ಭಾವಿ ಪತಿಗೆ ರಸ್ತೆ ಮೇಲೆಯೇ ಸಖತ್ ವಾರ್ನಿಂಗ್ ನೀಡುತ್ತ ಸ್ಕೂಟಿ ಮೇಲೆ ನಡೆದ ಮದುಮಗಳು! ವಿಡಿಯೋ ವೈರಲ್…
ಮೇ ತಿಂಗಳ ಕೊನೆಯವರೆಗೆ ವೆಡ್ಡಿಂಗ್ ವಿಡಿಯೋಗಳ ಸುರಿಮಳೆಯೇ ಸೋಶಿಯಲ್ ಮೀಡಿಯಾದಲ್ಲಿ ಸುರಿಯುತ್ತಿತ್ತು. ಈಗ ಮತ್ತೊಂದು ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮದುಮಗಳು ನೇರ ರಸ್ತೆಯಲ್ಲಿ ಒಬ್ಬಳೇ ಸ್ಕೂಟಿ ಮೇಲೆ ತನ್ನದೇ ಮದುವೆಗೆ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಮದುವೆಗೆ ಹೋಗುವಾಗ ಮಾತ್ರ ಈ ಮದುಮಗಳು ಸುಮ್ಮನೆ ಹೋಗುತ್ತಿಲ್ಲ. ಆಕೆ ಹೋಗುವಾಗ ತನ್ನ ಭಾವಿ ಗಂಡನಿಗೆ ಅವಕಾಶದ ಜೊತೆಗೆ ವಾರ್ನಿಂಗ್ ಕೊಡುತ್ತಿದ್ದಾಳೆ.
ಮದುವೆ ಎಂದ ಕೂಡಲೇ ನೆಂಟರಿಷ್ಟರು ಮಿತ್ರರು ಹೀಗೆ ಅಪಾರ ಜನಸಮೂಹ ಕಂಡುಬರುತ್ತದೆ. ಅದರಲ್ಲೂ ಮದುಮಗ ಮತ್ತು ಮದುಮಗಳ ಜೊತೆಗೆ ಅದೆಷ್ಟು ಜನರಿದ್ದರೂ ಕಡಿಮೆಯೇ. ಅಂಥದ್ದರಲ್ಲಿ ಒಬ್ಬಳೇ ಮದುಮಗಳು ಅದು ಸ್ಕೂಟಿಯಲ್ಲಿ ತನ್ನದೇ ಮದುವೆಗೆ ಹೋಗುತ್ತಿದ್ದಾಳೆ. ಹೋಗುವಾಗ ಮದುಮಗಳು ಸಾಂಗ್ ಒಂದು ಹಾಡುತ್ತ ಹೋಗುತ್ತಿದ್ದಾಳೆ. ಈ ಹಾಡಿನ ಅರ್ಥ ತುಂಬಾ ವಿಚಿತ್ರ ಹಾಗೂ ವಿಶೇಷವಾಗಿದೆ.
‘ಮೌಕಾ ಹೈ ಪಗಲೆ, ಶಾದಿ ಸೆ ಬಚ ಲೆ ಈ ಹಾಡನ್ನು ಹಾಡುತ್ತಿದ್ದಾಳೆ ಜೊತೆಗೆ ‘ಶಾದಿ ಕೆ ಮಂಡಪ ಸೆ ತು ಖುದ್ ಕೊ ಭಗಾ’ ಎನ್ನುತ್ತಾ ಹಾಡುತ್ತಾ ಖುಷಿಯಲ್ಲಿ ನಡೆದಿದ್ದಾಳೆ. ಸ್ವಲ್ಪದರಲ್ಲಿ ‘ಎ ಹುಚ್ಚಾ ನಿನಗೆ ಒಂದು ಅವಕಾಶವಿದೆ, ಈ ಮದುವೆಯಿಂದ ನಿನ್ನನ್ನು ನೀನು ಬಚಾವ್ ಮಾಡಿಕೋ, ಮದುವೆ ಮಂಟಪದಿಂದ ಈಗಲೇ ನೀನು ಓಡಿ ಹೋಗು ಮತ್ತು ನಿನ್ನನ್ನು ನೀನು ನನ್ನಿಂದ ಬಿಡಿಸಿಕೋ ಎಂದು ತನ್ನ ಗಂಡನಿಗೆ ಬಹುಶಃ ವಾರ್ನಿಂಗ್ ಕೊಡುತ್ತಿದ್ದಾಳೆ. ಒಮ್ಮೆ ಮದುವೆಯಾದರೆ ಆಯ್ತು ನೀನು ನನ್ನ ಸೆರೆ ಈಗಲೇ ವಿಚಾರ ಮಾಡಿಕೋ ಎಂಬ ಮುನ್ನೆಚ್ಚರಿಕೆಯನ್ನು ಈ ಹಿಂದಿಯಲ್ಲಿ ಕೊಡುತ್ತಿದ್ದಾಳೆ ಏನೋ ಎನ್ನಿಸುತ್ತಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ bridal_lehenga_design ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.