ಬೈಕ್ ನಲ್ಲಿ ಸ್ಕಾರ್ಫ್ ಸಿಕ್ಕ ಕಾರಣ ಶರೀರದಿಂದ ಬೇರೆ ಯಾದ ಮಹಿಳೆಯ ಮುಂಡ!
ನವದೆಹಲಿ: ಮಗಳನ್ನು ಭೇಟಿ ಮಾಡಲು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಮಹಿಳೆಯೊಬ್ಬರೊಂದಿಗೆ ಇಬ್ಬರು ಯುವಕರು ದುರಂತವಾಗಿ ಸಾವನ್ನಪ್ಪಿದ್ದಾರೆ. ಮಹಿಳೆಯ ಸ್ಕಾರ್ಫ್ ಬೈಕಿನ ಚಕ್ರಗಳಲ್ಲಿ ಸಿಲುಕಿಕೊಂಡ ಕಾರಣ ಬೈಕಿನ ಹತೋಟಿ ತಪ್ಪಿ ಅದರ ಮೇಲಿಂದ ಕೆಳಗಡೆ ಬಿದ್ದು ಮಹಿಳೆಯ ಕುತ್ತಿಗೆಯನ್ನು ದೇಹದಿಂದ ಕತ್ತರಿಸಿದ ಆಘಾತಕಾರಿ ಘಟನೆ ಪಂಜಾಬ್ನ ಫರೀದ್ಕೋಟ್ ಜಿಲ್ಲೆಯಲ್ಲಿ ನಡೆದಿದೆ.
ದೊರೆತ ಮಾಹಿತಿಯ ಪ್ರಕಾರ, ಮುಕ್ತಸರ್ ರಸ್ತೆಯಲ್ಲಿ ವಾಸಿಸುವ ನೀರಜ್ ಶರ್ಮಾ ಮತ್ತು ವಿಜಯ್ ಎಂದಿನಂತೆ ತಮ್ಮ ದ್ವಿಚಕ್ರ ವಾಹನದ ಮೇಲೆ ಕೆಲಸಕ್ಕಾಗಿ ಮುಕ್ತಸರಕ್ಕೆ ಹೋಗುತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿರುವದರಿಂದ ಬಸ್ ಇಲ್ಲದ ಕಾರಣ, ವಿಜಯ್ ಪಕ್ಕದಲ್ಲಿ ವಾಸಿಸುವ ಸುಖ್ಪಾಲ್ ಕೌರ್ ಅವರು ಮುಕ್ತಸರ್ ನಲ್ಲಿ ವಾಸಿಸುವ ತಮ್ಮ ಮಗಳನ್ನು ಭೇಟಿಯಾಗಲು ದ್ವಿಚಕ್ರ ವಾಹನದ ಮೇಲೆ ಹೊರಟಿದ್ದರು. ಅಲ್ಲಿಂದ ವಾಡಾ ದಾರಕಾ ಸಮೀಪದಲ್ಲಿ ಹೋಗುತ್ತಿರುವಾಗ ಸುಖ್ಪಾಲ್ ಕೌರ್ ಅವರ ಸ್ಕಾರ್ಫ್ ಬೈಕ್ನ ಚೈನ್ ನಲ್ಲಿ ಸಿಲುಕಿಕೊಂಡಾಗ ಅವರು ಬೈಕ್ ಮೇಲಿಂದ ಕೆಳಗಡೆ ಉರುಳಿ ಬಿದ್ದರು. ಬಿದ್ದಾಗ ಅವರ ಕುತ್ತಿಗೆ ದೇಹದಿಂದ ಕತ್ತರಿಸಿ ದೂರಬಿದ್ದಿತು ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ.

ಲಾಕ್ಡೌನ ದಿಂದಾಗಿ ಬಸ್ ಇಲ್ಲದ ಕಾರಣ ಮೃತ ಮಹಿಳೆ ಮುಕ್ತಸರ್ ಗೆ ಹೋಗಲು ಪಕ್ಕದ ಮನೆಯಲ್ಲಿ ವಾಸಿಸುವ ಯುವಕನ ಜೊತೆಗೆ ತನ್ನ ಮಗಳನ್ನು ಭೇಟಿಯಾಗುವ ಸಲುವಾಗಿ ಹೊರಟಾಗ ನಡುದಾರಿಯಲ್ಲಿ ಆ ಮಹಿಳೆಯ ಸ್ಕಾರ್ಫ್ ಚೈನ್ ನಲ್ಲಿ ಸಿಕ್ಕಿದ್ದರಿಂದ ಮಹಿಳೆಯ ಮೃತ್ಯುವಾಗಿದೆ ಎಂದು ಅಲ್ಲಿಯ ತನಿಖಾ ಅಧಿಕಾರಿ ಎ ಎಸ್ ಐ ಹಕಮ್ ಸಿಂಗ್ ಅವರು ತಿಳಿಸಿದ್ದಾರೆ. ಮೃತ ಪಟ್ಟ ಮಹಿಳೆಯ ಪುತ್ರ ಜಸ್ವೀರ್ ಸಿಂಗ್ ಅವರ ಹೇಳಿಕೆಯನ್ನು ಸಿಆರ್ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.