ಬೆಲೆ ಕಟ್ಟಲಾಗದಷ್ಟು ಬಂಗಾರದ ನಿಕ್ಷೇಪ ಇರುವ ಉಲ್ಕಾಶಿಲೆ ಭೂಮಿಯ ಹತ್ತಿರ ಬರುತ್ತಿದೆ: ಅದರ ಒಂದು ಸಣ್ಣ ತುಂಡಿಗೂ ಬೆಲೆ ಕಟ್ಟುವುದು ಕಷ್ಟ!
ಬ್ರಹ್ಮಾಂಡದಲ್ಲಿ ಭೂಮಿಯ ಹೊರತಾಗಿ ಅಸಂಖ್ಯಾತ ಗ್ರಹಗಳು ಇವೆ. ಅಲ್ಲದೇ ವಿಜ್ಞಾನಿಗಳು ಕೂಡಾ ಹಲವು ವರ್ಷಗಳಿಂದಲೂ ಸೌರವ್ಯೂಹದಲ್ಲಿ ನಮ್ಮ ಭೂಮಿಯ ವಾತಾವರಣದಲ್ಲಿ ಇರುವಂತೆ ನೀರು ಹಾಗೂ ಆಮ್ಲಜನಕಗಳ ಲಭ್ಯತೆ ಇರುವಂತಹ ಗ್ರಹಗಳ ಅಸ್ಥಿತ್ವವನ್ನು ಪತ್ತೆ ಹಚ್ಚುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಇದುವರೆವಿಗೂ ವಿಜ್ಞಾನಿಗಳಿಗೆ ಅವರ ಸಂಶೋಧನೆಯಲ್ಲಿ ಭೂಮಿಯಂತಹ ಮತ್ತೊಂದು ಗ್ರಹ ಸಿಕ್ಕಿಲ್ಲ ಎನ್ನುವುದು ಸತ್ಯ. ಆದಾಗ್ಯೂ ಕೂಡಾ ಅನ್ಯಗ್ರಹ ಗಳಿಗೆ ಹೋಲಿಕೆ ಮಾಡಿದರೆ ಮಂಗಳ ಗ್ರಹದ ಮೇಲೆ ಜೀವನದ ಸಾಧ್ಯತೆ ಸ್ವಲ್ಪ ಹೆಚ್ಚಾಗಿ ಇದೆ ಎಂದು ಹೇಳಲಾಗಿದೆ. ನಮ್ಮ ಬ್ರಹ್ಮಾಂಡದಲ್ಲಿ ಗ್ರಹಗಳು ಮಾತ್ರವೇ ಅಲ್ಲದೆ ಅನೇಕ ಉಲ್ಕಾಶಿಲೆ ಗಳು ಕೂಡ ತಿರುಗುತ್ತಲೇ ಇರುತ್ತದೆ.
ಈಗ ನಾಸಾ ನಮ್ಮ ಸೌರವ್ಯೂಹದಲ್ಲಿ 124 ಮೈಲಿಗಳಷ್ಟು ಅಗಲವಾಗಿರುವ ಒಂದು ಉಲ್ಕಾಶಿಲೆ ತಿರುಗಾಡುತ್ತಿದ್ದು, ಇದರ ಬೆಲೆಯು ಶತಕೋಟಿ ಮತ್ತು ಟ್ರಿಲಿಯನ್ ಗಳಿಗಿಂತಲೂ ಅಧಿಕ ಎಂದು ಹೇಳಿದೆ. ಏಕೆಂದರೆ ಈ ಕ್ಷುದ್ರ ಗ್ರಹವು ತನ್ನಲ್ಲಿ ಅನೇಕ ಅಮೂಲ್ಯವಾದ ಲೋಹಗಳನ್ನು ತುಂಬಿಕೊಂಡಿದೆ ಎನ್ನಲಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಉಲ್ಕಾಶಿಲೆ ಅಮೂಲ್ಯವಾದ ಲೋಹಗಳ ಭಂಡಾರವಾಗಿದೆ. ಅದರ ಬೆಲೆ ಸುಮಾರು 10000 ಕ್ವಾಡ್ರಿಲಿಯನ್ ಡಾಲರ್ ಗಳು ಎನ್ನಲಾಗಿದೆ. ಅಂದರೆ ಈ ಉಲ್ಕಾ ಶಿಲೆಯ ಒಂದು ಸಣ್ಣ ತುಂಡು ಕೂಡಾ ಶತಕೋಟಿ ಅಥವಾ ಟ್ರಿಲಿಯನ್ ಗಟ್ಟಲೆ ಮೌಲ್ಯವನ್ನು ಹೊಂದಿದೆ.

ವಿಜ್ಞಾನಿಗಳು ಈ ಕ್ಷುದ್ರಗ್ರಹಕ್ಕೆ Psyche 16 asteroid ಎನ್ನುವ ಹೆಸರನ್ನು ಇಟ್ಟಿದ್ದಾರೆ. ಇದು 124 ಮೈಲಿಗಳ ಅಗಲದಷ್ಟಿದ್ದು, ಇದು ಸೂರ್ಯನ ಸುತ್ತ ಸುತ್ತುವ ಉಲ್ಕಾಶಿಲೆಯಾಗಿದೆ. ಇದು ಮಂಗಳ ಮತ್ತು ಗುರು ಗ್ರಹದ ನಡುವೆ ಇದೆ ಎಂದು ತಿಳಿದುಬಂದಿದೆ. ನಾಸಾ ಚಿನ್ನದಿಂದ ತುಂಬಿರುವ ಈ ಉಲ್ಕಾ ಶಿಲೆಯ ಕುರಿತಾಗಿ ಈಗಾಗಲೇ ಒಂದು ಹೊಸ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎನ್ನಲಾಗಿದ್ದು, ಈ ಕಾರ್ಯಾಚರಣೆಯ ಅಡಿಯಲ್ಲಿ 2026 ರ ವೇಳೆಗೆ ಈ ಕ್ಷುದ್ರ ಗ್ರಹದ ಹತ್ತಿರಕ್ಕೆ ತಲುಪಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದೆ. Psyche 16 asteroid’ ಕುರಿತಾಗಿ ವಿಜ್ಞಾನಿಗಳು ಇದು ಯಾವುದೋ ಒಂದು ಗ್ರಹದ ಮುರಿದ ಭಾಗವಾಗಿದೆ ಎಂದು ಅಂದಾಜು ಮಾಡಿದ್ದಾರೆ.
2026 ರ ವೇಳೆಗೆ ಈ ಕ್ಷುದ್ರ ಗ್ರಹದ ಹತ್ತಿರಕ್ಕೆ ತಲುಪಿ ಅದರ ಅಧ್ಯಯನವನ್ನು ಮಾಡುವ ಉದ್ದೇಶವನ್ನು ನಾಸಾ ಹೊಂದಿದೆ. ಕ್ಯಾಲಿಫೋರ್ನಿಯಾದ ವಿಜ್ಞಾನಿಗಳ ತಂಡವೊಂದು ಈ ಕ್ಷುದ್ರ ಗ್ರಹದ ತಾಪಮಾನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರಿಂದ ಅದರ ಅಧ್ಯಯನವು ಮತ್ತಷ್ಟು ಸುಲಭವಾಗುತ್ತದೆ ಎನ್ನುವುದು ವಿಜ್ಞಾನಿಗಳ ವಿಚಾರವಾಗಿದೆ. Psyche 16 asteroid’ ಅನ್ನು ಮೊದಲು1852 ರಲ್ಲಿ ಕಂಡುಹಿಡಿಯಲಾಗಿತ್ತು. ಇದು ಸೌರವ್ಯೂಹದ ರಚನೆಯ ವೇಳೆಯಲ್ಲಿ ಉಂಟಾದ ಘರ್ಷ ಣೆಯ ಕಾರಣದಿಂದ ಗ್ರಹ ಒಂದರಿಂದ ಬೇರ್ಪಟ್ಟ ಭಾಗವಾಗಿದ್ದು, ಅಂದಿನಿಂದಲೂ ಸೌರವ್ಯೂಹದಲ್ಲಿ ಸುತ್ತುತ್ತಿದೆ ಎಂದು ನಂಬಲಾಗಿದೆ.