ಬೇಜಾರಾದ ಮನಸ್ಸಿಗೆ ಸಖತ್ ಜೋಕ್ಸ್ ಗಳ ಲಾಫ್ಟರ್ ಪಂಚ್ ! ನೋಡಿ, ಓದಿ ಮತ್ತು ಒಮ್ಮೆ ನಕ್ಕು ಬಿಡಿ ಬಿಂದಾಸ್ ಆಗಿ…
* ರಾತ್ರಿ ಗಂಡ-ಹೆಂಡತಿಯರಿಬ್ಬರೂ ಮಲಗಿಕೊಂಡಿರುತ್ತಾರೆ. ಹೆಂಡತಿಗೆ ಯಾಕೋ ಸ್ವಂತದ ಬಗ್ಗೆ ಗಂಡನಿಂದ ಹೊಗಳಿಸಿಕೊಳ್ಳುವ ಯೋಚನೆ ಉಂಟಾಗಿ, ನನ್ನಲ್ಲಿ ನಿಮಗೆ ಏನು ಇಷ್ಟವಾಗುತ್ತದೆ? ಎಂದು ಕೇಳುತ್ತಾಳೆ.
ಗಂಡ – ನಿನಗೆ ಸಂಬಂಧಪಟ್ಟವರೆಲ್ಲರೂ ನನಗೆ ತುಂಬಾ ಇಷ್ಟವಾಗುತ್ತಾರೆ.
ಹೆಂಡತಿ – ಅಂದರೆ?
ಗಂಡ – ಅಂದರೆ ನಿನ್ನ ತಂಗಿ, ನಿನ್ನ ಚಿಕ್ಕಮ್ಮನ ಮಗಳು, ನಿನ್ನ ಗೆಳತಿಯರಾದ ಮಧು, ನಯನಾ, ಉಷಾ, ಲತಾ ಮತ್ತು ನಿನ್ನ ನೆರೆಮನೆಯ ಶೃತಿ, ತ್ರಿಷಾ ಇವರೆಲ್ಲರೂ.
ಸದ್ಯ ಗಂಡನ ಉಪಚಾರ ಆಸ್ಪತ್ರೆಯಲ್ಲಿ ನಡೆದಿದೆ. ಮುಖ ಮತ್ತು ಮೊಳಕಾಲು ಊದಿಕೊಂಡಿವೆ.
* ಪತಿ 12 ವರ್ಷಗಳ ನಂತರ ಜೈಲಿನಿಂದ ಕೊಳೆಯಾದ ಬಟ್ಟೆಗಳಲ್ಲಿ ಸೋತು ಸುಣ್ಣವಾಗಿ ಬಸವಳಿದ ಮುಖದಲ್ಲಿ ವಾಪಸ್ ಮನೆಗೆ ಬರುತ್ತಾನೆ…
ಪತಿ ಮನೆಯಲ್ಲಿ ಹೆಜ್ಜೆ ಇಡುತ್ತಲೇ ಪತ್ನಿ ಕಿರುಚಿದಳು, ಇಷ್ಟೊತ್ತು ಎಲ್ಲಿದ್ದೀರಿ? ನಿಮಗಂತೂ ಎರಡು ಗಂಟೆಯ ಮುಂಚೆಯೇ ರಿಲೀಸ್ ಮಾಡಲಾಗಿದೆ ತಾನೇ? ಅಂದಾಗ ಇಷ್ಟೊಂದು ಲೇಟ್ ಯಾಕೆ?
ಪತ್ನಿಯ ಮಾತುಗಳನ್ನು ಕೇಳಿದ ಪತಿ ಮತ್ತೆ ಮರಳಿ ಜೈಲಿಗೆ ಸೇರಿದ…
* ಪೂಜೆಯನ್ನು ಮಾಡುವಾಗ ಪತ್ನಿ ಪತಿಗೆ ಕೇಳಿದಳು…
ಪತ್ನಿ – ನಿಮಗೆ ಆರತಿ ನೆನಪಿನಲ್ಲಿದೆ ತಾನೇ?
ಪತಿ – ಯಸ್, ಆಕೆ ತೆಳ್ಳಗಿದ್ದವಳು ತಾನೇ? ಮೇಲಿನ ಅಂತಸ್ತಿನಲ್ಲಿ ಇರುತ್ತಾಳೆ ಅವಳೇ ಅಲ್ವಾ?
ಪತ್ನಿಯ ಕೋಪ ತಾರಕಕ್ಕೆ…ದೇವರಿಗಿಂತ ಪತಿಯ ಪೊಜೆಯನ್ನೇ ಮೊದಲು ಮಾಡಿದಳು.
* ಜಗತ್ತಿನಲ್ಲಿ ಒಟ್ಟು ಎಷ್ಟು ದೇಶಗಳು ಹೇಳು? ಎಂದು ಗುರುಗಳು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ನೀಡಿದ ಭರ್ಜರಿ ಉತ್ತರ…
ವಿದ್ಯಾರ್ಥಿ – ಎನ್ ಗುರುಗಳೇ ನೀವು ಹೀಗೆ ಕೇಳ್ತೀರಾ? ಜಗತ್ತಿನಲ್ಲಿ ಇರುವದು ಒಂದೇ ದೇಶ ಅದು ನಮ್ಮ ಭಾರತ, ಉಳಿದೆಲ್ಲವುಗಳು ವಿದೇಶಗಳು.
* ಪತಿ – ಇಂದು ಅಡಿಗೆಯನ್ನು ಅತ್ತೆಮ್ಮನವರು ಮಾಡಿದ್ದಾರಾ?
ಪತ್ನಿ – ಹೌದು ಅದ್ಹೇಗೆ ಗುರುತಿಸಿ ಬಿಟ್ರಿ.
ಪತಿ – ನೀನು ಅಡುಗೆ ಮಾಡಿದರೆ ತಟ್ಟೆಯಲ್ಲಿ ಕಪ್ಪು ಕೂದಲುಗಳು ಬರುತ್ತವೆ, ಇಂದು ಬಿಳಿ ಕೂದಲುಗಳು ಬಂದಿವೆ, ಅದಕ್ಕೆ.
* ಅಳಿಮಯ್ಯ ನೀವು ಮುಂದಿನ ಜನ್ಮದಲ್ಲಿ ಏನಾಗಬೇಕೆಂದು ಬಯಸುತ್ತೀರಿ? ಎಂದು ಅತ್ತೆಯವರು ಅಳಿಯನಿಗೆ ಕೇಳುತ್ತಾರೆ.
ಅಳಿಯ – ಗೋಡೆ ಮೇಲಿನ ಹಲ್ಲಿ.
ಅತ್ತೆ – ಯಾಕೆ?
ಅಳಿಯ – ಯಾಕೆಂದ್ರೆ ನಿಮ್ಮ ಮಗಳು ಹೆದರುವುದು ಬರೀ ಹಲ್ಲಿಗೆ ಮಾತ್ರ, ಬೇರೆ ಯಾವುದಕ್ಕೂ ಹೆದರುವುದಿಲ್ಲ ಅದಕ್ಕೆ.