ಬೈಕ್ ಸವಾರರೇ ಹುಷಾರ್ ! ವಾಹನ ನಡೆಸುವ ಮುನ್ನ ದಿನನಿತ್ಯ ಒಮ್ಮೆ ಸರಿಯಾಗಿ ಚೆಕ್ ಮಾಡಿಕೊಳ್ಳಿ ; ಆಕ್ಟಿವಾದಲ್ಲಿ ಅವಿತು ಕುಳಿತ ಕೋಬ್ರಾ ವೀಡಿಯೋ ವೈರಲ್…

 

ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತವೆ. ಈ ವಿಡಿಯೋಗಳಿಂದ ತಮಾಷೆಯ ಜೊತೆಗೆ ವಿವಿಧ ರೀತಿಯ ಜ್ಞಾನವು ಸಿಗುತ್ತದೆ. ಹಾವಿನ ಹೆಸರು ಕೇಳಿದರೇನೇ ಭಯಪಡುವ ನಾವುಗಳು ಇನ್ನು ದಿನನಿತ್ಯ ನಾವೇ ಉಪಯೋಗಿಸುವ ಬೈಕ್ ನಲ್ಲಿಯೇ ಹಾವು ಸೇರಿ ಕುಳಿತು, ನಡೆಸುವಾಗ ಹೊರಗೆ ಬಂದರೆ ಏನು ಗತಿ ? ಈ ದೃಶ್ಯ ಕಣ್ಣುಮುಂದೆ ತಂದರೂ ಮೈಯೆಲ್ಲ ನಡುಗಿ ಬೆವತು ಬಿಡುತ್ತದೆ.

ಇಂಥದ್ದೇ ಘಟನೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಂಡುಬರುವ ಹಾಗೆ ಹೋಂಡಾ ಆಕ್ಟಿವಾ ಸ್ಕೂಟರ್ ಒಂದು ಮನೆಯ ಮುಂದೆ ನಿಂತಿದೆ. ಅದರ ಮೀರರ್ ತಾಗಿಸುವ ಹೋಲ್ ನ ಒಳಗಿನಿಂದ ಪದೇಪದೇ ಹಾವೊಂದು ಮುಖ ದರ್ಶನ ನೀಡುತ್ತಿದೆ. ಈ ದೃಶ್ಯ ನೋಡಲು ತುಂಬಾ ಭಯ ಹುಟ್ಟಿಸುವಂತಿದೆ. ಕಾರಣ ಈ ವಾಹನವನ್ನು ಹೆಚ್ಚಾಗಿ ಮಹಿಳೆಯರು, ಹುಡುಗಿಯರು ಉಪಯೋಗಿಸುತ್ತಾರೆ. ಅದಕ್ಕಾಗಿ ಮಹಿಳೆಯರಿಗೆ ವಿನಂತಿಯೇನೆಂದರೆ ವಾಹನವನ್ನು ಚಲಾಯಿಸುವ ಮೊದಲು ಬೈಕ್ ನ್ನು ಯಾವಾಗಲೂ ಒಮ್ಮೆ ದೂರಿನಿಂದಲೇ ಸರಿಯಾಗಿ ಚೆಕ್ ಮಾಡಿ ಸುರಕ್ಷಿತವೆನಿಸಿದ ನಂತರವೇ ರೈಡ್ ಮಾಡಬೇಕು.

ಏಕೆಂದರೆ, ಇಲ್ಲಿ ಹಾವು ಸ್ಕೂಟರ್ ನ ಹೆಡ್ಲೈಟ್ ಒಳಗಡೆ ಸೇರಿ ದಡಬಡಿಸಿ ಒದ್ದಾಡುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತದನಂತರ ಸರ್ಪ ಮಿತ್ರನು ತನ್ನ ಕೈಯಲ್ಲಿರುವ ಹುಕ್ ನಂತಹ ಉಪಕರಣದಿಂದ ಮಿರರ್ ತಾಗಿಸುವ ಹೋಲಿನಲ್ಲಿ ಹಾಕಿ ಅದನ್ನು ಸ್ವಲ್ಪ ಮುಂದೆ ಎಳೆಯುವಷ್ಟರಲ್ಲಿ ಕೋಬ್ರಾ ತಕ್ಷಣ ಹೆಡೆಯೆತ್ತಿ ಧುತ್ತನೆ ನಿಲ್ಲುತ್ತದೆ. ಈ ದೃಶ್ಯವು ನೋಡುಗರಿಗೆ ಒಮ್ಮೆಲೆ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Saurabh Jadhav 2110 (@rasal_viper)

ಈ ವೈರಲ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ rasal_viper ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.