹ ಎಷ್ಟೊಂದು ಜಾಣ್ಮೆಯಿಂದ ವರ್ತಿಸುತ್ತವೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಎಷ್ಟೋ ವಿಡಿಯೋಗಳಲ್ಲಿ ನೀವು ನೋಡಿರಬೇಕು. ಈಗ ವಿಶೇಷ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಲ್ಲಿ ಬೆಕ್ಕು ಮತ್ತು ನಾಯಿಯ ಸುಂದರವಾದ ದೃಶ್ಯ ನೋಡಲು ಸಿಗುತ್ತದೆ.

ಪ್ರಸ್ತುತ ವಿಡಿಯೋ ಕೆಲವೇ ಕ್ಷಣಗಳದ್ದಾದರೂ ನೋಡಲು ಮಾತ್ರ ತುಂಬಾ ತಮಾಷೆಯಿಂದ ಕೂಡಿದೆ. ಈ ವಿಡಿಯೋ ದೃಶ್ಯದಲ್ಲಿ ಒಂದು ನಾಯಿ ಮತ್ತು ಒಂದು ಬೆಕ್ಕು ಕಂಡುಬರುತ್ತದೆ. ಇಲ್ಲಿ ನಾಯಿಗೆ ಬೆಕ್ಕು ಫಾಲೋ ಮಾಡುತ್ತಿದೆ. ನಾಯಿ ತನ್ನನ್ನು ಫಾಲೋ ಮಾಡುತ್ತಿರುವುದು ಬೆಕ್ಕಿಗೆ ಸ್ವಲ್ಪವೂ ಸರಿ ಎನಿಸುತ್ತಿಲ್ಲ. ಹೀಗಾಗಿ ಅದು ಅಸಮಾಧಾನದಿಂದ ಮೇಲಿಂದ ಮೇಲೆ ನಾಯಿಗೆ ವಕ್ರದೃಷ್ಟಿಯಿಂದ ನೋಡುತ್ತಿದೆ. ಇತ್ತ ನಾಯಿಯೂ ಏನು ಕಡಿಮೆ ಇಲ್ಲ. ಅದು ಬೆಕ್ಕಿನ ವರ್ತನೆಯಂತೆ ತನ್ನಲ್ಲಿ ಕ್ಷಣ ಕ್ಷಣಕ್ಕೆ ಅಪ್ಡೇಟ್ ಮಾಡಿಕೊಳ್ಳುತ್ತಿದೆ. ಬೆಕ್ಕು ತನ್ನನ್ನು ನೋಡುತ್ತಲೇ ನಾಯಿಯು ಥಟ್ಟನೆ ಬೇರೆಯೇ ಆಕ್ಟಿಂಗ್ ಮಾಡಲು ಶುರು ಮಾಡುತ್ತದೆ. ಪ್ರಸ್ತುತ ವಿಡಿಯೋ ಪ್ರಾಣಿ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.

ವೀಡಿಯೋ ನೋಡಿ

https://twitter.com/Yoda4ever/status/1590730751942836226?s=20&t=MD63H5rGBuVPpsj6MFerZw

ನಾಯಿ ಮತ್ತು ಬೆಕ್ಕಿನ ತುಂಬಾ ಮುದ್ದಾದ ಈ ವಿಡಿಯೋವನ್ನು ಟ್ವಿಟರ್ ನಲ್ಲಿ @yoda4ever ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 1.1 ಮಿಲಿಯನ್ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋದಲ್ಲಿಯ ನಾಯಿಯನ್ನು ನೋಡಿದಾಗ ಡಿಟೆಕ್ಟಿವ್ ನೆನಪಿಗೆ ಬರುವುದು ನಿಶ್ಚಿತ.