ಬೌಲಿಗೆ ಬ್ಯಾಟ್ಸ್ಮನ್ ಶಾಟ್ ಹೊಡೆದಾಗ ನೇರವಾಗಿ ಅಂಪೈರ್ ನತ್ತ ಬಾಲ್ ಹೋಯಿತು, ಅಂಪೈರ್ ನ ಪರಸ್ಥಿತಿ ಮುಂದೇನಾಯ್ತು ನೀವೇ ವಿಡಿಯೋ ನೋಡಿ!!!

ಕ್ರಿಕೆಟ್ ಇದೊಂದು ಅಚ್ಚುಮೆಚ್ಚಿನ ಭಾರತದ ಆಟವಾಗಿದೆ. ನಮ್ಮ ರಾಷ್ಟ್ರೀಯ ಆಟ ಹಾಕಿ ಇದ್ದರೂ ಸಹ ಅದಕ್ಕೂ ಹೆಚ್ಚು ಕ್ರಿಕೆಟ್ ಆಟ ಜನಪ್ರಿಯತೆ ಪಡೆದುಕೊಂಡಿದೆ. ಮೊದಲು ಪುರುಷರ ಆಟವಾಗಿದ್ದ ಕ್ರಿಕೆಟ್ ಇಂದು ಮಹಿಳೆಯರು ಸಹ ಆಟದಲ್ಲಿ ಪ್ರಬಲರಾಗಿದ್ದರೆ. ಇಂದು ಅನೇಕ ಪ್ರಕಾರದ ಕ್ರಿಕೆಟ್ ಸರಣಿಗಳ ನಡೆಯುತ್ತವೆ. ಈ ಆಟದಲ್ಲಿ ವನ್ ಡೇ, ಟೆಸ್ಟ್, 20-20 ಹೀಗೆ ಆಟದಲ್ಲಿ ವಿವಿಧ ಪ್ರಕಾರಗಳಿವೆ. ಆದರೆ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ಎಲ್ಲಕ್ಕೂ ಹೆಚ್ಚು ಮೆಚ್ಚುಗೆ ಪಡುವ ಲೀಗ್ ಎಂದರೆ ಅದು ಐಪಿಎಲ್. ಬಿಸಿಸಿಐ ಯವರು ಪ್ರತಿವರ್ಷ ಐಪಿಎಲ್ ಸರಣಿಯನ್ನು ಆಡಿಸುತ್ತಾರೆ. ಈ ವರ್ಷವೂ ಸಹ ಸದ್ಯಕ್ಕೆ ತುಂಬಾ ಹುರಿಪಿನಲ್ಲಿ ಐಪಿಎಲ್ ನಡೆದಿದೆ ಆದರೆ ಕರುನಾಡ ಜನರ ಮನಸ್ಸಿನ ಇಚ್ಛೆಯಂತೆ ಈ ವರ್ಷವೂ ಸಹ ಬೆಂಗಳೂರು ತಂಡ ಕಪ್ ತನ್ನ ಮೂಡಿಗೇರಿಸಿಕೊಳ್ಳಲು ತುಂಬಾ ಶ್ರಮ ಪಟ್ಟರು ಸಹ ಅದು ಸಾಧ್ಯವಾಗಿಲ್ಲ. ಆದರೂ ಏನಂತೆ ಮುಂದಿನ ವರ್ಷವಾದರೂ ಕನಸ್ಸು ನನಸಾಗುತ್ತೆ ಅಂತ ಭಾವಿಸೋಣ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಸಾಧಾರಣವಾದ ಮೈದಾನದಲ್ಲಿ ಕ್ರಿಕೆಟ್ ನಡೆದಿರುತ್ತದೆ. ಬೌಲರ್ ವೇಗವಾಗಿ ಬಂದು ಬಾಲ್ ಎಸೆಯುತ್ತಾನೆ ಅಷ್ಟರಲ್ಲಿ ಬ್ಯಾಟ್ಸ್ಮನ್ ಸಹ ಅದೇ ರಭಸದಿಂದ ಬಾಲಿಗೆ ಬ್ಯಾಟ್ ತಾಗಿಸುತ್ತಾನೆ ಆಗ ಬಾಲ್ ನೇರವಾಗಿ ಅಂಪೈರ್ ನತ್ತ ಹೋಗುತ್ತದೆ. ನಾವೆಲ್ಲ ಕ್ರಿಕೆಟ್ ನಲ್ಲಿ ನೋಡಿರುತ್ತೇವೆ ಎಷ್ಟೋ ಬಾರಿ ಬ್ಯಾಟ್ಸ್ಮನ್ ಹೊಡೆದ ಶಾಟ್ ಅಂಪೈರ್ ಗೆ ತಗಲಿ ಗಾಯಗೊಂಡಿದ್ದು ನೋಡಿದ್ದೇವೆ. ಆದರೆ ಈ ವಿಡಿಯೋದಲ್ಲಿ ಸಹ ಅದೇ ತರಹ ಬಾಲ್ ಹೋಗಿ ನೇರವಾಗಿ ಹೋಗಿ ಅಂಪೈರ್ ಮಾಡಲು ನಿಂತ ವ್ಯಕ್ತಿಯ ಎದೆಯ ಭಾಗಕ್ಕೆ ತಗಲುತ್ತದೆ. ದೈವ ಕೃಪೆಯಿಂದ ಈತನ ಮುಖಕ್ಕೆ ತಗಲಿಲ್ಲ ಇಲ್ಲದಿದ್ದರೆ ಎಂಥ ಅನಾಹುತ ಆಗುತ್ತಿತ್ತು ಅಂತ ನೀವು ಸಹ ಈ ವಿಡಿಯೋ ನೋಡಿದ ಮೇಲೆ ಊಹಿಸಬಹುದು.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು sandeep_5702 ಎಂಬ ಹೆಸರಿನ ವ್ಯಕ್ತಿಯು ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಶೇರ್ ಮಾಡಿದ್ದಾನೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.