ಭಾರತ-ಪಾಕ್ ಪಂದ್ಯದಲ್ಲಿ ನಿಮ್ಮ ಸಪೋರ್ಟ್ ಯಾರಿಗೆ? ಪತಿ ಶೋಯಬ್ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ ಸಾನಿಯಾ ಮಿರ್ಜಾ!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಈ ಪತಿ ಪತ್ನಿ ಜೋಡಿ ಯಾವತ್ತೂ ಚರ್ಚೆಯಲ್ಲಿ ಇರುತ್ತದೆ. ಇತ್ತೀಚಿಗೆ ನಡೆದ ಟಿ 20 ವರ್ಲ್ಡ್ ಕಪ್ ಪಂದ್ಯದ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ತನ್ನ ಪತಿ ಶೋಯಬ್ ಮಲಿಕ್ ಅವರಿಗೆ ಸ್ಟೇಡಿಯಂನಿಂದ ಸಪೋರ್ಟ್ ಮಾಡುತ್ತಿರುವುದು ಕಂಡು ಬಂತು. ಏತನ್ಮಧ್ಯೆ ಇವರಿಬ್ಬರ ವೀಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿದೆ. ಅದರಲ್ಲಿ ಸಾನಿಯಾ ಮತ್ತು ಪತಿ ಶೋಯಬ್ ಮಲಿಕ್ ಒಂದು ಪಾಕಿಸ್ತಾನಿ ಟಿವಿ ಶೋನಲ್ಲಿ ಸಹಭಾಗಿಯಾಗಲು ಬಂದಿದ್ದರು.
ಈ ಶೋನ ಆಂಕರ್ Behind The Scene ಮೋಮೆಂಟ್ ನಲ್ಲಿ ಸಾನಿಯಾ ಮಿರ್ಜಾ ಅವರಿಗೆ, ನಿಮಗೆ ಯಾವ ಪ್ರಶ್ನೆ ಕೇಳಿದಾಗ ಕೋಪ ಬರುತ್ತದೆ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಸಾನಿಯಾ ಅವರು, ನಾನು ಜನರಿಗೆ ಮೇಲಿಂದ ಮೇಲೆ ಭಾರತ-ಪಾಕ್ ಕ್ರಿಕೆಟ್ ಸಂದರ್ಭದಲ್ಲಿ ನೀವು ಯಾರಿಗೆ ಸಪೋರ್ಟ್ ಮಾಡುತ್ತೀರಾ? ಎಂದು ಕೇಳಬೇಡಿ ಎನ್ನುತ್ತೇನೆ ಕಾರಣ, ಈ ಪ್ರಶ್ನೆ ತುಂಬಾ ಹಳೆಯದಾಗಿದೆ ಮತ್ತು ಬೇಸರ ತರುವ ಪ್ರಶ್ನೆಯಾಗಿದೆ ಎನ್ನುವಷ್ಟರಲ್ಲಿಯೇ ಸಾನಿಯಾ ಪತಿ ಶೋಯೆಬ್ ಅವರಿ ಎಂಟ್ರಿ ಮಾಡುತ್ತಾರೆ.
ಆಗ ಶೋಯೆಬ್ ಮಲಿಕ್ ಸಾನಿಯಾಗೆ ಕೇಳುತ್ತಾರೆ, ಇದು ಇಲ್ಲಿಗೆ ಮುಗಿಯುವುದಿಲ್ಲ, ಭಾರತ-ಪಾಕ್ ಪಂದ್ಯದ ಸಂದರ್ಭದಲ್ಲಿ ನೀವು ಯಾರನ್ನು ಸಪೋರ್ಟ್ ಮಾಡುವದು ಅದನ್ನು ಮೊದಲು ಹೇಳಿ ಎನ್ನುತ್ತಾರೆ. ಈ ಪ್ರಶ್ನೆಗೆ ಸಾನಿಯಾ ತಕ್ಷಣ ಪತಿಗೆ, ಯಾವಾಗ ಭಾರತ-ಪಾಕ್ ಟೆನಿಸ್ ಪಂದ್ಯವಿರುತ್ತೋ ಆಗ ನೀವು ಯಾರಿಗೆ ಸಪೋರ್ಟ್ ಮಾಡುತ್ತೀರಾ? ಎಂದು ಮರುಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶೋಯೆಬ್, ನಾನು ನನ್ನ ಹೆಂಡತಿಗೆ ಸಪೋರ್ಟ್ ಮಾಡುತ್ತೇನೆ, ಆದರೆ ನನಗೆ ನನ್ನ ದೇಶದ ಮೇಲೆ ಅಭಿಮಾನವಿದೆ ಎನ್ನುತ್ತಾರೆ. ಆಗ ಸಾನಿಯಾ ನನ್ನದು ಇದೇ ಸೇಮ್ ಉತ್ತರವಿದೆ. ಆದ್ದರಿಂದ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ನನಗೆ ವಿಚಾರಿಸಬೇಡಿ ಎಂದರು.
ವಿಡಿಯೋ ನೋಡಿ
ಸಾನಿಯಾ ಹಾಗೂ ಶೋಯೆಬ್ ಇಬ್ಬರೂ ಸದ್ಯ ಕರಾಚಿಯಲ್ಲಿ ಇದ್ದಾರೆ. ಇಲ್ಲಿ ಅನೇಕ ಟಿವಿ ಶೋ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಏತನ್ಮಧ್ಯೆ t 20 ವರ್ಲ್ಡ್ ಕಪ್ ನಂತರ ಬಾಂಗ್ಲಾದೇಶ ಸರಣಿಯಲ್ಲಿ ಭಾಗವಹಿಸಿದ್ದರು. ಆದರೆ ತಮ್ಮ ಮಗುವಿನ ಅನಾರೋಗ್ಯದ ಕಾರಣದಿಂದಾಗಿ ಸರಣಿ ಮಧ್ಯದಲ್ಲಿಯೇ ಬಿಟ್ಟು ಬರಬೇಕಾಯಿತು.