ಭಯಪಡಿಸಲು ಬಂದ ಎಮ್ಮೆಗೆ ಭಯ ಹಿಡಿಸಿದ ಪುಟ್ಟ ನಾಯಿ: ವೀಡಿಯೋ ಶೇರ್ ಮಾಡಿ ನಾಯಿಯ ಕಾನ್ಫಿಡೆನ್ಸ್ ನೋಡಿ ಒಮ್ಮೆ ಎಂದ ಬಾಲಿವುಡ್ ನಟ
ಬಾಲಿವುಡ್ ನ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಹಾಸ್ಯ ನಟರಲ್ಲಿ ಒಬ್ಬರು ಸುನಿಲ್ ಗ್ರೋವರ್. ಇವರು ಕಪಿಲ್ ಶರ್ಮಾ ನಡೆಸಿಕೊಡುವ ಕಾಮಿಡಿ ಶೋದಲ್ಲಿ ಗುತ್ತಿ ಎನ್ನು ಸ್ತ್ರೀ ಪಾತ್ರ ಹಾಗೂ ಡಾಕ್ಟರ್ ಗುಲಾಟಿ ಎನ್ನುವ ವೈದ್ಯನ ಪಾತ್ರದಲ್ಲಿ ಮನೆ ಮಾತಾದವರು. ಅದು ಮಾತ್ರವಲ್ಲದೇ ಇದೇ ಶೋ ನಲ್ಲಿ ವಿವಿಧ ರೂಪದಲ್ಲಿ ಕಾಣಿಸಿಕೊಂಡು ಜನರನ್ನು ಹಾಸ್ಯದ ಕಡಲಿನಲ್ಲಿ ತೇಲಿಸುತ್ತಿದ್ದರು ಸುನೀಲ್ ಗ್ರೋವರ್. ಅವರ ಎಲ್ಲಾ ಪಾತ್ರಗಳಿಗಿಂತ ವಿಶೇಷವಾಗಿ ಗುತ್ತಿಯ ಪಾತ್ರವನ್ನು ಮಾತ್ರ ಜನ ಇನ್ನೂ ಮರೆತಿಲ್ಲ ಹಾಗೂ ಅದನ್ನು ಮರೆಯುವುದು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಆ ಪಾತ್ರವು ಜನಪ್ರಿಯತೆ ಪಡೆದಿದೆ. ಇಂದಿಗೂ ಕೂಡ ಅಭಿಮಾನಿಗಳು ಹಾಗೂ ಹಾಸ್ಯಪ್ರಿಯರು ಸುನಿಲ್ ಗ್ರೋವರ್ ಅವರ ಹಳೆಯ ವಿಡಿಯೋಗಳನ್ನು ನೋಡುವುದುಂಟು.
ಪ್ರಸ್ತುತ ಸುನಿಲ್ ಗ್ರೋವರ್ ಅವರು ತಮ್ಮ ಟಿವಿ ಶೋ ಗಳು, ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅಲ್ಲದೇ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡಾ ಸಾಕಷ್ಟು ಸಕ್ರಿಯವಾಗಿದ್ದಾರೆ. ಸುನಿಲ್ ಗ್ರೋವರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಫನ್ನಿ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅಂತಹ ಪ್ರಯತ್ನದ ಭಾಗವಾಗಿಯೇ ಇತ್ತೀಚೆಗೆ ಅವರು ಶೇರ್ ಮಾಡಿಕೊಂಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಸುನಿಲ್ ಗ್ರೋವರ್ ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಪುಟ್ಟ ನಾಯಿಯೊಂದು ಎಮ್ಮೆಯ ಮುಂದೆ ತನ್ನ ಸಾಹಸವನ್ನು ಪ್ರದರ್ಶನ ಮಾಡಿರುವುದನ್ನು ನಾವು ನೋಡಬಹುದು. ವಿಡಿಯೋದಲ್ಲಿ ಗಮನಿಸಿದಾಗ ಕಾಡಿನಂತಹ ಪ್ರದೇಶದಲ್ಲಿ ನಾಯಿಯೊಂದು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದೆ. ಆಗ ಹಿಂದಿನಿಂದ ಬಂದ ಎಮ್ಮೆಯೊಂದು ಆ ನಾಯಿಗೆ ಭ ಯ ಹುಟ್ಟಿಸಿದ್ದು ಮಾತ್ರವಲ್ಲದೇ ಅದನ್ನು ಅಟ್ಟಿಸಿಕೊಂಡು ಕೂಡಾ ಹೋಗಿದೆ. ಎಮ್ಮೆಯ ಅನಿರೀಕ್ಷಿತ ವರ್ತನೆ ನೋಡಿ ಮೊದಲು ಭಯಪಟ್ಟ ನಾಯಿ ಅನಂತರ ಬಹಳ ಧೈರ್ಯವಾಗಿ ಅದರ ಮೇಲೆ ತಿರುಗಿಬಿದ್ದಿದೆ.
ನಾಯಿಯು ಜೋರಾಗಿ ಬೊಗಳುತ್ತಾ ಎಮ್ಮೆಯ ಕಡೆ ಮುನ್ನುಗ್ಗಿದಾಗ ಅದನ್ನು ನೋಡಿದ ಎಮ್ಮೆಯು ಆ ನಾಯಿ ಮರಿಯನ್ನು ಕಂಡು ಭ ಯ ಪಟ್ಟು ಅಲ್ಲಿಂದ ಓಡಿ ಹೋಗುತ್ತದೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಸುನಿಲ್ ಗ್ರೋವರ್ ಅವರು ಅದರ ಶೀರ್ಷಿಕೆಯಲ್ಲಿ “ಈ ಹುಡುಗನ ಕಾನ್ಫಿಡೆನ್ಸ್ ನೋಡಿ” ಎಂದು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಹಾಗೂ ಸುನಿಲ್ ಅವರ ಅಭಿಮಾನಿಗಳು ಭರ್ಜರಿಯಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಸುನಿಲ್ ಗ್ರೋವರ್ ಹಂಚಿಕೊಂಡ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರ ವೀಕ್ಷಣೆಯನ್ನು ಮಾಡಿದ್ದು ಅನೇಕರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಮತ್ತು ಮೆಚ್ಚುಗೆ ಸೂಚಿಸಿದ್ದಾರೆ.
ವೀಡಿಯೋ ನೋಡಿ
ನಟ ಸುನಿಲ್ ಗ್ರೋವರ್ ಅವರ ಬಗ್ಗೆ ಹೇಳುವುದಾದರೆ ಅವರು ಕಳೆದ ವರ್ಷ ಭಾರತ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ತನ್ನ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸುವ ಮೂಲಕ ಅವರು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಫಲರಾಗಿದ್ದರು. ಭಾರತ್ ಸಿನಿಮಾಕ್ಕಿಂತ ಮೊದಲು ಅವರ ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ನಟನೆಯ ಭಾಘ ಸಿನಿಮಾದಲ್ಲಿ ಕೂಡ ಒಂದು ಪಾತ್ರವನ್ನು ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಅಕ್ಷಯ್ ಕುಮಾರ್ ಅವರ ನಟನೆಯ ಗಬ್ಬರ್ ಇಸ್ ಬ್ಯಾಕ್ ಸಿನಿಮಾದಲ್ಲಿ ಕೂಡ ಸುನಿಲ್ ಗ್ರೋವರ್ ನಟಿಸಿದ್ದಾರೆ. ಸುನಿಲ್ ಅವರು ಒಬ್ಬ ಪ್ರಚಂಡ ಹಾಸ್ಯನಟನಾಗಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ವಿಡಿಯೋಗಳ ಮೂಲಕ ಕೂಡ ತಮ್ಮ ಅಭಿಮಾನಿಗಳನ್ನು ಸದಾ ರಂಜಿಸುತ್ತಲೇ ಇರುತ್ತಾರೆ.