ಬೈಕ್ ಪ್ರಿಯರಿಗಾಗಿ ಹೊಸ Pulsar 180 ಬೈಕ್ ಲಾಂಚ್ ಮಾಡಿದ ಬಜಾಜ್ ಆಟೋ: ಏನೀ ಹೊಸ ಬೈಕ್ ನ ವಿಶೇಷತೆಗಳು?
ಬೈಕ್ ಪ್ರಿಯರಿಗಾಗಿ ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಹೊಸ ಮಾದರಿಯ ಟು ವೀಲರ್ ಗಳು ಎಂಟ್ರಿ ನೀಡುತ್ತಲೇ ಇರುತ್ತವೆ. ಕೆಲವರಿಗೆ ಬೈಕ್ ಖರೀದಿ ಮಾಡುವುದು ಎಂದರೆ ಕ್ರೇಜ್. ಹಣ ಇತ್ತು ಎಂದರೆ ತಮಗಿಷ್ಟವಾದ ಬೈಕ್ ಗಳನ್ನು ಖರೀದಿ ಮಾಡಿ ಓಡಾಡುವುದು ಅವರ ಆಸಕ್ತಿಯೂ ಆಗಿರುತ್ತದೆ. ಇನ್ನೂ ಅನೇಕರಿಗೆ ಬೈಕ್ ಗಳಲ್ಲಿ ದೂರ ಪ್ರಯಾಣ ಮಾಡುವುದು ಕೂಡಾ ಒಂದು ಕ್ರೇಜ್. ಇತ್ತೀಚಿನ ದಿನಗಳಲ್ಲಿ ಬೈಕ್ ಗಳಲ್ಲಿ ಪ್ರವಾಸ ಮಾಡುವುದು ಕೂಡಾ ಯುವ ಜನರ ಒಂದು ಸಾಹಸಮಯ ಚಟುವಟಿಕೆಗಳಲ್ಲಿ ಒಂದಾಗಿದೆ. ಒಂದಷ್ಟು ಜನ ಸ್ನೇಹಿತರು ಸೇರಿಕೊಂಡು ಬೈಕ್ ಗಳಲ್ಲಿ ದೂರ ಪ್ರಯಾಣಗಳಿಗೆ ಅಣಿಯಾಗಿ ಬಿಡುತ್ತಾರೆ. ಅಂತಹ ಬೈಕ್ ಪ್ರಿಯರಿಗಾಗಿಯೇ ಈಗ ಮಾರುಕಟ್ಟೆಯನ್ನು ಪ್ರವೇಶಿಸಿದೆ ಬಜಾಜ್ ಕಂಪನಿಯ ಮೋಟಾರ್ ಸೈಕಲ್.
ಹೌದು ಬಜಾಜ್ ಆಟೋ ತನ್ನ ಬಜಾಜ್ ಪಲ್ಸರ್ 180 ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ಈ ಹೊಸ ಬೈಕ್ ಅನ್ನು 1,07.904 ರುಪಾಯಿಗಳ ದೆಹಲಿಯ ಎಕ್ಸ್ ಶೋರೂಮ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾಡೆಲ್ ನಲ್ಲಿ ಕೂಡ ಹಳೆಯ ಸ್ಟೈಲನ್ನು ಅಳವಡಿಸಲಾಗಿದೆ. ಹೊಸ ಅಪ್ಡೇಟ್ ವರ್ಷನ್ ನಲ್ಲಿ ಬಂದಿರುವ ಬಜಾಜ್ ಪಲ್ಸರ್ 180 ಎಹೆಚ್ಓ (ಆಟೋ ಹೆಡ್ಲ್ಯಾಂಪ್ ಆನ್), ಎರಡು ಪೈಲಟ್ ಲ್ಯಾಂಪ್ಗಳು ಮತ್ತು ಹೊಸ ಡೆಕಲ್ಗಳೊಂದಿಗೆ ಹೊಸ ಹೆಡ್ಲೈಟ್ ಅನ್ನು ಕೂಡಾ ಪಡೆದುಕೊಂಡಿದೆ. ಇದಲ್ಲದೆ, ಈ ಹೊಸ ಅವತರಣಿಕೆಯಲ್ಲಿ ಈ ಬೈಕ್ ಸ್ಪೋರ್ಟ್ ಸ್ಪ್ಲಿಟ್ ಸೀಟುಗಳು, ಕಪ್ಪು ಅಲಾಯ್ ವೀಲ್ಸ್ ಮತ್ತು ಇನ್ಫಿನಿಟಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಕೂಡ ಅಳವಡಿಸಿಕೊಂಡು ಬೈಕ್ ಪ್ರಿಯರ ಮುಂದೆ ಬಂದಿದೆ.
ಹಾಗಾದರೆ ಮಾರುಕಟ್ಟೆ ಪ್ರವೇಶ ಮಾಡಿರುವ ಈ ಹೊಸ ಮೋಟಾರ್ ಸೈಕಲ್ ನ ವಿಶೇಷತೆಗಳು ಏನು? ಬೇರೆ ಬೈಕ್ ಗಳಿಗಿಂತ ಇದ ಹೇಗೆ ಭಿನ್ನ? ಎನ್ನುವ ಪ್ರಶ್ನೆಗಳು ಮೂಡಿದ್ದರೆ, ಅದಕ್ಕೆ ಸವಿವರವಾಗಿ ಉತ್ತರವನ್ನು ಈ ಬೈಕ್ ನ ವಿಶೇಷತೆಗಳನ್ನು ಓದಿದಾಗ ನಿಮಗೇ ಅರ್ಥವಾಗುತ್ತದೆ. ಹಾಗಾದರೆ ಈ ಮೋಟಾರ್ ಸೈಕಲ್ ನ ವಿಶೇಷತೆಗಳು ಏನು ಎನ್ನುವುದನ್ನು ಒಂದೊಂದಾಗಿ ತಿಳಿಯೋಣ ಬನ್ನಿ.

ಎಂಜಿನ್: ಬಜಾಜ್ ಪಲ್ಸರ್ 180 ಬೈಕ್ 178.6 ಸಿಸಿ, 4-ಸ್ಟ್ರೋಕ್, ಎಸ್ಒಹೆಚ್ಸಿ 2-ವಾಲ್ವ್, ಏರ್-ಕೂಲ್ಡ್, ಬಿಎಸ್ 6 ಕಂಪ್ಲೈಂಟ್ ಡಿಟಿಎಸ್-ಐ ಫೈ ಎಂಜಿನ್ ಹೊಂದಿದೆ.
ಪ್ರದರ್ಶನ (ಪರ್ಫಾರ್ಮೆನ್ಸ್) :ಬಜಾಜ್ ಪಲ್ಸರ್ 180 ಬೈಕ್ ನ ಪರ್ಮಾರ್ಮೆನ್ಸ್ ವಿಚಾರಕ್ಕೆ ಬಂದರೆ ಇದರಲ್ಲಿ ಎಂಜಿನ್ 8500 ಆರ್ಪಿಎಂ ನಲ್ಲಿ ಗರಿಷ್ಠ 17 ಬಿಹೆಚ್ಪಿ ಮತ್ತು 6500 ಆರ್ಪಿಎಂನಲ್ಲಿ ಗರಿಷ್ಠ 14.52 ಎನ್ ಎಂ ಜನರೇಟ್ ಮಾಡುವ ಸಾಮರ್ಥ್ಯ ಹೊಂದಿದೆ.
ಟ್ರಾನ್ಸ ಮಿಷನ್: ಬಜಾಜ್ ಪಲ್ಸರ್ 180 ಬೈಕ್ ಇಂಜಿನ್ 5 ಸ್ಪೀಡ್ ಗೇರ್ ಬಾಕ್ಸನ್ನು ಹೊಂದಿದೆ.
ಡೈಮನ್ಷನ್ : ಬಜಾಜ್ ಪಲ್ಸರ್ 180 ಬೈಕ್ ನ ಉದ್ದ
2035 ಮಿಲಿಮೀಟರ್, ಅಗಲ 765 ಮಿಲಿಮೀಟರ್ ಮತ್ತು ಎತ್ತರ 1115 ಮಿಲಿಮೀಟರ್ ಗಳಾಗಿದೆ. ಇದರ ಗ್ರೌಂಡ್ ಕ್ಲಿಯರೆನ್ಸ್ 165 ಮಿಲಿಮೀಟರ್ ಇದ್ದು, ಅದೇ ಸಮಯದಲ್ಲಿ, ಅದರ ವ್ಹೀಲ್ ಬೇಸ್ 1345 ಮಿಲಿಮೀಟರ್ ಮತ್ತು ಇದರ ಸೈಡಲ್ ಹೈಟ್ 800 ಮಿಲಿಮೀಟರ್ ಆಗಿದೆ.
ಸಸ್ಪೆನ್ಷನ್: ಬಜಾಜ್ ಪಲ್ಸರ್ 180 ಮುಂಭಾಗದಲ್ಲಿ ಆ್ಯಂಟಿ ಫ್ರಿಕ್ಷನ್ ಬ್ರಶ್ ನ ಜೊತೆಗೆ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಇದು ಹಿಂಭಾಗದಲ್ಲಿ ನೈಟ್ರಾಕ್ಸ್ ಶಾ ಕ್ ನೊಂದಿಗೆ 5-ವೇ ಅಡ್ಜೆಸ್ಟಬಲ್ ಸಸ್ಪೆನ್ಷನ್ ಕೂಡಾ ನೀಡಲಾಗಿದೆ.
ಬ್ರೇಕ್ : ಬಜಾಜ್ ಪಲ್ಸರ್ 180 ಬೈಕ್ ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಅದೇ ಸಮಯದಲ್ಲಿ, ಇದು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.
ಇಂಧನ ದಕ್ಷತೆ: ಬಜಾಜ್ ಪಲ್ಸರ್ 180 15 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದರ ಕರ್ಬ್ ವೈ ಹಿಟ್ 151 ಕೆ.ಜಿ. ಆಗಿದೆ.
2019ರಲ್ಲಿ ಬಜಾಜ್ ಆಟೋ ತನ್ನ ಬಜಾಜ್ ಪಲ್ಸರ್ 180 ಮಾರಾಟವನ್ನು ನಿಲ್ಲಿಸಿಬಿಟ್ಟಿತ್ತು. ಆಗ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ 180F ಈ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಈಗ ಎರಡು ವರ್ಷಗಳ ನಂತರ ಮತ್ತೊಮ್ಮೆ ಬಜಾಜ್ ಆಟೋ ತನ್ನ ಪಲ್ಸರ್ 180 ಯನ್ನು ಮಾರುಕಟ್ಟೆಗೆ ತಂದಿದೆ. ಎರಡು ವರ್ಷಗಳ ನಂತರ ಮತ್ತೊಮ್ಮೆ ಮಾರುಕಟ್ಟೆ ಪ್ರವೇಶ ಮಾಡಿರುವ ಈ ಮೋಟಾರ್ ಸೈಕಲ್ 180 ಎಫ್ ನಲ್ಲಿ ಇರುವ ರೀತಿಯಲ್ಲೇ ಇನ್ಸ್ಟ್ರೂಮೆಂಟ್ ಕನ್ಸೋಲ್, ಡಿಜಿಟಲ್ ಪಾರ್ಟ್ ಅನಲಾಗ್ ಘಟಕದ ಜೊತೆಗೆ ಒಂದು ಸಣ್ಣ ಎಲ್ಸಿಡಿ ರೀಡ್ ಔಟ್ ಅನ್ನು ಕೂಡಾ ಹೊಂದಿರುವುದು ವಿಶೇಷವಾಗಿದೆ.