ಭಾರತ-ಪಾಕಿಸ್ತಾನ ಮತ್ತೆ ಕ್ರಿಕೆಟ್ ಸಮರ…ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಬಾರಿ ಹಣಾಹಣಿ!
ಭಾರತ ಪಾಕಿಸ್ತಾನ ಮಧ್ಯದ ಕ್ರಿಕೆಟ್ ಪಂದ್ಯವನ್ನು ನೋಡಲು ಕ್ರಿಕೆಟ್ ರಸಿಕರು ಯಾವತ್ತೂ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ಕೆಲವೇ ದಿನಗಳ ಹಿಂದೆ t-20 ವರ್ಲ್ಡ್ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರು ಬದುರಾಗಿದ್ದವು. ಈ ಪಂದ್ಯವನ್ನು ಪಾಕಿಸ್ತಾನ 10 ವಿಕೆಟ್ ಗಳ ಅಂತರದಿಂದ ಗೆದ್ದು ಬೀಗಿತು. ಕ್ರಿಕೆಟ್ ರಸಿಕರಿಗೆ ಈಗ ಈ ಎರಡು ದೇಶಗಳ ನಡುವೆ ಮತ್ತೆ ಯಾವಾಗ ಕ್ರಿಕೆಟ್ ಆಟ ನಡೆಯುತ್ತದೆ ಎಂಬ ಬಗ್ಗೆ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಬರುವ ದಿನಗಳಲ್ಲಿ ಈ ಎರಡು ದೇಶಗಳ ನಡುವೆ ಒಂದಲ್ಲ, ಎರಡಲ್ಲ ನಾಲ್ಕು ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.

ಯಾವಾಗ ಅಂತೀರಾ?
ಮುಂದಿನ ವರ್ಷ ಅಂದರೆ 2022 ರಲ್ಲಿ ಶ್ರೀಲಂಕಾದಲ್ಲಿ ಏಷಿಯಾ ಕಪ್ ಆಯೋಜನೆಯಾಗಲಿದೆ. ಇಲ್ಲಿ ಭಾರತ-ಪಾಕ್ ಹಣಾಹಣಿ ನೋಡಲು ಸಿಗಲಿದೆ. ಇನ್ನು ಎರಡು ವರ್ಷಗಳಲ್ಲಿ ಅಂದರೆ 2023 ರ ಏಷಿಯಾ ಕಪ್ ಆಯೋಜನೆಯ ಜವಾಬ್ದಾರಿಯನ್ನು ಏಷಿಯಾ ಕ್ರಿಕೆಟ್ ಕೌನ್ಸಿಲ್ ಮೀಟಿಂಗ್ ನಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದೆ. ಜಯ್ ಶಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮೀಟಿಂಗ್ ನಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಪಾಕಿಸ್ತಾನ ಇನ್ನು ತಮ್ಮ ಪಂದ್ಯಗಳನ್ನು ನ್ಯೂಟ್ರಲ್ ಪ್ಲೇಸ್ ನಲ್ಲಿ ಆಡದೆ ತಮ್ಮ ದೇಶದಲ್ಲಿಯೇ ಆಡುವ ನಿರ್ಣಯ ತೆಗೆದುಕೊಂಡಿದೆ. ಏಷಿಯಾ ಕಪ್ ನಂತರ ಭಾರತದಲ್ಲಿ ಏಕದಿನ ವರ್ಲ್ಡ್ ಕಪ್ ನಡೆಯಲಿದೆ. ಅಲ್ಲಿಯೂ ಭಾರತ ಪಾಕ್ ಎದುರಾಗುವ ಸಾಧ್ಯತೆಗಳಿವೆ. ಹಾಗೆಯೇ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ t-20 ವರ್ಲ್ಡ್ ಕಪ್ ನಡೆಯಲಿದೆ. ಆಗಲೂ ಭಾರತ ಪಾಕ್ ಹೋರಾಟ ಕಾಣಲು ಸಿಗಲಿದೆ. ಈ t-20 ವರ್ಲ್ಡ್ ಕಪ್ ನವೆಂಬರ್ 22 ರಲ್ಲಿ ನಡೆಯಲಿದೆ.
ಹೀಗೆ ಮುಂದಿನ ಮೂರು ವರ್ಷಗಳಲ್ಲಿ ಭಾರತ-ಪಾಕ್ ಒಟ್ಟು ನಾಲ್ಕುಬಾರಿ ಸಮರ ಸಾರಲಿವೆ ಅನ್ನುವುದಂತೂ ಗ್ಯಾರಂಟಿ.