‘ಬೇಬಿ ಡಾಲ್’ ಹಾಡಿನ ಮುಖಾಂತರ ಮತ್ತೊಮ್ಮೆ ಧೂಳ್ ಎಬ್ಬಿಸಿದ ನಟಿ ಸನಿ ಲಿಯೊನೀ! ಡಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ!
ಬಾಲಿವುಡ್ ತಾರೆ ಸನ್ನಿ ಲಿಯೋನಿಯ ಹಾಡೊಂದು ತುಂಬಾ ಸುದ್ದಿ ಮಾಡುತ್ತಿದೆ. ಈ ಹಾಡನ್ನು ಸನ್ನಿ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಅವರು ಪರಫಾರ್ಮನ್ಸ್ ಮಾಡಿದ ‘ಬೇಬಿ ಡಾಲ್ ಸೋನೆ ಕಿ’ ಈ ಹಾಡು ರಿಲೀಸ್ ಆಗುತ್ತಿದ್ದಂತೆಯೇ ತುಂಬಾ ವೈರಲ್ ಆಗಿದೆ. ಮತ್ತು ಅವರ ಫ್ಯಾನ್ಸ್ ಗಳಲ್ಲಿ ಉತ್ಸಾಹ ಸಂಚಾರವಾಗಿದೆ, ಜೊತೆಗೆ ಅವರ ಫ್ಯಾನ್ಸ್ ಗಳಿಗೆ ತುಂಬಾ ಇಷ್ಟವೂ ಆಗಿದೆ.
ಈ ಹಾಡು 8 ನಿಮಿಷದ ಜಬರ್ದಸ್ತ ಹಾಡಾಗಿದೆ. ಈ ಹಾಡನ್ನು ಶೇರ್ ಮಾಡುತ್ತಾ ಹೀಗೆ ಹೇಳಿದ್ದಾರೆ,’ಸನ್ನಿ ಲಿಯೋನಿ ಲೈವ್ ಪಾರ್ಟ್ 1. ನೋಡಿ ನಾನು ಮರಳಿದ್ದೇನೆ, ತುಂಬಾ ಸುಂದರ ಪರ್ಫಾರ್ಮನ್ಸ್ ದೊಂದಿಗೆ, ಇದನ್ನು ಕೆಲವೇ ಗಂಟೆಗಳ ಹಿಂದೆ ಚಿತ್ರೀಕರಣ ಮಾಡಲಾಗಿದೆ. ನೀವು ನನ್ನನ್ನು ಲೈವ್ ನೋಡಿಲ್ಲ ಅಂದರೆ ಈಗ ನೋಡಿರಿ’.
ಸನ್ನಿ ಲಿಯೋನಿಯವರು ಲಾಕ್ ಡೌನ್ ಸಂದರ್ಭದಲ್ಲಿ ಅಮೆರಿಕೆಯ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ನೆಲೆಸಿದ್ದರು. ಅವರು ಅಲ್ಲಿಂದಲೇ ಸೋಶಿಯಲ್ ಮಿಡಿಯಾ ಅಕೌಂಟ್ ಗಳಲ್ಲಿ ತಮ್ಮ ವಿವಿಧ ಫೋಟೋಗಳನ್ನು ಹಾಕುತ್ತ ತಮ್ಮ ಫ್ಯಾನ್ಸ್ ಗಳ ಜೊತೆಗೆ ಸಂಪರ್ಕದಲ್ಲಿದ್ದರು. ಅವರು ಹಾಕಿದ ಫೋಟೋಗಳಿಗೆ ಫ್ಯಾನ್ಸ್ ಗಳು ತುಂಬಾ ಚೆನ್ನಾಗಿ ರಿಪ್ಲಾಯ್ ಮಾಡಿದ್ದರು.
ಈಗ ಸನ್ನಿಯವರು ಶೇರ್ ಮಾಡಿದ ಈ ಹಾಡನ್ನು ಅವರ ಫ್ಯಾನ್ಸ್ ಗಳು ತಮ್ಮ ತಲೆಯ ಮೇಲೆ ತೆಗೆದುಕೊಂಡಿದ್ದಾರೆ.