‘ಬೋಳು’ ತಲೆ ಮರೆ ಮಾಚಿದ್ದ ಗಂಡ; ಮದುವೆಯ ನಂತರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಹೆಂಡತಿ!

ಮುಂಬಯಿಯ ಉಪನಗರವಾದ ಮೀರಾ ರೋಡ್ ನಲ್ಲಿ ವಿಚಿತ್ರ ಕೇಸೊಂದು ಪೊಲೀಸ್ ಸ್ಟೇಶನ್ ಮೆಟ್ಟಲೇರಿದೆ. ಪತಿಯು ತನ್ನ ತಲೆ ಬೋಳು ಇದ್ದದ್ದನ್ನು ಹೆಂಡತಿಯಿಂದ ಮರೆಮಾಚುವ ಸಲುವಾಗಿ ವಿಗ್ ಉಪಯೋಗಿಸುತ್ತಿದ್ದನು. ಇದೇ ವಿಷಯದ ಮೇಲಿಂದ ಪತ್ನಿಯು ತನ್ನ ಜೊತೆಗೆ ಮೋಸವಾಗಿದೆ ಎಂದು ಪತಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ತನ್ನ ಬೋಳು ತಲೆಯನ್ನು ಮುಚ್ಚುವದಷ್ಟೇ ಅಲ್ಲದೆ ವರದಕ್ಷಿಣೆಗಾಗಿಯೂ ಕಿರುಕುಳ ಕೊಡುತ್ತಿದ್ದಾನೆ ಎಂದು ಹೇಳಿ ತಕರಾರು ದಾಖಲಿಸಿದ್ದಾಳೆ.

ಇವರ ಮದುವೆಯಾಗಿಯು ಬಹಳ ದಿನಗಳಾಗಿಲ್ಲ. ಮೀರಾ ರೋಡಿನ ಲಕ್ಷ್ಮಿ ಪಾರ್ಕಿನಲ್ಲಿ ಇರುವ ಮೊಹಮ್ಮದ್ ಮೂರ್ತಾಜಾ ಸಯ್ಯದ (29) ಈತ ಮದುವೆಯಾದದ್ದು ಒಂದೇ ಒಂದು ತಿಂಗಳು ಮೊದಲು. ಆದರೆ ಮದುವೆಯ ನಂತರ ಗೊತ್ತಾಯಿತು ತನ್ನ ಪತಿಯ ತಲೆ ಬೊಳಾಗಿದೆ ಎಂದು. ಮತ್ತು ಇದನ್ನು ಮುಚ್ಚಿ ಕೊಳ್ಳಲು ವಿಗ್ ಉಪಯೋಗಿಸುತ್ತಾನೆ. ಇದು ಪತ್ನಿಗೆ ಯಾಕೋ ಸರಿ ಎನಿಸಿಲ್ಲ. ಕ್ರಮೇಣ ಈ ವಿಷಯದ ಮೇಲಿಂದ ಇಬ್ಬರಲ್ಲಿ ಜಗಳ ಶುರುವಾಗಿದೆ. ಆದರೆ ಮೊಹಮ್ಮದ್ ಮೂರ್ತಜಾನು ತನ್ನ ಹೆಂಡತಿಯ ಚಾರಿತ್ರ್ಯದ ಮೇಲೆ ಸಂಶಯ ತೆಗೆದುಕೊಳ್ಳಲು ಶುರು ಮಾಡಿ ಪತ್ನಿಯ ಮೊಬೈಲ್ ಮೇಲೆ ಒಂದು ಕಣ್ಣಿಟ್ಟಿದ್ದನು. ಇದಷ್ಟೇ ಸಾಲದೆಂಬಂತೆ ಗಂಡ ಮನೆಯವರೆಲ್ಲರೂ ನಿನ್ನ ತಂದೆ ತಾಯಿ ವರದಕ್ಷಿಣೆ ಕಡಿಮೆ ಕೊಟ್ಟಿದ್ದಾರೆಂದು ಹೇಳುತ್ತಾ ಕಿರುಕುಳ ಕೊಡಲು ಶುರು ಮಾಡಿದ್ದಾರೆ.

ಈ ಎಲ್ಲ ಕಷ್ಟಗಳಿಗೆ ನೊಂದು ಮಹಿಳೆಯು ಬೇಸತ್ತು ನೇರ ಪೊಲೀಸ್ ಸ್ಟೇಶನ್ ಮೆಟ್ಟಲೇರಿದ್ದಾರೆ. ಸದ್ಯ ಪತ್ನಿ ನೀಡಿದ ತಕರಾರಿನ ಮೇಲಿಂದ ಪತಿಯ ವಿರುದ್ಧ ವಿವಿಧ ದಂಡ ಸಂಹಿತೆಗಳ ಅಡಿಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.