ಭಾರತೀಯ ಸೈನ್ಯದಲ್ಲಿ ಭರ್ತಿಯಾಗಲೇ ಬೇಕೆಂಬ ಹಠ! ದಿನವೆಲ್ಲ ದುಡಿದು ಮಧ್ಯರಾತ್ರಿ ರಸ್ತೆಯ ಮೇಲೆ ಓಡುವ ಹುಡುಗನ ವಿಡಿಯೋ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹದಿ ಹರೆಯದ ಯುವಕನೊಬ್ಬನ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ನಿರ್ದೇಶಕ ಮತ್ತು ನಿರ್ಮಾಪಕರಾದ ವಿನೋದ್ ಕಾಪ್ರಿ ಅವರು ರವಿವಾರ ರಾತ್ರಿ ತಮ್ಮ ಟ್ವಿಟರ್ ಅಕೌಂಟ್ ನಿಂದ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರದೀಪ್ ಮೇಹರಾ ಹೆಸರಿನ ಯುವಕನೊಬ್ಬ ರಸ್ತೆಯ ಮೇಲೆ ಓಡುತ್ತಿರುವುದು ಕಂಡು ಬರುತ್ತಿದೆ. ವಿನೋದ್ ಕಾಪರಿ ಮಧ್ಯ ರಾತ್ರಿಯ ಹೊತ್ತಿನಲ್ಲಿ ತಮ್ಮ ವಾಹನದಿಂದ ಪ್ರವಾಸಿಸುತ್ತಿರುವಾಗ ಈ ಓಡುವ ಹುಡುಗನನ್ನು ರಸ್ತೆಯ ಮೇಲೆ ನೋಡಿದ್ದಾರೆ. ಆಗ ಪ್ರದೀಪ್ ಅವರು ರಸ್ತೆಯ ಮೇಲೆ ಓಡುತ್ತಿರುವ ಆ ಹುಡುಗನಿಗೆ ನನ್ನ ಗಾಡಿಯಲ್ಲಿ ಕುಳಿತುಕೊ ಎಂದು ವಿನಂತಿಸಿದ್ದಾರೆ. ಆಗ ಆ ಹುಡುಗನು ಅದಕ್ಕೆ ನಿರಾಕರಿಸಿದ್ದಾನೆ. ಇದೇ ಸಮಯದಲ್ಲಿ ಇಬ್ಬರಲ್ಲಿ ನಡೆದ ಆ ಸಂಭಾಷಣೆಯ ಆಶ್ಚರ್ಯ ಮತ್ತು ಹೆಮ್ಮೆ ಪಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಈ ಹುಡುಗ ಉದರ ನಿರ್ವಾಹಕ್ಕಾಗಿ ದಿನಪೂರ್ತಿ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ ಭಾರತೀಯ ಸೈನ್ಯದಲ್ಲಿ ಭರ್ತಿಯಾಗಬೇಕೆಂಬ ಮಹದಾಸೆಯಿದೆ. ಅದಕ್ಕಾಗಿ ಶಾರೀರಿಕ ವ್ಯಾಯಾಮ ಮಾಡುವ ಸಲುವಾಗಿ ದಿನಪೂರ್ತಿ ಸಮಯ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಪ್ರದೀಪನು ಮಧ್ಯರಾತ್ರಿಯ ನಂತರ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಹೋಟೆಲಿನಿಂದ ಮನೆಯವರೆಗೆ ಸುಮಾರು ಹತ್ತು ಕಿಲೋಮೀಟರ್ ಅಂತರ ದಿನನಿತ್ಯ ಓಡುತ್ತಾ ಬರುತ್ತಾನೆ. ಈ ವಿಡಿಯೋ ಶೂಟ್ ಮಾಡುವ ಸಂದರ್ಭದಲ್ಲಿ ವಿನೋದ್ ಅವರು ತಮ್ಮ ವಾಹನದ ಮುಖಾಂತರ ಡ್ರಾಪ್ ನೀಡುವ ಸಲುವಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಸಂದರ್ಭದಲ್ಲಿ ಹುಡುಗನು ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದಾಗ ಹುಡುಗನ ನಿಜವಾದ ಪರಿಸ್ಥಿತಿಯ ಬಗ್ಗೆ ಗೊತ್ತಾಗಿದೆ. ಆತ ದಿನಾಲು ಮುಂಜಾನೆ ಎದ್ದು ಮನೆಯಲ್ಲಿ ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಾನೆ. ಹೀಗಾಗಿ ಮುಂಜಾನೆ ರನ್ನಿಂಗ್ ಮಾಡಲು ಸಮಯ ಸಿಗುವುದಿಲ್ಲವೆಂದು ಹೇಳುತ್ತಾನೆ.

ಇನ್ನೊಂದು ದುಃಖದ ಸಂಗತಿ ಏನೆಂದರೆ ಪ್ರದೀಪನ ತಾಯಿ ಆಸ್ಪತ್ರೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಪ್ರದೀಪನಿಗೆ ರಾತ್ರಿ ಮನೆಗೆ ಹೋದ ನಂತರ ತಾಯಿ ಮತ್ತು ಅಣ್ಣನಿಗಾಗಿ ಅಡುಗೆಯನ್ನು ಸಹ ಮಾಡಬೇಕಾಗುತ್ತದೆ. ವಿನೋದ್ ಅವರು ತಮ್ಮ ಮನೆಗೆ ಪ್ರದೀಪನಿಗೆ ಊಟಕ್ಕೆ ಆಮಂತ್ರಿಸಿದಾಗ, ನಾನು ಮನೆಗೆ ಹೋಗದಿದ್ದರೆ ನನ್ನ ಅಣ್ಣ ಉಪವಾಸವಿರಬೇಕಾಗುತ್ತದೆ. ಯಾಕೆಂದರೆ ಆತ ನೈಟ್ ಶಿಫ್ಟ್ ನಲ್ಲಿ ಕೆಲಸಕ್ಕೆ ಹೋಗುತ್ತಾನೆ. ಆತನಿಗೆ ರಾತ್ರಿ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ನಡೆದ ಕೆಲವೇ ನಿಮಿಷಗಳ ಹಿಂದಿ ಮಾತುಕತೆ ಮನಕಲಕುವಂತೆ ಮತ್ತು ಅದಮ್ಯ ಪ್ರೇರಣೆಯನ್ನು ನೀಡುವ ಹಾಗಿದೆ.

ನಾನೇನು ತಪ್ಪು ನಡೆಯುತ್ತಿಲ್ಲ…

ಈ ವಿಡಿಯೋವನ್ನು ಶೂಟ್ ಮಾಡುವಾಗ ವಿನೋದ್ ಅವರು, ನಿನ್ನ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದಾಗ, ಪ್ರದೀಪನು ಅದೇಗೆ ವೈರಲ್ ಆಗುತ್ತದೆ? ನನ್ನನ್ನು ಯಾರು ಗುರುತಿಸುವುದೇ ಇಲ್ಲ, ಮತ್ತು ವಿಡಿಯೋ ವೈರಲ್ ಆದರೆ ಆಯ್ತು ನಾನೇನು ತಪ್ಪು ಮಾಡುತ್ತಿಲ್ಲವಲ್ಲ ಎಂದಿದ್ದಾನೆ.

ವಿಡಿಯೋ ನೋಡಿ