ಭರ್ಜರಿ ಜಾಬ್ ಆಫರ್! ನಾಯಿಯನ್ನು ಸುತ್ತಾಡಿಸಲು ಸಂಬಳ ವಾರ್ಷಿಕ 29 ಲಕ್ಷ, ನಿವೃತ್ತಿಯ ನಂತರ ಪೆನ್ಶನ್ ಕೂಡ!
ಲಂಡನ್:- ಮಾಡುವವರಿಗೆ ಕೆಲಸಗಳು ಬೆಟ್ಟದಷ್ಟಿರುತ್ತವೆ. ಕೆಲಸ ಯಾವುದೇ ಇರಲಿ ತಾನು ಮಾಡುವ ಕೆಲಸದಲ್ಲಿ ಶೃದ್ಧೆ ಮತ್ತು ಕೆಲಸ ಮಾಡುವಂತ ಮನೋಭಾವವಿದ್ದರೆ ವ್ಯಕ್ತಿಯು ಸಮಾಧಾನವಾಗಿರುತ್ತಾನೆ. ಈ ಡಿಜಿಟಲ್ ಯುಗದಲ್ಲಿ ದಿನಂಪ್ರತಿ ಅನೇಕ ಪ್ರಕಾರದ ಹೊಸ ಹೊಸ ವಿನೂತನ ಕೆಲಸಗಳು ಹುಟ್ಟಿಕೊಳ್ಳುತ್ತಿವೆ. ಈಗ ಈ ಅಂಕಣದಲ್ಲಿ ನಾವು ಹೇಳುತ್ತಿರುವ ಕೆಲಸವು ಇದೇ ರೀತಿಯ ಹೊಸದಾದ ಕೆಲಸ ಮತ್ತು ಅದಕ್ಕಾಗಿ ದೊರೆಯುವ ಸಂಬಳವೂ ತುಂಬಾ ಆಕರ್ಷಕವಾಗಿದೆ. ನೋಡಿ ಏನಿದೆ….
ಪ್ರಾಣಿಗಳನ್ನು ಪ್ರೀತಿಸುವ ಮತ್ತು ಅವುಗಳನ್ನು ಇಷ್ಟ ಪಡುವವರಿಗಾಗಿ ಈ ಕೆಲಸ ಹೇಳಿ ಮಾಡಿಸಿದಂತಿದೆ. ಲಂಡನ್ ನಲ್ಲಿಯ ಜೋಸೆಫ್ ಹೆಗ್ ಅರಾನ್ಸನ್’ ಹೆಸರಿನ ಲಾ ಫರ್ಮ ನಾಯಿಗಳಿಗೆ ಸುತ್ತಾಡಿಸುವ ಸಲುವಾಗಿ ವೃತ್ತಿಪರ ವ್ಯಕ್ತಿಗಳಿಗೆ ನೌಕರಿಗಾಗಿ ಆವ್ಹಾನಿಸಿದ್ದಾರೆ. ಇಂಥ ಈ ಸುಂದರ ನೌಕರಿ ಲಂಡನ್ ನಿವಾಸಿಗಳಿಗೆ ಸುರ್ಣವಕಾಶವನ್ನು ನೀಡಿದೆ. ಹೇಳಿ ದಿನವೆಲ್ಲ ನಾಯಿಯನ್ನು ಸುತ್ತಾಡಿಸಿದ ಮೇಲೆ ಭರ್ಜರಿ ಸಂಬಳದ ಜೊತೆಗೆ ಪಿಂಚಣಿಯನ್ನು ಯಾರು ಕೊಡುತ್ತಾರೆ ಹೇಳಿ?

ಈ ನೌಕರಿಗಾಗಿ ಆಯ್ಕೆಯಾದವರು ದಿನಪೂರ್ತಿ ಡೆಸ್ಕ್ ಹತ್ತಿರ ಇರಬೇಕು. ನಾಯಿಯ ಕಾಳಜಿಯನ್ನು ತೆಗೆದುಕೊಳ್ಳುವುದೇ ಆತನ ಮುಖ್ಯ ಕೆಲಸ. ಈ ಕೆಲಸಕ್ಕಾಗಿ ವರ್ಷಕ್ಕೆ 30 ಸಾವಿರ ಪೌಂಡ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 28.95 ಲಕ್ಷ ರೂಪಾಯಿಗಳು. ಜೊತೆಗೆ ಪಿಂಚಣಿಯನ್ನು ಸಹಿತ ಕೊಡಲಾಗುತ್ತದೆಯಂತೆ. ಇಷ್ಟೆಲ್ಲಾ ಸೌಲಭ್ಯಗಳೊಂದಿಗೆ ಜೀವ ವಿಮೆ ಮತ್ತು ಖಾಸಗಿ ದಂತ ವಿಮೆಯನ್ನು ನೀಡಲಾಗುವದು.
ಲಂಡನ್ ನಲ್ಲಿ ಮೊದಲು ಸಹ ಈ ರೀತಿಯ ಕೆಲಸಗಳ ಜಾಹೀರಾತುಗಳು ಮೀಡಿಯಾಗಳಲ್ಲಿ ಕಾಣಿಸಿವೆ. ನಾಯಿಟ್ಸ್ ಬ್ರಿಜ್ ನಲ್ಲಿರುವ ದಾಂಪತ್ಯವು ತಮ್ಮ ಎರಡು ನಾಯಿಗಳ ಕಾಳಜಿ ವಹಿಸಲು ಅರ್ಹ ವ್ಯಕ್ತಿ ಬೇಕಾಗಿದ್ದಾರೆ ಎಂದು ಜಾಹೀರಾತು ಕೊಟ್ಟಿದ್ದರು. ಅವರು ತಮ್ಮ ಎರಡು ನಾಯಿಗಳಾದ ಮಿಲೋ ಮತ್ತು ಆಸ್ಕರ್ ಇವುಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಲಕ್ಷಾವಧೀ ರೂಪಾಯಿಗಳ ಸಂಬಳದ ಆಫರ್ ಕೊಟ್ಟಿದ್ದರು.

ನಿಖರವಾಗಿ ಡ್ಯೂಟಿ ಮಾಡುವದೇನಿರುತ್ತೆ?
ಪ್ರಾಮಾಣಿಕ ಹಾಗೂ ಕಷ್ಟಪಟ್ಟು ದುಡಿಯುವ ಕೇರ್ ಟೇಕರ್ ಬೇಕು. ಅವುಗಳಿಗೆ ಸರಿಯಾಗಿ ಸ್ನಾನ ಮಾಡಿಸುವುದು. ಯಾವತ್ತು ಸ್ವಚ್ಛತೆಯಿಂದ ಇಡುವುದು. ನಾಯಿಗಳು ತೊಟ್ಟುಕೊಳ್ಳುವ ಬಟ್ಟೆಗಳನ್ನು ತೊಳೆದು ಸ್ವಚ್ಛವಾಗಿಡುವದು. ಸಾಯಂಕಾಲದ ಸಮಯದಲ್ಲಿ ಒಪ್ಪಿಸಿರುವ ನಾಯಿಗಳನ್ನು ಸುತ್ತಾಡಿಸಲು ಕರೆದೊಯ್ಯುವದು. ಮತ್ತು ನಿಯಮಿತವಾಗಿ ಆ ನಾಯಿಗಳ ತಪಾಸಣೆಯನ್ನು ಮಾಡಿಸುವುದು. ಹೀಗೆ ಅವುಗಳಿಗೆ ಸಂಬಂಧಪಟ್ಟ ಇನ್ನಿತರ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮತ್ತು ಅಷ್ಟೇ ಜಾಣತನದಿಂದ ನಿಭಾಯಿಸುವುದು ಆ ವ್ಯಕ್ತಿಯ ಜವಾಬ್ದಾರಿಯಾಗಿದೆ.