ಬೇಸಿಗೆಯ ಬಿಸಿಲಿನ ಶಾಖದಿಂದ ಬಚಾವಾಗಲು ಪುಟ್ಟ ಪುಟಾಣಿ ಆನೆಮರಿ ನೀರಿನಲ್ಲಿ ಆಡಿದ ಮುಕ್ತ ಆಟವಾದರೂ ಒಮ್ಮೆ ನೋಡಿ, ಈ ವೈರಲ್ ವಿಡಿಯೋದಲ್ಲಿ…

 

ಎಲ್ಲ ಕಾಡು ಪ್ರಾಣಿಗಳಲ್ಲಿಯೇ ಆನೆಮರಿಯು ತುಂಬಾ ತುಂಟವಾಗಿರುತ್ತದೆ. ಈ ಮರಿಗಳು ಸತತವಾಗಿ ತನ್ನ ತಾಯಿಯ ಜೊತೆಗೆ ಮತ್ತು ತಮ್ಮ ಗುಂಪಿನ ಇತರ ಸದಸ್ಯರ ಜೊತೆಗೆ ಏನಾದರೂ ಮಜಾ ಹಾಗೂ ಮಸ್ತಿ ಮಾಡುವುದನ್ನು ಎಷ್ಟೋ ವಿಡಿಯೋಗಳಲ್ಲಿ ಇದಕ್ಕಿಂತ ಮೊದಲು ನೋಡಿದ್ದೇವೆ. ಆ ರೀತಿಯ ವಿಡಿಯೋಗಳನ್ನು ನೋಡಬಯಸುವ ನೇಟಿಜನ್ಸ್ ಗಳಿಗೆ ತುಂಬಾ ಖುಷಿಯಾಗುತ್ತದೆ. ಸದ್ಯ ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಿಗೂ ಬೇಸಿಗೆಯ ಬಿಸಿಲಿನ ಶಾಖ ತಗಲುತ್ತಿದೆ. ಈ ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಅಥವಾ ಆಟ ಆಡುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದರಲ್ಲೂ ಪುಟ್ಟ ಆನೆಮರಿಗಂತೂ ಈ ಆಟ ತುಂಬಾ ಇಷ್ಟವಾಗಿರುತ್ತದೆ.

ಇಲ್ಲಿ ಇವತ್ತಿನ ವೈರಲ್ ವಿಡಿಯೋದಲ್ಲಿ ಪುಟ್ಟ ಆನೆ ಮರಿಯೊಂದು ಪೈಪ್ ನಿಂದ ಚೆಲ್ಲುತ್ತಿರುವ ನೀರಿನಲ್ಲಿ ಚೆಲ್ಲಾಟವಾಡಿದ ದೃಶ್ಯ ನೋಡಲಿದ್ದೀರಿ. ಈ ವಿಡಿಯೋ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ. ಏಕೆಂದರೆ ಈ ಪುಟಾಣಿ ಪುಟ್ಟ ಆನೆಮರಿಯ ಆಟವೇ ಹೀಗಿದೆ.

ಪ್ರಸ್ತುತ ವಿಡಿಯೋ ಎಲ್ಲಿಯದು ಎಂದು ತಿಳಿದುಬಂದಿಲ್ಲ. ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ನಲ್ಲಿ ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಝೂ ನಲ್ಲಿಯ ದೃಶ್ಯವೆಂದು ಕಂಡುಬರುತ್ತಿದೆ. ಝೂ ನಲ್ಲಿರುವ ಕೇರ್ ಟೇಕರ್ ಆನೆ ಮರಿಗೆ ಪೈಪ್ ನಿಂದ ನೀರನ್ನು ಸಿಂಪಡಿಸುತ್ತಿದ್ದಾನೆ. ಈ ನೀರಿನ ಸಿಂಚನ ಆನೆಮರಿಗೆ ತುಂಬಾ ತುಂಬಾ ತುಂಬಾನೇ ಇಷ್ಟವಾಗಿ ಅದು ನೀರಿನಲ್ಲಿ ತಾಯಿಯ ಹತ್ತಿರ ಮನಬಂದಂತೆ ಮಲಗಿ, ಎದ್ದು, ಕುಳಿತು, ಜಿಗಿದು, ಓರೆಯಾಗಿ, ಅಡ್ಡಲಾಗಿ ಹೀಗೆ ತರತರದ ಆಕ್ಷನ್ ಮಾಡುತ್ತಾ ತಣ್ಣೀರಿನ ಸುಖವನ್ನು ಪಡೆಯುತ್ತಿದೆ. ಈ ಪುಟಾಣಿ ಆನೆಮರಿಯ ಪುಟ್ಟ ಪುಟ್ಟ ಆಕ್ಟಿವಿಟಿ ನೋಡುಗರಿಗೆ ತುಂಬಾ ಇಷ್ಟವಾಗುತ್ತಿದೆ.

ವಿಡಿಯೋ ನೋಡಿ