ಭಾರತ-ಪಾಕಿಸ್ತಾನ ಮ್ಯಾಚ್ 3 ದಿನಗಳ ನಂತರ; ಎರಡು ತಂಡಗಳು ಆಡಲಿವೆ T- ಟ್ವೆಂಟಿ ಸೀರೀಸ್!
ಸಪ್ಟೆಂಬರ್ 20 ರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ತಮ್ಮದೇ ನೆಲದಲ್ಲಿ ಟಿ ಟ್ವೆಂಟಿ ಸರಣಿಯನ್ನು ಆಡಲಿವೆ. ಈ ಪಂದ್ಯಗಳ ಮೇಲೆ ಪ್ರತಿಯೊಬ್ಬ ಕ್ರಿಕೆಟ್ ರಸಿಕರ ಗಮನವಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ನಲ್ಲಿ ಎರಡು ಬಾರಿ ಎದುರು ಬದುರಾದವು. ಗ್ರೂಪ್ ಸ್ಟೇಜ್ ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಜಯಗಳಿಸಿ ಬೀಗಿದರೆ ನಂತರ ಸೂಪರ್ ಫೋರ್ ನಲ್ಲಿ ಪಾಕಿಸ್ತಾನ ತನ್ನ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈಗ ಈ ಎರಡು ತಂಡಗಳ ರಸಿಕ ವರ್ಗ ಟಿ20 ವರ್ಲ್ಡ್ ಕಪ್ ನ ದಾರಿ ಕಾಯುತ್ತಿದ್ದಾರೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 23ರಂದು ಮತ್ತೆ ಸೆಣೆಸಲಿವೆ. ಈ ಹಾಯ್ ವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ವರ್ಲ್ಡ್ ಕಪ್ ಗಿಂತ ಮುಂಚೆ ಈ ಎರಡು ತಂಡಗಳು ತಮ್ಮ ತಮ್ಮ ನೆಲದಲ್ಲಿ ಟಿ ಟ್ವೆಂಟಿ ಸಿರೀಸ್ ಆಡಲಿವೆ. ಇದರ ಪ್ರಾರಂಭ ಸಪ್ಟೆಂಬರ್ 20 ರಿಂದ ಆಗಲಿದೆ.
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾದ ಜೊತೆಗೆ ವರ್ಲ್ಡ್ ಕಪ್ ನ ತಯಾರಿ ಮಾಡುವುದರಲ್ಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 T- ಟ್ವೆಂಟಿ ಪಂದ್ಯಗಳನ್ನು ಭಾರತ ಆಡಲಿದೆ. ಸಪ್ಟೆಂಬರ್ 20 ರಂದೇ ಭಾರತ ಮೊದಲ ಪಂದ್ಯ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರೆ, ಅತ್ತ ಪಾಕಿಸ್ತಾನ ತಂಡವು ಸಹ ಸಪ್ಟೆಂಬರ್ 20 ರಂದೇ ಕರಾಚಿಯಲ್ಲಿ ಇಂಗ್ಲೆಂಡ್ ಜೊತೆಗೆ 7 ಟಿ-ಟ್ವೆಂಟಿ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಡಲಿದೆ.

ಆಸ್ಟ್ರೇಲಿಯಾ ನಂತರ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಜೊತೆಗೆ ಮೂರು ಟಿ 20 ಪಂದ್ಯಗಳಲ್ಲಿ ಹೋರಾಟ ಮಾಡಲಿದೆ. ಅತ್ತ ಪಾಕಿಸ್ತಾನ ತಂಡವು ಇಂಗ್ಲೆಂಡ್ ಜೊತೆಗಿನ 7 ಟೀ ಟ್ವೆಂಟಿ ಪಂದ್ಯಗಳನ್ನು ಆಡಿದ ನಂತರ ಬಾಂಗ್ಲಾದೇಶ ಹಾಗು ನ್ಯೂಜಿಲೆಂಡ್ ಜೊತೆಗೆ ತ್ರಿಕೋಣ ಸರಣಿಯಲ್ಲಿ ಭಾಗವಹಿಸಲಿದೆ.
ತಮ್ಮ ತಮ್ಮ ದೇಶದಲ್ಲಿಯೇ ಆಡಿದ ನಂತರ ಭಾರತ ಮತ್ತು ಪಾಕಿಸ್ತಾನ ಈ ಎರಡು ತಂಡಗಳು ವರ್ಲ್ಡ್ ಕಪ್ ಗಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲಿವೆ. ಎರಡು ದೇಶಗಳು ತಮ್ಮ ತಮ್ಮ ನೆಲದಲ್ಲಿ ಕ್ರಿಕೆಟ್ ಆಡುತ್ತಿದ್ದರೂ ಪ್ರಾರಂಭದ ದಿನಾಂಕ ಮಾತ್ರ ಒಂದೇ ಆಗಿದೆ.