ಬೆಕ್ಕಿಗೆ ಹುಲಿಯ ಸೋದರಮಾವ ಎಂದು ಸುಮ್ನೆ ಕರೆಯಲ್ಲ; ಅದು ಆಡಿದ ಈ ಯುನಿಕ್ ಬೇಟೆ ನೋಡಿ ಆಗ ಗೊತ್ತಾಗುತ್ತೆ…

ಚಪಲ ಮತ್ತು ಚಾಣಾಕ್ಷ ಪ್ರಾಣಿಗಳ ಹೆಸರಿನಲ್ಲಿ ಬೆಕ್ಕು ಸಹ ಬರುತ್ತದೆ. ಬೇಟೆಯಾಡುವ ಪ್ರಾಣಿಗಳಲ್ಲಿ ಚಿರತೆ, ಹುಲಿ, ಸಿಂಹ ಈ ಪ್ರಾಣಿಗಳು ಅಗ್ರ ಕ್ರಮದಲ್ಲಿ ಬಂದರೂ ಮನೆಯಲ್ಲಿ ಸಾಕು ಪ್ರಾಣಿಯಾಗಿ ಬದುಕುವ ಬೆಕ್ಕನ್ನು ಸಹ ಮರೆಯುವಂತಿಲ್ಲ. ಈ ಪ್ರಾಣಿಯು ಬೇಟೆಯಾಡುವುದರಲ್ಲಿ ತುಂಬಾ ಚತುರವಾಗಿರುತ್ತದೆ. ಬೆಕ್ಕು ಬೇಟೆಯಾಡುವಾಗಿನ ಚಾಣಾಕ್ಷತೆ ಹಾಗೂ ಚಪಲತೆಯ ಒಂದು ವಿಡಿಯೋ ಇಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಬೆಕ್ಕು ಇಲಿಯ ಬೇಟೆಯಾಡಲು ಸುಮ್ಮನೆ ಹೊಂಚು ಹಾಕಿ ಕುಳಿತಿದೆ. ಯಾವಾಗ ಬೇಟೆ ತನಗೆ ದಕ್ಕುತ್ತದೆ ಎಂಬ ಭರವಸೆ ಮೂಡುತ್ತದೆ ಆಗ ಹಠಾತ್ತನೇ ಬೆಕ್ಕು ಆಕ್ಟಿವ್ ಆಗಿ ಬಿಲದಲ್ಲಿ ತನ್ನ ಮುಂದಿನ ಕಾಲನ್ನು ಹಾಕಿ ಭರ್ಜರಿ ಬೇಟೆಯಾಡಿದೆ. ಈ ಬೇಟೆಯ ದೃಶ್ಯ ನಿಜಕ್ಕೂ ಅದ್ಭುತವಾಗಿದೆ.

ಬೆಕ್ಕು ಬೇಟೆಯಾಡಿದ ಈ ಯುನೀಕ್ ವಿಡಿಯೋದ ದೃಶ್ಯ ನೋಡಿ…

 

View this post on Instagram

 

A post shared by Trevor Donovan (@trevordonovan)

ಪ್ರಸ್ತುತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ trevordonovan ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 37 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಪ್ರಸ್ತುತ ವಿಡಿಯೋದಲ್ಲಿ ಬೆಕ್ಕು ಬೇಟೆಯಾಡುವಲ್ಲಿ ಎಷ್ಟೊಂದು ಚಾಣಾಕ್ಷತೆ ವಹಿಸುತ್ತದೆ ಎಂಬದು ತಿಳಿದು ಬರುತ್ತದೆ.