ಭರ್ಜರಿ ವೇಗದಲ್ಲಿ ಸುತ್ತುತ್ತಿರುವ ಫ್ಯಾನ್ ಕೈಯಿಂದ ನಿಲ್ಲಿಸಿದನು ಹಠಾತ್ತನೆ! ಈ ವಿಡಿಯೋ ನೋಡಿ ನಿಮಗೂ ವಿಶ್ವಾಸ ಕೂಡಲಿಕ್ಕಿಲ್ಲ!
ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಜನರು ಯಾವ ಯಾವ ಲೆವೆಲ್ ಗೆ ಹೋಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅದರಲ್ಲೂ ಯುವ ವರ್ಗದವರಂತೂ ಊಹಿಸಲು ಕಷ್ಟ ಅಂತ ಅತಿರೇಕಗಳನ್ನು ಮಾಡಿದ್ದು ವಿಡಿಯೋಗಳಲ್ಲಿ ದಿನಬೆಳಗಾದರೆ ನೋಡುತ್ತೇವೆ. ಈಗ ತರುಣನೊಬ್ಬ ಜೋರಾಗಿ ತಿರುಗುತ್ತಿರುವ ಫ್ಯಾನ್ ನ್ನು ಕ್ಷಣಾರ್ಧದಲ್ಲಿ ನಿಲ್ಲಿಸಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯತ್ನಿಸಿದ್ದಾನೆ. ಈತ ಮಾಡಿದ ಕೃತಿ ಸ್ವಲ್ಪ ಭಯವೂ ಹುಟ್ಟಿಸುತ್ತದೆ.
ವಿಡಿಯೋದಲ್ಲಿ ಕಾಣುವ ಹಾಗೆ ಯುವಕನೊಬ್ಬ ತಿರುಗುತ್ತಿರುವ ಫ್ಯಾನಿನ ಕೆಳಗೆ ಅದನ್ನೇ ದೃಷ್ಟಿಸುತ್ತ ನಿಂತಿದ್ದಾನೆ. ತದನಂತರ ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ಒಂದೇ ಕೈಯಿಂದ ತಿರುಗುತ್ತಿರುವ ಫ್ಯಾನಿನ ಬ್ಲೇಡ್ ನ್ನು ಹಿಡಿದು ಹಠಾತ್ತನೆ ನಿಲ್ಲಿಸಿ ಬಿಡುತ್ತಾನೆ. ಆತ ಫ್ಯಾನ್ ನಿಲ್ಲಿಸಿದ ಈ ಬಗೆಯನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯವನ್ನು ಮಾಡಿದ್ದಾರೆ. ಈ ರೀತಿಯ ಸ್ಟಂಟ್ ಮಾಡುವದು ನಿಜಕ್ಕೂ ಅಪಾಯದ್ದಾಗಿದೆ. ವಿಡಿಯೋ ನೋಡಿದ ಕೆಲವರು ಈ ವಿಡಿಯೋ ಫೇಕ್ ಆಗಿದೆ ಎಂದು ಕಾಮೆಂಟ್ ಮಾಡಿದರೆ ಇನ್ನು ಕೆಲವರು ಪ್ರಸ್ತುತ ವಿಡಿಯೋ ರಿವರ್ಸ್ ವಿಡಿಯೋ ಇದೆ ಎಂದು ಹೇಳುತ್ತಿದ್ದಾರೆ.
ವಿಡಿಯೋ ನೋಡಿ
ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಸುದ್ದಿ ನೀಡುವವರೆಗೆ ಈ ವೀಡಿಯೋವನ್ನು ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. ಸುಮಾರು 1 ಮಿಲಿಯನ್ ಗಿಂತಲೂ ಹೆಚ್ಚು ಜನ ನೇಟಿಜನ್ಸ್ ಗಳು ವಿಡಿಯೋಗೆ ಲೈಕ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು kavimani_143_8 ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಒಟ್ಟಿನಲ್ಲಿ ಈತ ಮಾಡಿದ ಈ ಕೆಲಸವನ್ನು ನೋಡಿ ನೆಟ್ಟಿಗರು ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಆದರೆ ದಯವಿಟ್ಟು ನೀವೂ ಮಾತ್ರ ಈ ಪ್ರಯತ್ನಕ್ಕೆ ಇಳಿಯಬೇಡಿ.
.