ಭಾರತದ ಮೂರು ದುಬಾರಿ ಮದುವೆಗಳು ಇವು: ನೀರಿನಂತೆ ಹಣವನ್ನು ಹರಿಸಲಾಗಿತ್ತು ಎಂದರೆ ನಂಬಲೇಬೇಕು

ಮದುವೆಗಳು ಎಂಬುದು ಭಾರತೀಯ ಸಂಸ್ಕೃತಿಯ ಒಂದು ಪ್ರಮುಖವಾದ ಭಾಗವಾಗಿದೆ. ಹೆಣ್ಣಿಗೇ ಆಗಲೀ ಅಥವಾ ಗಂಡಿಗೇ ಆಗಲೀ ಮದುವೆ ಎಂಬುದು ಒಂದು ಮಧುರವಾದ ನೆನಪು. ಆದ ಕಾರಣ ಪ್ರತಿಯೊಬ್ಬರೂ ಕೂಡಾ ತಮ್ಮ ಮದುವೆಯು ಬಹಳ ವಿಜೃಂಭಣೆಯಿಂದ ನಡೆಯಬೇಕೆಂದು ಆಸೆಪಡುತ್ತಾರೆ, ಕನಸು ಕಾಣುತ್ತಾರೆ. ಆದರೆ ವಾಸ್ತವವಾಗಿ ಇಂತಹ ವಿಜೃಂಭಣೆಯ ಮದುವೆಗಳಿಗೆ ಆಸೆ ಇದ್ದರೆ ಸಾಲದು, ಅದರ ಜೊತೆಗೆ ಜೇಬು ತುಂಬಾ ಹಣ ಕೂಡ ಇರಬೇಕು. ಸಾಮಾನ್ಯ ಜನರಿಗಂತೂ ಐಷಾರಾಮಿ ಮದುವೆ ಕೇವಲ ಕನಸಾಗಿರುತ್ತದೆ. ಆದರೆ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಮನೆಗಳಲ್ಲಿ ಇಂತಹ ದುಬಾರಿ ಮದುವೆಗಳ ದೊಡ್ಡ ಸಂಭ್ರಮವೇ ನಡೆಯುತ್ತದೆ. ಇಂತಹ ಮದುವೆಗಳಲ್ಲಿ ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಇಂದು ಅಂತಹ ಮೂರು ಬಹಳ ದುಬಾರಿ ಹಾಗೂ ವಿಜೃಂಭಣೆಯಿಂದ ನಡೆದ ವಿವಾಹಗಳ ಬಗ್ಗೆ ತಿಳಿಯೋಣ.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿವಾಹ:

90 ರ ದಶಕದಲ್ಲಿ ಬಾಲಿವುಡ್ ತಾರೆಯರ ಪಟ್ಟಿಯಲ್ಲಿ ಸೂಪರ್ ಸ್ಟಾರ್ ಆಗಿ ಮರೆಯುತ್ತಿದ್ದ, ಚಿತ್ರನಟಿ ಶಿಲ್ಪಾ ಶೆಟ್ಟಿ. ಬಾಲಿವುಡ್ ನಲ್ಲಿ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಶಿಲ್ಪಶೆಟ್ಟಿ ಅವರದು. ಈ ನಟಿ 2009 ರಲ್ಲಿ ಭಾರತೀಯನಾದ, ಯಶಸ್ವಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ರಾಜ್ ಕುಂದ್ರಾ ಅವರು ಭಾರತೀಯರೇ ಆದರೂ ಅವರ ಹೆಚ್ಚಿನ ವ್ಯವಹಾರಗಳು ಹಾಗೂ ಉದ್ಯಮವು ನಡೆಯುವುದು ಬ್ರಿಟನ್ ನಲ್ಲಿ. ಬ್ರಿಟನ್ ನ ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನು ಪಡೆದಿದ್ದ ವ್ಯಕ್ತಿ ರಾಜ್ ಕುಂದ್ರಾ. ಇವರು ಶಿಲ್ಪಾಶೆಟ್ಟಿಯನ್ನು ಮದುವೆಯಾಗಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದರು.

ಶಿಲ್ಪಾ ಶೆಟ್ಟಿ ಅವರ ಮದುವೆಯಯಲ್ಲಿ ಅವರ ಮಂಟಪಕ್ಕೆ ಮಾತ್ರವಲ್ಲದೆ, ಶಿಲ್ಪ ಶೆಟ್ಟಿ ಧರಿಸಿದ್ದ ವಜ್ರದ ಹಾಗೂ ನೀಲಮಣಿಗಳ ಅಭರಣಗಳು ಕೂಡಾ ಬಹುಕೋಟಿ ಮೌಲ್ಯವನ್ನು ಹೊಂದಿತ್ತು. ಶಿಲ್ಪಾ ಶೆಟ್ಟಿ ಅವರು ತಮ್ಮ ಮದುವೆಯಲ್ಲಿ ಧರಿಸಿದ್ದ ಉಂಗುರದ ಬೆಲೆಯೇ ಸುಮಾರು 5 ಕೋಟಿ ರೂಪಾಯಿಗಳು ಎನ್ನಲಾಗಿದೆ. ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿ ಅವರೊಡನೆ ತನ್ನ ವಿವಾಹವನ್ನು ಎಂದೂ ಮರೆಯಲಾಗದ ಸುಮಧರು ನೆನಪನ್ನಾಗಿ ಮಾಡಲು ಒಟ್ಟು 50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು ಎನ್ನಲಾಗಿದೆ.

ಮಲ್ಲಿಕಾ ಮತ್ತು ಸಿದ್ಧಾರ್ಥ್ ರೆಡ್ಡಿ ವಿವಾಹ:


2011ರಲ್ಲಿ ನಡೆದ ಮಲ್ಲಿಕಾ ಹಾಗೂ ಸಿದ್ದಾರ್ಥ್ ರೆಡ್ಡಿ ಅವರ ವಿವಾಹ ಭಾರತದ ದುಬಾರಿ ವಿವಾಹಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಮಲ್ಲಿಕಾ ರೆಡ್ಡಿ ಜಿವಿಕೆ ಗ್ರೂಪ್ ಮಾಲೀಕರಾದ ಕೃಷ್ಣಾ ರೆಡ್ಡಿ ಅವರ ಮೊಮ್ಮಗಳಾದರೆ, ಇದೇ ವೇಳೆ ರೆಡ್ ಸಿದ್ದಾರ್ಥ್ ರೆಡ್ಡಿ ಇಂದು ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮಾಲೀಕರಾದ ಇಂದ್ರಿ ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಪುತ್ರ. ಬಹಳ ವಿಜೃಂಭಣೆಯ ಈ ಮದುವೆಗೆ ಸುಮಾರು ಐದು ಸಾವಿರ ಜನರಿಗೆ ಆಹ್ವಾನವನ್ನು ನೀಡಲಾಗಿತ್ತು ಎನ್ನಲಾಗಿದೆ. ಮದುವೆಗೆ ಸಿನಿಮಾ ರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಆಹ್ವಾನಿತರಾಗಿದ್ದರು. ಹೈದರಾಬಾದ್ ನಲ್ಲಿ ನಡೆದ ಈ ಮದುವೆಗೆ ನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು ಎನ್ನಲಾಗಿದೆ.

ಸುಬ್ರತೋ ರಾಯ್ ಅವರ ಮಕ್ಕಳ ವಿವಾಹ:


ದುಬಾರಿ ವಿವಾಹಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದು ಸಹಾರಾ ಇಂಡಿಯಾ ಗ್ರೂಪ್ ಮಾಲಿಕರಾದ ಸುಬ್ರತೋ ರಾಯ್ ಅವರ ಇಬ್ಬರು ಗಂಡು ಮಕ್ಕಳ ವಿವಾಹ. ಅವರು ತಮ್ಮ ಇಬ್ಬರು ಮಕ್ಕಳ ವಿವಾಹವನ್ನು ಒಂದೇ ಮಂಟಪದಲ್ಲಿ ಮಾಡಿದ್ದರು. ಇನ್ನಿ ಈ ವಿವಾಹ ಭಾರತದಲ್ಲಿ ನಡೆದಿರುವ ವಿವಾಹಗಳಲ್ಲಿ ಅತ್ಯಂತ ದುಬಾರಿ ವಿವಾಹ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಈ ಮದುವೆಗೆ ಖರ್ಚಾದ ಹಣ ಬರೋಬ್ಬರಿ 552 ಕೋಟಿ ರೂಪಾಯಿಗಳು ಎನ್ನಲಾಗಿದೆ.