ಬೇಟೆಯಾಡಲು ಹೋಗಿ ತಾನೇ ಬೇಟೆಯಾಗಿದ್ದು! ಸರ್ಪಪಾಶದಲ್ಲಿ ಸಿಕ್ಕು ನಲುಗುತ್ತಿದ್ದ ಹದ್ದು; ಮುಂದೇನಾಯಿತು? ನೋಡಿ ಈ ವೈರಲ್ ವಿಡಿಯೋದಲ್ಲಿ…

ಅನೇಕ ಪ್ರಾಣಿಗಳ ಮುಖ್ಯ ಆಹಾರ ಮಾಂಸವೇ ಆಗಿದೆ. ಇದೇ ಕಾರಣದಿಂದ ಮಾಂಸಾಹಾರಿ ಪ್ರಾಣಿಗಳು ಒಂದನ್ನೊಂದು ತಿನ್ನಲು ಹೊಂಚು ಹಾಕಿ ಕುಳಿತಿರುತ್ತವೆ. ವೈಲ್ಡ್ ಲೈಫ್ ನಾವು ತಿಳಿದುಕೊಂಡಷ್ಟು ಸರಳವಾಗಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾವು ಬದುಕಿನ ಹೋರಾಟ ನಿರಂತರವಾಗಿ ನಡೆದೇ ಇರುತ್ತದೆ. ಈ ಹೋರಾಟದಲ್ಲಿ ಕೆಲವೊಮ್ಮೆ ಬೇಟೆಯಾಡುವ ಪ್ರಾಣಿಗಳೇ ಖುದ್ದು ಬೇಟೆಗೆ ಬಲಿಯಾಗುತ್ತವೆ. ಈಗ ಇದೇ ಉದಾಹರಣೆಗೆ ಹೋಲುವ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹದ್ದು ಹಾವಿನ ವೈರತ್ವ ಮೊದಲಿನಿಂದಲೂ ಎಲ್ಲರಿಗೂ ಗೊತ್ತೇ ಇದೆ. ಇದರಲ್ಲಿ ಹದ್ದು ಯಾವತ್ತೂ ಹಾವಿಗೆ ಹಾನಿಯನ್ನುಂಟು ಮಾಡುತ್ತದೆ. ಆದರೆ ಇಲ್ಲಿಯ ಹೋರಾಟ ಹದ್ದಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಹದ್ದು ಹಾವಿನ ಬೇಟೆಯೇನೋ ಆಡಿದೆ. ಆದರೆ ನಂತರ ಹದ್ದು ಹಾವಿನ ಪಾಶದಲ್ಲಿಯೇ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ಬೇಟೆ ಹದ್ದಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಸ್ವಲ್ಪ ಸಮಯವಂತೂ ಹದ್ದು ಸತ್ತೆ ಹೋಗಿದೆ ಏನ್ನುವಷ್ಟರ ಮಟ್ಟಿಗೆ ನಿಷ್ಚೇಶ್ಟಿತವಾಗಿ ನೆಲದ ಮೇಲೆ ಬಿದ್ದಿತ್ತು. ಕೊನೆಗೆ ದಾರಿಹೋಕರಲ್ಲಿ ಒಬ್ಬನು ಹದ್ದಿಗೆ ಸರ್ಪಪಾಶದಿಂದ ಬಿಡಿಸಲು ಸಹಾಯ ಮಾಡಿದ್ದಾನೆ. ಆತನ ಸಹಾಯದಿಂದ ಹದ್ದು ಬದುಕಿದೆಯಾ ಬಡ ಜೀವವೇ ಎಂದು ಅಲ್ಲಿಂದ ಜಾಗ ಖಾಲಿ ಮಾಡಿ ಆಕಾಶದಲ್ಲಿ ಹಾರಾಡುತ್ತಾ ಹೋಗಿದೆ.

ನೋಡಿ ಈ ಹದ್ದಿನ ಕಾರಿನ ಕಥೆಯ ವಿಡಿಯೋ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ nature27_12 ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ನೋಡಿದ ನೆಟಿಜನ್ಸ್ ಗಳು ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.