ಭಾರತೀಯ ಸೈನ್ಯ ನೋಡುತ್ತಲೇ ಉಗ್ರರು ಶುರು ಮಾಡಿದರು, ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್! ಘೋಷಣೆ!!

ಶ್ರೀನಗರ, Kupwada Encounter: ಸೋಶಿಯಲ್ ಮಿಡಿಯಾದಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ಮಾಡುವ ಪಾಕಿ ಆತಂಕಿಗಳ ಎದುರು ಎಂಟೆದೆ ಬಂಟರಾದ ನಮ್ಮ ಸೈನಿಕರು ಒಮ್ಮೆಲೇ ಪ್ರತ್ಯಕ್ಷರಾದಾಗ ಒಮ್ಮೆಲೇ ಗರಬಡಿದವರಂತಾಗಿ ಮೂರು ಜನ ಉಗ್ರರು ಏನು ಮಾಡಬೇಕೆಂದು ತೋಚದೇನೆ ಹೆದರಿಕೊಂಡು ‘ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್’ ಘೋಷಣೆ ಮೊಳಗಿಸಲು ಪ್ರಾರಂಭಿಸಿದರು. ಈ ಮೂವರು ಉಗ್ರರನ್ನು ಗುರುವಾರ ಮುಂಜಾವು ಕಾಶ್ಮೀರದ ಕುಪವಾಡಾ ಜಿಲ್ಲೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಭಾರತೀಯ ಸುರಕ್ಷಾ ಬಲದವರು ಇವರ ಹಿಂದಿನ ಕಾರಣಕರ್ತರನ್ನು ಶೋಧಿಸುತ್ತಿದೆ.

ಉಗ್ರ ಸಂಘಟನೆಗಳ ಅಂಡರ್ ಗ್ರೌಂಡ್ ವರ್ಕರ್ ಗಳು ಕಾಶ್ಮೀರದಲ್ಲಿ ಮೊದಲಿನಿಂದಲೂ ಯುವಜನತೆಯ ದಾರಿಯನ್ನು ತಪ್ಪಿಸಿ ಅವರನ್ನು ಪುಸಲಾಯಿಸಿ ಭಯೋತ್ಪಾದನೆಯ ಸುಳಿಯಲ್ಲಿ ಸಿಲುಕಿಸುವ ಕಾರ್ಯವನ್ನು ಮಾಡುತ್ತಲೇ ಬಂದಿವೆ.

ಹೀಗಾಗಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು 200 ಯುವಕರು ಜಿಹಾದಿಯ ತತ್ವ ಮತ್ತು ದುಷ್ಪ್ರಚಾರದ ಜಾಲದಲ್ಲಿ ಸಿಲುಕಿ ಉಗ್ರರಾಗಿದ್ದಾರೆ. ಭಾರತೀಯ ಸುರಕ್ಷಾ ಬಲವು ಇಂಥ ಯುವಕರನ್ನು ಮುಖ್ಯಪ್ರವಾಹದಲ್ಲಿ ತರಲು ನಿರಂತರ ಹೋರಾಟ ನಡೆಸುತ್ತಿದೆ. ಇದರಿಂದ ಅಲ್ಲಿಯ ಚಿತ್ರ ಬದಲಾಗಲು ಸಾಧ್ಯವಾಗುತ್ತಿದೆ. ಈಗ ಪಾಕಪ್ರೇಮಿ ತತ್ವಗಳು ಕಾಶ್ಮೀರದ ದಕ್ಷಿಣ ಭಾಗವನ್ನು ಬಿಟ್ಟು ಉತ್ತರದ ಕಡೆಗೆ ತಮ್ಮ ಗಮನ ಹರಿಸಿದ್ದಾರೆ. ಗುರುವಾರ ಸಿಕ್ಕಿಬಿದ್ದ ಮೂವರು ಉಗ್ರರು ಕಾಶ್ಮೀರದಲ್ಲಿ ಮತ್ತೆ ತಮ್ಮ ಜಾಲವನ್ನು ಬೀಸುತ್ತಿದ್ದರು.

ಸಿಕ್ಕಿಬಿದ್ದ ಈ ಮೂವರು ಉಗ್ರರು ಕೆಲವೇ ದಿನಗಳ ಹಿಂದೆ ತಮ್ಮ ಮನೆಯನ್ನು ತೊರೆದಿದ್ದರು. ಕುಟುಂಬದವರು ಪೊಲೀಸರಿಗೆ ಮತ್ತು ಸಮೀಪದ ಸೈನ್ಯ ಶಿಬಿರಕ್ಕೆ ಮಾಹಿತಿ ಕೊಟ್ಟು ತಮ್ಮ ಮಕ್ಕಳ ಸುರಕ್ಷಿತ ವಾಪಸಾತಿಗೆ ಮನವಿ ಮಾಡಿದ್ದರು. ಮೂವರ ಪತ್ತೆ ಹಚ್ಚುವದಕ್ಕಾಗಿ ಒಂದು ಅಭಿಯಾನವನ್ನು ನಡೆಸಿದ್ದರು, ಆದರೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಬುಧವಾರದ ದಿನ ಮಾತ್ರ ಈ ಯುವಕರ ಕೆಲವು ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದವು. ಇದೆ ಫೋಟೋಗಳ ಜಾಡನ್ನು ಹಿಡಿದು ಪೊಲೀಸ್ ಮತ್ತು ಸೈನ್ಯದವರು ಕೂಡಿ ಇವರನ್ನು ಹಿಡಿಯುವ ಪ್ಲಾನ್ ಹಾಕಿದರು.

ಇವರನ್ನು ಅಹಮದ್ ವಾಣಿ, ಜಾಕಿರ್ ಅಹಮದ್ ಬಟ್, ಜಾವೇದ್ ಅಹಮದ್ ಡಾರ್ ರೂಪದಲ್ಲಿ ಗುರುತಿಸಲಾಗಿತ್ತು. ಜಾವೇದ್ ಕುಪವಾಡಾ ಪಟ್ಟಣದವನಾಗಿದ್ದು ಇನ್ನಿಬ್ಬರು ಲಾಲ್ ಪುರಾ ಶಹಾಗುಂಡ ಕ್ಷೇತ್ರದವರಾಗಿದ್ದರು.

ಜೀವ ಸಹಿತ ಹಿಡಿಯುವ ಉದ್ದೇಶವಾಗಿತ್ತು;

SSP ಕುಪವಾಡಾ ಅಂಬಾರಕರ್ ಶ್ರೀರಾಮ್ ಅವರ ಹೇಳಿಕೆ ಪ್ರಕಾರ ಮೂವರು ಲಷ್ಕರ್ ನಲ್ಲಿ ಶಾಮೀಲಾಗಿದ್ದರು. ಗುರುವಾರ ಮುಂಜಾವಿನ ಸಮಯದಲ್ಲಿ ಗುನ್ ಬುನ್ ಗುಜ್ಜರಪಟ್ಟಿ ಹೆಸರಿನ ಭಾಗದಲ್ಲಿ ಪೊಲೀಸ್ ಮತ್ತು ಸೇನೆಯ ಸಂಯುಕ್ತ ಕಾರ್ಯಾಚರಣೆಯಲ್ಲಿ ಈ ಮೂವರು ಉಗ್ರರು ಅಡಗಿದ ಸ್ಥಳ ಪತ್ತೆಯಾಗಿತ್ತು. ನಂತರ ಆ ಪ್ರದೇಶವನ್ನು ಸುತ್ತುವರೆದಾಗ ಅವರು ಫಾಯರಿಂಗ್ ಮಾಡಿದ್ದಾರೆ. ಅದಕ್ಕೆ ಪ್ರತ್ತ್ಯುತ್ತರವಾಗಿ ಸೇನೆ ಸಹಿತ ಅವರ ಮೇಲೆ ದಾಳಿ ಮಾಡಿದೆ. ಸೇನೆ ಮತ್ತು ಪೊಲೀಸ್ ಪೂರ್ವ ನಿಯೋಜನೆಯ ಪ್ರಕಾರ ಅವರಿಗೆ ಯಾವುದೇ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಹಿಡಿಯುವ ವಿಚಾರವಿತ್ತು. ಯಾವ ಸಂದರ್ಭದಲ್ಲಿ ಉಗ್ರರಿಗೆ ಮನದಟ್ಟಾಯಿತೋ ನಾವಿನ್ನು ಬದುಕಲು ಸಾಧ್ಯವಿಲ್ಲವೆಂದು ಆವಾಗಲೇ ‘ಹಿಂದೂಸ್ತಾನ್ ಜಿಂದಾಬಾದ್ ಪಾಕಿಸ್ತಾನ್ ಮುರ್ದಾಬಾದ್’ ಎಂಬ ಘೋಷಣೆಯನ್ನು ಕೂಗಲು ಪ್ರಾರಂಭಿಸಿದರು. ಜೊತೆಗೆ ಆತ್ಮಸಮರ್ಪಣೆಯನ್ನು ಮಾಡಿದರು. ಅಷ್ಟರಲ್ಲೇ ಅವರಿಗೆ ಎಲ್ಲವೂ ತಿಳಿದು ಹೋಗಿತ್ತು, ನಾವು ಯಾವ ದಾರಿಯಲ್ಲಿ ನಡೆಯುತ್ತಿದ್ದೇವೆ ಆ ದಾರಿ ಸ್ಮಶಾನದ ಕಡೆಗೆ ಕೊಂಡೊಯ್ಯುವ ದಾರಿ ಅಂತ ತಿಳಿದಿತ್ತು. ಅವರ ಹತ್ತಿರ ಮೂರು ಅಸಾಲ್ಟ್ ರೈಫಲ್, 6 ಮ್ಯಾಗಜಿನ್, ಮತ್ತು ಅನ್ಯ ವಸ್ತುಗಳು ದೊರಕಿವೆ.