ಭಾರತದ ಕರೆನ್ಸಿಯನ್ನು ಪಾಕಿಸ್ತಾನದಲ್ಲಿ ಬಳಸಿದ ವ್ಯಕ್ತಿ: ಅಲ್ಲಿನ ಜನರ ಪ್ರತಿಕ್ರಿಯೆ ನೋಡಿ ಆಶ್ಚರ್ಯ ಪಟ್ಟ ನೆಟ್ಟಿಗರು, ವೀಡಿಯೋ ವೈರಲ್
ಭಾರತ ಮತ್ತು ಪಾಕಿಸ್ತಾನ ಎಂದೊಡನೆ ಎರಡು ದೇಶಗಳ ನಡುವಿನ ಸಂಬಂಧದ ಕುರಿತಾಗಿ ನಾವು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಭಾರತ ಮತ್ತು ಪಾಕ್ ನಡುವಿನ ರಾಜಕೀಯ ವೈಷಮ್ಯ ದಶಕಗಳಿಂದ ನಡೆದು ಬರುತ್ತಿದೆ. ಆದರೆ ಆರ್ಥಿಕವಾಗಿ ನೋಡಿದಾಗ ಪಾಕಿಸ್ತಾನವು ಭಾರತ ಕ್ಕಿಂತ ಹಿಂದೆ ಉಳಿದಿರುವುದು ವಾಸ್ತವ ಹಾಗೂ ಅಲ್ಲಿ ಸಮಸ್ಯೆಗಳು ಕೂಡಾ ಹೇಳ ತೀರದಷ್ಟು ಇದೆ. ಆರ್ಥಿಕತೆಯಲ್ಲಿ ಹಿಂದುಳಿದಿರುವ ಕಾರಣದಿಂದಲೇ ಭಾರತದ ಕರೆನ್ಸಿ ಪಾಕಿಸ್ತಾನದ ಕರೆನ್ಸಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಭಾರತದ ಕರೆನ್ಸಿಯನ್ನು ಪಾಕಿಸ್ತಾನದಲ್ಲಿ ಚಲಾವಣೆ ಮಾಡುವ ಪ್ರಯತ್ನ ಮಾಡಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು ಯೂಟ್ಯೂಬರ್ ಒಬ್ಬರು ಸಾಮಾಜಿಕ ಪ್ರಯೋಗದ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಭಾರತದ ಕರೆನ್ಸಿಯನ್ನು ವ್ಯಾಪಾರಿಗಳಿಗೆ ಕೊಡುವ ಪ್ರಯತ್ನವನ್ನು ಮಾಡಿದ್ದು , ಆ ಸಂದರ್ಭದಲ್ಲಿ ಅಲ್ಲಿನ ವ್ಯಾಪಾರಿಗಳು ಹಾಗೂ ಜನರು ಎಂತಹ ಪ್ರತಿಕ್ರಿಯೆಗಳನ್ನು ನೀಡುತ್ತಾರೆ ಎನ್ನುವುದನ್ನು ಸಂಗ್ರಹಿಸುವ ಕೆಲಸವನ್ನು ಮಾಡಿದ್ದಾರೆ. ಕರೆನ್ಸಿ ವಿಚಾರ ಮಾತ್ರವೇ ಅಲ್ಲದೇ ಅಲ್ಲಿನ ಜನರನ್ನು ಅವರು ಭಾರತ ಹಾಗೂ ಭಾರತೀಯರ ಬಗ್ಗೆ ಪ್ರಶ್ನೆಯನ್ನು ಮಾಡಿದ್ದಾರೆ. ಆ ಮೂಲಕ ಅಲ್ಲಿನ ಜನರು ಭಾರತದ ಬಗ್ಗೆ ಏನು ಹೇಳುವರು, ಅವರ ಅಭಿಪ್ರಾಯವಗಳೇನು ಎನ್ನುವುದನ್ನು ಸಹಾ ಜನರ ಮುಂದೆ ತಂದಿದ್ದಾರೆ.
ಯೂಟ್ಯೂಬರ್ ರಸ್ತೆ ಬದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಬಳಿ ಹೋಗವರು ಅಲ್ಲಿ ಅವರು ಹಣ್ಣುಗಳನ್ನು ಬೆಲೆ ಕೇಳಿ ಅವರಿಂದ ಹಣ್ಣನ್ನು ಖರೀದಿ ಮಾಡುವರು. ಹಣ್ಣನ್ನು ಖರೀದಿ ಮಾಡಿದ ನಂತರ ಅವರು ಪಾಕಿಸ್ತಾನದ ಕರೆನ್ಸಿಯ ಬದಲು ಭಾರತದ ಹಣವನ್ನು ನೀಡುತ್ತಾರೆ. ಆಗ ಕೂಡಲೇ ಕೆಲವು ವ್ಯಾಪಾರಿಗಳು ಅದು ತಮ್ಮ ದೇಶದ ಕರೆನ್ಸಿಯಲ್ಲ ಭಾರತದ್ದು ಎಂದು ಗುರ್ತಿಸುತ್ತಾರೆ. ಕೆಲವರು ಅದೇ ಹಣವನ್ನು ಇಟ್ಟುಕೊಳ್ಳುವ ಆಸಕ್ತಿಯನ್ನು ತೋರಿಸುತ್ತಾರೆ. ಆದರೆ ಒಂದು ಕಡೆ ಮಾತ್ರ ವ್ಯಾಪಾರಿ ಮತ್ತು ಅಲ್ಲದ್ದ ಜನರು ಯೂಟ್ಯೂಬರ್ ಗೆ ಈ ಹಣ ತೋರಿಸಬೇಡ, ಜೈಲಿಗೆ ಹೋಗಬೇಕಾಗುತ್ತೆ ಎಂದು ಭ ಯವನ್ನು ಹೊರಹಾಕುತ್ತಾರೆ.
ಆದರೆ ಬಹುತೇಕ ವ್ಯಾಪಾರಿಗಳು ಆ ಹಣದ ಮೌಲ್ಯ ಅವರ ಹಣಕ್ಕಿಂತ ಅಧಿಕ ಇರುವುದರಿಂದ ಅದನ್ನು ಬದಲಾಯಿಸಿಕೊಳ್ಳಬಹುದೆನ್ನುವ ಉದ್ದೇಶದಿಂದ ತೆಗೆದುಕೊಳ್ಳುತ್ತಾರೆ. ಭಾರತ ಮತ್ತು ಇಲ್ಲಿನ ಜನರ ಬಗ್ಗೆ ಕೇಳಿದಾಗ ಅವರು ಒಳ್ಳೆಯ ಅಭಿಪ್ರಾಯವನ್ನು ಹಂಚಿಕೊಳ್ಳವುದನ್ನು ನಾವು ಗಮನಿಸಬಹುದಾಗಿದೆ. ಇನ್ನು ಅನಂತರ ಯೂಟ್ಯೂಬರ್ ತಾನು ವೀಡಿಯೋ ಮಾಡುವ ಸಲುವಾಗಿ ಅವರಿಗೆ ಆ ಹಣ ನೀಡಿದ್ದಾಗಿ, ಇದೊಂದು ಸಾಮಾಜಿಕ ಪರಿಸ್ಥಿತಿಯ ಪ್ರಯೋಗ ಮಾಡುವ ಸಲುವಾಗಿ ಮಾಡಿದ ವೀಡಿಯೋ ಎಂಬ ನಿಜವಾದ ವಿಷಯವನ್ನು ಹೇಳಿ ಅವರಿಗೆ ಅವರ ದೇಶದ ಕರೆನ್ಸಿಯನ್ನು ನೀಡುತ್ತಾರೆ.
ವಿಡಿಯೋ ನೋಡಿ
ಈ ವೈರಲ್ ವೀಡಿಯೋವನ್ನು ಈಗಾಗಲೇ ಎಂಬತ್ತೊಂದು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಎರಡು ಲಕ್ಷಕ್ಕಿಂತಲೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದರೆ, ಹತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಕಾಮೆಂಟ್ ಗಳನ್ನು ಮಾಡಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಹಳಷ್ಟು ಜನರು ದೇಶಗಳ ಹೆಸರಿನಲ್ಲಿ ದ್ವೇಷ ಇದೆ ಆದರೆ ಜನರ ನಡುವೆ ಅಲ್ಲ ಎಂದಿದ್ದಾರೆ. ಇನ್ನೂ ಕೆಲವರು ಭಾರತದ ಹೆಸರನ್ನು ಪಾಕಿಸ್ತಾನದ ಜನರು ಗೌರವದಿಂದ ಹೇಳಿರುವುದು ನೋಡಿ ಭಾರತ ಎಂದಿಗೂ ಮಹಾನ್ ಎಂದು ಹೇಳಿದ್ದಾರೆ. ಈ ತರಹದ ವೀಡಿಯೋ ಇನ್ನಷ್ಟು ಬರಲಿ ಎಂದು ಹೇಳಿದ್ದಾರೆ.