ಬ್ರಿಟೀಷರು ಹೊಟೇಲ್ ನಿಂದ ಹೊರ ದಬ್ಬಿದರೆಂದು, ಮುಂಬೈನ ಐಶಾರಾಮೀ ತಾಜ್ ಹೊಟೇಲನ್ನೇ ನಿರ್ಮಾಣ ಮಾಡಿದ ಭಾರತೀಯ!

ಭಾರತದ ಇತಿಹಾಸದಲ್ಲಿ ಉದ್ಯೋಗಪತಿಗಳ ಹೆಸರು ಬಂದಾಗಲೆಲ್ಲ ಪ್ರತಿಯೊಬ್ಬ ಭಾರತೀಯನು ಕೂಡಾ ಮರೆಯದೆ ನೆನಪಿಸಿಕೊಳ್ಳಬೇಕಾದ ವ್ಯಕ್ತಿ ಜಮ್ಶೆಡ್ ಟಾಟಾ. ಇಂದು ಯಾವ ಗ್ರೂಪ್ ಆಫ್ ಕಂಪನಿ ಎನ್ನುವ ಬಹುದೊಡ್ಡ ಉದ್ಯಮ ಭಾರತೀಯರ ನಂಬಿಕೆಯ ಸಂಸ್ಥೆಯಾಗಿದೆಯೋ, ಆ ಟಾಟಾ ಮನೆತನದ ಹಾಗೂ ಉದ್ಯಮ ವ್ಯವಹಾರಗಳಿಗೆ ಬುನಾದಿಯನ್ನು ಹಾಕಿದವರು ಜೆಮ್ಶಡ್ ಟಾಟಾ. ಇವರು ಹುಟ್ಟಿದ್ದು ಗುಜರಾತಿನ ನವ್ಸಾರೆ ಎಂಬಲ್ಲಿ. ಅವರ ತಂದೆ ಜೀವನವನ್ನು ಅರಸಿ ಬಾಂಬೆಗೆ ಬಂದು ಒಂದು ಸಣ್ಣ ಬ್ಯುಸಿನೆಸ್ ಆರಂಭ ಮಾಡಿದರು. ಜಮ್ಶೆಡ್ ಟಾಟಾ ಅವರು ಕೂಡ ಚಿಕ್ಕ ವಯಸ್ಸಿನಿಂದಲೇ ತಂದೆಯ ವ್ಯವಹಾರಗಳಲ್ಲಿ ಗಮನ ನೀಡಿದರು, ತನ್ನ 29ನೇ ವಯಸ್ಸಿನವರಿಗೆ ತಂದೆಯ ಜೊತೆ ಹೆಗಲು ನೀಡುತ್ತಾ ಇದ್ದರು. ಆದರೆ ಅವರ ಕನಸು ಬಹಳ ದೊಡ್ಡದಾಗಿತ್ತು.

ಅವರು ತನ್ನ 29 ನೇ ವಯಸ್ಸಿನಲ್ಲಿ 21 ಸಾವಿರ ರೂಪಾಯಿಗಳ ಬಂಡವಾಳದೊಂದಿಗೆ ಹಳೆಯ ಕಾರ್ಖಾನೆಯೊಂದನ್ನು ಕೊಂಡುಕೊಂಡು ಅದನ್ನು ಹತ್ತಿ ಮಿಲ್ ಆಗಿ ಪರಿವರ್ತಿಸಿ ಅದಕ್ಕೆ ಅಲೆಗ್ಸಾಂಡರ್ ಮಿಲ್ ಎಂದು ಹೆಸರಿಟ್ಟು ನಡೆಸಿದರು. ಎರಡು ವರ್ಷಗಳ ನಂತರ ಒಳ್ಳೆಯ ಲಾಭಕ್ಕೆ ಅದನ್ನು ಮಾರಿ, ಅನಂತರ ಆ ಹಣವನ್ನು ಬಂಡವಾಳ ಮಾಡಿಕೊಂಡು 1874 ರಲ್ಲಿ ನಾಗಪುರದಲ್ಲಿ ಹತ್ತಿ ಫ್ಯಾಕ್ಟರಿ ಆರಂಭ ಮಾಡುವ ಯೋಜನೆಯೊಂದನ್ನು ಸಿದ್ಧಪಡಿಸಿದರು. ಬಾಂಬೆ ಆಗ ಅತಿ ಹೆಚ್ಚು ಕಾಟನ್ ಮಿಲ್ ಗಳನ್ನು ಹೊಂದಿದಂತಹ ನಗರ ಆದರೆ ಟಾಟಾ ಅವರು ಮಾತ್ರ ಬಾಂಬೆ ಬದಲಾಗಿ ನಾಗಪುರವನ್ನು ಆರಿಸಿಕೊಂಡಿದ್ದರು. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳು ಇದ್ದವು, ಕಚ್ಚಾ ಸಾಮಗ್ರಿಗಳ ಪೂರೈಕೆ, ಹತ್ತಿರದಲ್ಲೇ ಇದ್ದ ರೈಲ್ವೆ ನಿಲ್ದಾಣ ಹಾಗೂ ಸಮರ್ಪಕ ನೀರಿನ ಸೌಲಭ್ಯಗಳನ್ನು ಗಮನಿಸಿಯೇ ಅವರು ತಮ್ಮ ಹತ್ತಿ ಕಾರ್ಖಾನೆಗೆ ನಾಗಪುರವನ್ನು ಆಯ್ಕೆ ಮಾಡಿದ್ದರು ಎನ್ನಲಾಗಿದೆ.

ಜಮಶೇಟ್’ಜಿ ಟಾಟಾ

ಈ ಮಿಲ್ಗೆ ಅವರು ಆಗಿನ ಸಂದರ್ಭ ಅರಿತುಕೊಂಡು ಎಂಪ್ರೆಸ್ ಮಿಲ್ ಎನ್ನುವ ಹೆಸರನ್ನು ಇಟ್ಟಿದ್ದರು. ಇದಲ್ಲದೇ ಅವರು ಭಾರತದ ಮೊದಲ ಸ್ವದೇಶಿ ಕಂಪನಿ ಸೆಂಟ್ರಲ್ ಸ್ಪಿನ್ನಿಂಗ್ ,ವೀವಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕಂಪನಿ ತೆರೆದರು. ಭಾರತೀಯರೊಬ್ಬರು ಸ್ಥಾಪಿಸಿದ ಕ ಕೀರ್ತಿ ಇವರಿಗೆ ಸೇರಿತ್ತು.ಇದರಲ್ಲಿ ಟಾಟಾ ಅವರ ಬಂಡವಾಳ ಹೂಡಿಕೆ ಹೆಚ್ಚಾಗಿದ್ದರಿಂದ ಅವರನ್ನೇ ಕಂಪನಿಯ ಎಂಡಿ ಆಗಿ ಮಾಡಲಾಗಿತ್ತು. ನಾಗ್ಪುರದಲ್ಲಿ ಫ್ಯಾಕ್ಟರಿ ಆರಂಭ ಮಾಡಿದ್ದರಿಂದ ಸ್ಥಳೀಯರಿಗೆ ಉದ್ಯೋಗ ದೊರೆತು ಜನರ ಕಣ್ಣಲ್ಲಿ ಇವರ ಬಗ್ಗೆ ಅಭಿಮಾನ ಹಾಗೂ ಗೌರವ ಮೂಡಿತ್ತು.

ಎಲ್ಲದಕ್ಕಿಂತ ಮುಖ್ಯವಾಗಿ ಟಾಟಾ ಅವರು ತಮ್ಮ ಕಂಪನಿಯಲ್ಲಿ ಯೋಗ ಮಾಡುತ್ತಿದ್ದ ಕಾರ್ಮಿಕರ ಬಗ್ಗೆ ಬಹಳ ಗಮನ ನೀಡುತ್ತಿದ್ದರಂತೆ. ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನೀಡಿದ್ದರಂತೆ,ಇವರ ಕಾರ್ಖಾನೆಯಲ್ಲಿ ಕೆಲಸದ ಅವಧಿ ಕಡಿಮೆ, ಕೆಲಸ ಮಾಡುವ ಜಾಗ ಇಕ್ಕಟ್ಟಾಗಿರಲಿಲ್ಲ, ಕಾರ್ಮಿಕರಿಗೆ ರಜೆ ಸೌಲಭ್ಯ , ಆರೋಗ್ಯ ಸಂಬಂಧಿ ಸೌಲಭ್ಯಗಳು, ನಿವೃತ್ತಿಯ ನಂತರ ಪೆನ್ಶನ್ ಸೌಲಭ್ಯಗಳನ್ನು ನೀಡಲಾಗಿತ್ತಂತೆ. ಆ ಕಾಲಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೂಡ ಕಾರ್ಮಿಕರಿಗೆ ಇಂತಹ ಸೌಲಭ್ಯಗಳನ್ನು ನೀಡಲಾಗಿರಲಿಲ್ಲ ಎನ್ನಲಾಗಿದೆ. ಅವರ ಕಂಪನಿಗಳಲ್ಲಿ ಅಳವಡಿಸಿದ್ದ ನೀತಿ-ನಿಯಮಗಳು ಆ ಕಾಲಕ್ಕಿಂತ ದಶಕಗಳಷ್ಟು ಮುಂದಿನ ಸಮಯಕ್ಕೆ ಕೂಡ ಸಮರ್ಪಕ ಎನ್ನಿಸುವಂತೆ ಎನ್ನಲಾಗಿದೆ.

ಹೋಟೆಲ್ ತಾಜ್ ಮಹಲ್ ಪ್ಯಾಲೇಸ್

ಟಾಟಾ ಅವರು ಭಾರತದಲ್ಲಿ ಒಂದು ಐಶಾರಾಮೀ ಹೊಟೇಲ್ ಸ್ಥಾಪನೆ ಮಾಡಬೇಕೆನ್ನುವ ಕಾಲದಲ್ಲೇ ಒಮ್ಮೆ ಅವರು ಐಶಾರಾಮೀ ಹೊಟೇಲ್ ಒಂದಕ್ಕೆ ಹೋದಾಗ ಬ್ರಿಟೀಷರು ಅವರನ್ನು ಅಲ್ಲಿಂದ ಹೊರಗೆ ಹೋಗುವಂತೆ ಹೇಳಿ ಅ ವ ಮಾನ ಮಾಡಿದರಂತೆ. ಆಗ ಟಾಟಾ ಅವರು ಭಾರತೀಯರಿಗಾಗಿ ಒಂದು ಐಶಾರಾಮೀ ಹೊಟೇಲ್ ನಿರ್ಮಾಣ ಮಾಡಲು ನಿರ್ಧರಿಸಿ ಸ್ಥಾಪನೆ ಮಾಡಿದ್ದೇ ಮುಂಬೈ ನ ತಾಜ್ ಮಹಲ್ ಅಥವಾ ತಾಜ್ ಹೋಟೆಲ್. ಆ ಕಾಲಕ್ಕೆ ಅದರಲ್ಲಿ ವಿದ್ಯುತ್ ಸೌಲಭ್ಯ, ಅಮೆರಿಕಲ್ ಲೈಟ್, ಜರ್ಮನ್ ಲಿಫ್ಟ್ ಗಳು ಹಾಗೂ ಬ್ರಿಟಿಷ್‌ ಶೆಫ್ ಗಳು ಇದ್ದರಂತೆ. ಯಾವುದೇ ಬ್ರಿಟಿಷ್ ಹೊಟೇಲ್ ಗಳಿಗಿಂತ ಶ್ರೀ ಮಂತಿಕೆಯಲ್ಲಿ ಇದು ಮುಂದಿತ್ತು ಎನ್ನಲಾಗಿದೆ.
ಬ್ರಿಟಿಷ್‌ ಆಡಳಿತದ ಕಾಲದಲ್ಲೇ ದೇಶದಲ್ಲಿ ಉದ್ಯಮಪತಿಯಾಗಿ ಬೆಳೆದ ಟಾಟಾ ಅವರ ಜೀವನ ಹಾಗೂ ಸಾಧನೆ ನಿಜಕ್ಕೂ ಅದ್ವಿತೀಯ.