ಭಾರತಕ್ಕೆ ಭೇಟಿ ನೀಡಲು ಬಂದಾಗ ಹಣ ಮುಗಿದಿದ್ದರಿಂದ PUC ಪಾಸ್ ಹುಡುಗನ ಜೊತೆ ಮದುವೆಯಾದ ವಿದೇಶಿ ಹುಡುಗಿ! ಅನಂತರ ಹುಡುಗಿ…
ಪ್ರೀತಿ ಅಂಕುರಿಸಿದರೆ ಸಾಕು, ಮುಂದಿನದು ಯಾವುದು ಕಾಣುವದಿಲ್ಲ. ಈ ಪ್ರೀತಿಯೇ ಹಾಗೆ. ಇದಕ್ಕೆ ಯಾವುದೇ ಗಡಿಯಿಲ್ಲ, ಭಾಷೆ ಬರಬೇಕಿಲ್ಲ, ಜಾತಿ ಮತ ಪಂಥವಂತೂ ತುಂಬಾ ದೂರದ ಮಾತು.
ಇಲ್ಲಿ ಹೇಳುತ್ತಿರುವ ಲವ್ ಸ್ಟೋರಿಯೂ ಹಾಗೆಯೇ ಇದೆ. ಅಮೆರಿಕಾದ ವಾಷಿಂಗ್ಟನ್ ನಿಂದ ಮೇರಿ ಹೆಸರಿನ ಮಹಿಳೆಯೊಬ್ಬಳು ಭಾರತದ ಪ್ರವಾಸಕ್ಕಾಗಿ ಬಂದಿದ್ದಳು. ಅವಳು ಇಲ್ಲಿಗೆ ಬಂದು ಮೊದಲು ಚಂಬಾ ಜಿಲ್ಲೆಯ ಹಿಮಾಚಲ್ ಪ್ರದೇಶದ ಡಾಲ್ ಹೌಸಿ ಸ್ಥಳಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ಹೋದಾಗ ಮೇರಿಗೆ ಕೆಲವು ಅನಾನುಕೂಲತೆಗಳಿಗೆ ಎದುರಾಗಬೇಕಾಯಿತು. ಒಂದು ಭಾರತ ಏನೂ ಗೊತ್ತಿರದ ಅಪರಿಚಿತ ಸ್ಥಳ, ಭಾಷೆಯೂ ಬೇರೆ, ಜೊತೆಯಲ್ಲಿ ಯಾರೂ ಇಲ್ಲ, ಮುಖ್ಯವಾಗಿ ಇರುವದಕ್ಕಾಗಿ ಯಾವ ವ್ಯವಸ್ಥೆಯೂ ಇಲ್ಲದೆ ಚಿಂತಾಕ್ರಾಂತಳಾಗಿ ಒಂದು ಸ್ಥಳದಲ್ಲಿ ಜೋಲು ಮುಖಮಾಡಿ ಅಸ್ವಸ್ಥಳಾಗಿ ಕುಳಿತಿದ್ದಳು. ಆಗ ಅದೇ ದಾರಿಯಿಂದ ಪೃಥ್ವಿ ಸಿಂಹ ಹೆಸರಿನ ಯುವಕನೊಬ್ಬ ಹೋಗುತ್ತಿದ್ದ. ಆತನ ದೃಷ್ಟಿ ಅವಳ ಮೇಲೆ ಬಿದ್ದಾಗ ಆಕೆಯ ರೋಸಿ ಹೋದ ಮುಖ ನೋಡಿ ಹರುಕ ಮುರುಕ ಇಂಗ್ಲಿಷ್ ನಲ್ಲಿ ಮಾತನಾಡಿಸಿದ. ಮತ್ತು ಆಕೆಯ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ. ಆನಂತರ ಪೃಥ್ವಿಯು ಮೇರಿಯ ಇರುವ ವ್ಯವಸ್ಥೆಯನ್ನು ಒಂದು ಹೋಟೆಲ್ ನಲ್ಲಿ ಮಾಡಿಸಿದ. ಅದಾದ ನಂತರ ಪೃಥ್ವಿಯು ಆಕೆಗೆ ಡಾಲ್ ಹೌಸಿ ಎಲ್ಲವನ್ನು ಚೆನ್ನಾಗಿ ಸುತ್ತಾಡಿಸಿದ. ಪೃಥ್ವಿಯ ವಿದ್ಯಾಭ್ಯಾಸ ಬರೀ PUC ವರೆಗೆ ಆಗಿತ್ತು. ಹೀಗಾಗಿ ಆತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಮತ್ತು ಉಳಿದ ಸಮಯದಲ್ಲಿ ಮಕ್ಕಳಿಗೆ ಕರಾಟೆ ಕ್ಲಾಸ ತೆಗೆದುಕೊಳ್ಳುತ್ತಿದ್ದ. ಆತನ ಆರ್ಥಿಕ ಪರಿಸ್ಥಿತಿಯೂ ಸಹಿತ ಹೇಳಿಕೊಳ್ಳುವ ಹಾಗೆ ಇರಲಿಲ್ಲ.

ಆದರೂ ಆತ ತೋರಿದ ವಿಶ್ವಾಸ ಮತ್ತು ಸ್ನೇಹ ಮೇರಿಯ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಮುಂದೆ ಒಂದು ದಿನ ಮೇರಿ ಪೃಥ್ವಿಗೆ ಮದುವೆಯ ಪ್ರಸ್ತಾಪವನ್ನಿಟ್ಟಳು. ಅದರ ಪ್ರಕಾರ ಪೃಥ್ವಿಯೂ ಸಹಿತ ಖುಷಿಯಿಂದ ಒಪ್ಪಿಕೊಂಡು ರಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು.
ಮೊದಮೊದಲು ಪೃಥ್ವಿಗೆ ಇಂಗ್ಲಿಷ್ ಭಾಷೆಯಿಂದಾಗಿ ತುಂಬಾ ಸಮಸ್ಯೆಯಾಯಿತು. ನಂತರ ಎಲ್ಲವೂ ಸರಿ ಹೋಯಿತು.

ಮೇರಿ ಹೇಳುವ ಹಾಗೆ ಭಾರತದವರು ತುಂಬಾ ಒಳ್ಳೆಯವರು. ಇಲ್ಲಿಯ ಹುಡುಗರು ಒಮ್ಮೆ ಮದುವೆಯಾದರೆ ಸಂಗಾತಿಯನ್ನು ಕೊನೆಯವರೆಗೆ ಕೈ ಬಿಡುವದಿಲ್ಲ. ಭಾರತೀಯರಲ್ಲಿ ಪ್ರಾಮಾಣಿಕತೆ ತುಂಬಾ ಇದೆ. ಆದ್ದರಿಂದಲೇ ವಿದೇಶಿ ಹುಡುಗಿಯರು ಭಾರತೀಯ ಹುಡುಗರನ್ನು ಇಷ್ಟ ಪಡುತ್ತಾರೆ.