ಬ್ಯಾಂಕ್ ನೌಕರಿ ಕೊಡಲಿಲ್ಲವೆಂದು ಸ್ವಂತ ನಕಲಿ SBI ಬ್ರಾಂಚ್ ಓಪನ್ ಮಾಡಿದ ಭೂಪ!
ಕುಡಲೋರ್:- ನೆರೆಯ ತಮಿಳುನಾಡಿನ ಒಂದು ಜಿಲ್ಲೆ. ಇಲ್ಲಿ ಪೊಲೀಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಕಲಿ ಶಾಖೆಯನ್ನು ಗುರುತಿಸಿ ಬಟಾ ಬಯಲು ಮಾಡಿದ್ದಾರೆ. ಈ ಕೇಸ್ ಗೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಈ ನಕಲಿ ಶಾಖೆಯನ್ನು ಓಪನ್ ಮಾಡಿದ ಮಾಸ್ಟರ್ ಮೈಂಡ್ SBI ಬ್ಯಾಂಕಿನ ನಿವೃತ್ತ ಉದ್ಯೋಗಿಯ ಮಗನಾಗಿದ್ದಾನೆ. ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಓಪನ್ ಮಾಡಿದ ವ್ಯಕ್ತಿಯ ತಂದೆ ತಾಯಿ ಇಬ್ಬರು SBI ನಲ್ಲಿ ಮೊದಲು ನೌಕರರಾಗಿದ್ದರು.
ಇಂಡಿಯಾ ಟುಡೇ ರಿಪೋರ್ಟ್ ಪ್ರಕಾರ ಕುಡಲೋರ್ ಜಿಲ್ಲೆಯ ಪನರುತಿಯಲ್ಲಿ ಕಮಲ್ ಬಾಬು ಹೆಸರಿನ 19 ವರ್ಷದ ಯುವಕನ ಮೇಲೆ SBI ದ ನಕಲಿ ಶಾಖೆ ತೆರೆದ ಆರೋಪವಿದೆ. ಪೊಲೀಸರು ಹೇಳುವ ಪ್ರಕಾರ ಆರೋಪಿಯ ತಂದೆ ತಾಯಿ ಇಬ್ಬರು SBI ನಲ್ಲಿ ನೌಕರರಾಗಿದ್ದರು. ತಂದೆ 10 ವರ್ಷಗಳ ಮುನ್ನ ತೀರಿಕೊಂಡಿದ್ದಾರೆ, ತಾಯಿ ಎರಡು ವರ್ಷಗಳ ಹಿಂದೆ ರೀಟಾಯರ್ಡ್ ಆಗಿದ್ದಾರೆ. ಕಮಲ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆತ ತಂದೆಯ ಸ್ಥಾನದಲ್ಲಿ ನೌಕರಿ ಮಾಡಬೇಕೆಂದು ಅರ್ಜಿ ಹಾಕಿದ್ದನು. ಆದರೆ ನೌಕರಿ ಸಿಗಲಿಲ್ಲ. ಹೀಗಾಗಿ ಆತ ಸ್ವಂತದ್ದೇ ಒಂದು ಬ್ಯಾಂಕ್ ಓಪನ್ ಮಾಡಬೆಂಕೆಂಬ ನಿರ್ಣಯ ತೆಗೆದುಕೊಂಡನು. ಚಿಕ್ಕಂದಿನಿಂದ ತನ್ನ ತಾಯಿ ಮತ್ತು ತಂದೆಯ ಜೂತೆಗೆ ಬ್ಯಾಂಕಿಗೆ ಹೋಗುತ್ತಿದ್ದನು. ಈ ಕಾರಣದಿಂದ ಆತನ ಹತ್ತಿರ ಬ್ಯಾಂಕಿನ ಬಗ್ಗೆ ತುಂಬಾ ನಾಲೆಜ್ ಇತ್ತು.
ಗ್ರಾಹಕನೊಬ್ಬ ಹಳೆಯ ಬ್ರಾಂಚ್ ನಲ್ಲಿ ವಿಚಾರಿಸಿದಾಗ ಬೆಳಕಿಗೆ ಬಂತು ಪ್ರಕರಣ.
ಪೊಲೀಸರ ವರದಿಯ ಪ್ರಕಾರ, ಕಮಲ್ ಮೂರು ತಿಂಗಳು ಮೊದಲೇ ಪನರುತಿ ಬಜಾರ್ ಹೆಸರಿನಲ್ಲಿ SBI ಶಾಖೆಯನ್ನು ತೆರೆದಿದ್ದನು. SBI ಗ್ರಾಹಕನೊಬ್ಬ ಹೊಸ ಶಾಖೆಯನ್ನು ನೋಡಿ ಆತ ಹಳೆಯ ಬ್ರಾಂಚ್ ನಲ್ಲಿ ಈ ಬಗ್ಗೆ ವಿಚಾರಿಸಿದ್ದಾನೆ. ಆಗ ಹಳೆಯ ಬ್ಯಾಂಕಿನ ಮ್ಯಾನೇಜರ್ ತನ್ನ ಜೋನಲ್ ಹೆಡ್ ಜೊತೆಗೆ ಹೊಸ ಬ್ರಾಂಚ್ ಓಪನ್ ಮಾಡುತ್ತಿರುವದರ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗ ಜೋನಲ್ ಹೆಡ್ ಹೇಳಿದ್ದಾರೆ, ‘ಪನರುತಿಯಲ್ಲಿಯಂತೂ ಯಾವುದೇ ಹೊಸ ಬ್ರಾಂಚ್ ಓಪನ್ ಮಾಡುತ್ತಿಲ್ಲ.

ಆಮೇಲೆ ಮ್ಯಾನೇಜರ್ ಅವರ ಹೇಳಿಕೆಯ ನಂತರ SBI ದ ಅಧಿಕಾರಿಗಳು ನಕಲಿ ಬ್ರಾಂಚ್ ಆಫೀಸಿನಲ್ಲಿ ಹೋಗಿದ್ದಾರೆ. ಅಲ್ಲಿಯ ಆಫೀಸ್ ನೋಡಿ ದಂಗಾಗಿದ್ದಾರೆ. ಕಾರಣ ಅಲ್ಲಿ ಎಲ್ಲವೂ ಒರಿಜಿನಲ್ SBI ಬ್ಯಾಂಕ್ ತರನೇ ಇತ್ತು. ಇದೆಲ್ಲವನ್ನು ನೋಡಿ ನಂತರ ಪೊಲೀಸರಿಗೆ ಕರೆಸಿದ್ದಾರೆ.
ನಕಲಿ ಬ್ಯಾಂಕ್ ನಲ್ಲಿ ಎಲ್ಲವೂ ಅಸಲಿ ಬ್ಯಾಂಕ್ ಹಾಗೆಯೇ.
ಪೊಲೀಸರ ತನಿಖೆಯಲ್ಲಿ ಕಮಲ್ ಬಾಬು ಮತ್ತು ಆತನ ಸಹಚರ 52 ವರ್ಷದ ಮಣಿಕಮ್ ಮತ್ತು 42 ವರ್ಷ ವಯಸ್ಸಿನ ಕುಮಾರ್ ಈ ಮೂವರಿಗೆ ಅರೆಸ್ಟ್ ಮಾಡಿದ್ದಾರೆ. ತನಿಖೆಯಲ್ಲಿ ಕಮಲ್ ಬ್ಯಾಂಕ್ ಓಪನ್ ಮಾಡುವ ಬಗ್ಗೆ ಯೋಚಿಸಿದ. ಮಣಿಕಮ್ ಬ್ಯಾಂಕಿನ ಸ್ಟ್ಯಾಂಪ್ ಇತರ ಸಾಹಿತ್ಯಗಳನ್ನು ತಯಾರಿಸಿದನು. ಕುಮಾರ್ ಬ್ಯಾಂಕಿನ ಸ್ಟೇಷನರಿ, ಪಾಸ್ ಬುಕ್ ಇಂಥ ವಸ್ತುಗಳನ್ನು ತಯಾರಿಸಿದನು. ಶಾಖೆಯ ಸಲುವಾಗಿ ಕಮಲ್ ಕಂಪ್ಯೂಟರ್, ಲಾಕರ್ ಹೀಗೆ ಅನೇಕ ವಸ್ತುಗಳನ್ನು ಖರೀದಿಸಿದ್ದನು. ಜೊತೆಗೆ ಪನರುತಿ ಬಾಜಾರ ಬ್ರಾಂಚ್ ಎಂಬ ಹೆಸರಿನಿಂದ ವೆಬ್ ಸೈಟನ್ನು ತೆಗೆದಿದ್ದನು.
ಕಮಲ್ ಹೇಳಿಕೆ, ಮೋಸಕ್ಕಾಗಿ ಅಲ್ಲ, ಬ್ಯಾಂಕ್ ಓಪನ್ ಮಾಡುವದಿತ್ತು ಗುರಿ.
ಪೊಲೀಸರ ತನಿಖೆಯಲ್ಲಿ ಹೊರ ಬಂದ ವಿಷಯವೇನೆಂದರೆ, ಈ ಬ್ಯಾಂಕಿನಿಂದ ಇಲ್ಲಿಯವರೆಗೆ ಹಣದ ಯಾವುದೇ ವ್ಯವಹಾರವಾಗಿಲ್ಲ. ಹೀಗಾಗಿ ಯಾರ ಹಣವೂ ಮುಳುಗಿಲ್ಲ. ಆರೋಪಿಗಳು ಲಾಕ್ ಡೌನ್ ನಲ್ಲಿ ಶಾಖೆಯನ್ನು ಓಪನ್ ಮಾಡಿದ್ದಾರೆ. ಆದ್ದರಿಂದ ಯಾರಿಗೂ ವಿಷಯ ಗೊತ್ತಾಗುವದಿಲ್ಲ ಎಂಬ ವಿಚಾರ ಅವರದಾಗಿತ್ತು. ಆದರೆ ಕಮಲ್, ‘ಯಾರಿಗೂ ಮೋಸ ಮಾಡಿ ಹಣ ಗಳಿಸುವ ಉದ್ದೇಶ ನಮಗಿರಲಿಲ್ಲ’ ಎಂದು ಹೇಳುತ್ತಾನೆ. ಸ್ವಂತ ಬ್ಯಾಂಕ್ ಓಪನ್ ಮಾಡಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾನಂತೆ.