ಬೆಡ್ರೂಮ್ ಸೀಕ್ರೆಟ್ ಬಹಿರಂಗ ಪಡಿಸಿದ ಕರೀನಾ; ಮಲಗುವ ಮುಂಚೆ ಬೇಕೇ ಬೇಕು ‘ಈ’ ಮೂರು…
ಕರೀನಾ ಕಪೂರ್ ಅವರು ಬಾಲಿವುಡ್ನಲ್ಲಿಯ ಪ್ರಸಿದ್ಧ ಮತ್ತು ಜನಪ್ರಿಯ ನಟಿಯಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಚಿತ್ರರಂಗದ ಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನದಲ್ಲಿಯ ಘಟನೆಗಳನ್ನು ಅರಿತುಕೊಳ್ಳಲು ಇಷ್ಟಪಡುತ್ತಾರೆ. ವಿಶೇಷವಾಗಿ ಅವರು ಸೇವಿಸುವ ಆಹಾರದ ಬಗ್ಗೆ, ಅವರು ತೊಟ್ಟುಕೊಳ್ಳುವ ಉಡುಪುಗಳ ಬಗ್ಗೆ ಮತ್ತು ಅವರ ಲೈಫ್ ಸ್ಟೈಲ್ ಬಗ್ಗೆ ಹಾಗೂ ಅವರು ವಾಸಿಸುವ ಮನೆಯೊಳಗಿನ ದೃಶ್ಯಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಮತ್ತು ಅವರಿಗೆ ಕೆಲವು ಅಭಿಮಾನಿಗಳು ಅನೇಕ ರೀತಿಯ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಸಹ ಕೇಳುತ್ತಿರುತ್ತಾರೆ. ಆದ್ದರಿಂದಲೇ ಕರೀನಾ ಕಪೂರ್ ಅವರು ತನ್ನ ಅಭಿಮಾನಿಗಳ ಆಗ್ರಹಕ್ಕೆ ಸೋತು ತಮ್ಮ ಬೆಡ್ ರೂಮ್ ಸೀಕ್ರೆಟ್ ನ್ನು ಸ್ವತ: ಶೇರ್ ಮಾಡಿದ್ದಾರೆ. ಮಲಗುವ ಮುನ್ನ ಈ ಮೂರು ಬೇಡಿಕೆಗಳು ಪೂರ್ಣ ವಾಗದಿದ್ದರೆ ಅವರಿಗೆ ನಿದ್ರೆಯೇ ಬರುವುದಿಲ್ಲವಂತೆ. ಕರೀನಾ ಅವರು ಶೀಘ್ರದಲ್ಲಿಯೇ ಡಿಸ್ಕವರಿ ಚಾನೆಲ್ ಸ್ಟಾರ್ ವರ್ಸಸ್ ಫುಡ್ ಈ ಶೋನಲ್ಲಿ ಕಾಣಿಸಲಿದ್ದಾರೆ. ಇದೇ ಶೋದಲ್ಲಿ ಕರೀನಾ ಅವರು ತಮ್ಮ ಬೆಡ್ ರೂಮ್ ಸೀಕ್ರೆಟ್ ಬಗ್ಗೆ ಅಭಿಮಾನಿಗಳ ಜೊತೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಮಲಗುವ ಮುನ್ನ ಅವರಿಗೆ ಉತ್ತಮ ದರ್ಜೆಯ ನೈಟ್ ಸೂಟ್, ಶಾಂಪೆನ್ ಬಾಟಲ್ ಮತ್ತು ಸೈಫ್ ಅಲಿ ಖಾನ್ ಇಲ್ಲದೆ ಅವರಿಗೆ ನಿದ್ರೆಯೇ ಬರುವುದಿಲ್ಲವಂತೆ.
ಇದರ ಜೊತೆಗೆ ಕರೀನಾ ಅವರು ಇನ್ನು ಕೆಲವು ವಿಷಯಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳಿಗೆ ತಮ್ಮ ಮುಂಬರುವ ಈ ಶೋ ನೋಡಲು ವಿನಂತಿಸಿದ್ದಾರೆ.
ಸ್ಟಾರ್ ವರ್ಸಸ್ ಫುಡ್ ಈ ಶೋನಲ್ಲಿ ಹೆಸರಾಂತ ಸೆಲೆಬ್ರಿಟಿಗಳಿಗೆ ಕರೆಯಲಾಗುತ್ತದೆ. ಇಲ್ಲಿ ಬಂದ ಕಲಾಕಾರರು ತಮ್ಮ ಇಷ್ಟದ ಪದಾರ್ಥಗಳನ್ನು ಅಲ್ಲಿಯೇ ಕಿಚನ್ ನಲ್ಲಿ ತಯಾರಿಸುತ್ತಾರೆ. ಅದಕ್ಕಾಗಿ ಅವರಿಗೆ ಪ್ರೊಫೆಷನಲ್ ಶೇಫ್ ಸಹಾಯ ಮಾಡುತ್ತಾರೆ. ಅಲ್ಲಿ ಕೇಳಲಾಗುವ ಒಂದೊಂದು ಪ್ರಶ್ನೆಗಳಿಗೆ ಕಲಾಕಾರರು ಅಷ್ಟೇ ಮಜವಾದ ಉತ್ತರವನ್ನು ಸಹ ನೀಡುತ್ತಿರುತ್ತಾರೆ. ಸಂಕ್ಷಿಪ್ತದಲ್ಲಿ ಹೇಳಬೇಕಾದರೆ ಇದೊಂದು ಸಂದರ್ಶನದ ಕಾರ್ಯಕ್ರಮದ ರೀತಿಯಲ್ಲಿಯೇ ಇದೆ. ಅದರ ಮಧ್ಯದಲ್ಲಿ ಕುಕಿಂಗ್ ಟ್ವಿಸ್ಟ್ ಹಾಕಲಾಗಿದೆ.