ಭೂಮಿಗೆ ಬರಲಿವೆ 7 ಅಡಿ ಎತ್ತರದ ಏಲಿಯನ್ ಗಳು, ಯುದ್ಧ ಸಂಭವಿಸಲಿದೆ: ಟೈಮ್ ಟ್ರಾವಲರ್ ಹೇಳಿದ ಸಂಚಲನ ಹುಟ್ಟಿಸುವ ವಿಚಾರಗಳು
ಟೈಮ್ ಟ್ರಾವೆಲರ್ ಒಬ್ಬಾತ ಮುಂದಿನ ವರ್ಷ ಏಳು ಅಡಿ ಉದ್ದ ಇರುವಂತಹ ಏಲಿಯನ್ ಗಳು ಭೂಮಿಯ ಮೇಲೆ ಇಳಿಯಲಿದ್ದಾರೆ ಎಂದು ಹೇಳಿದ್ದಾರೆ. ಈ ವ್ಯಕ್ತಿಯು ತನ್ನನ್ನು ತಾನು 2491 ನೇ ಇಸವಿಯಿಂದ ಬಂದಿರುವ ಅಂದರೆ ಭವಿಷ್ಯತ್ತಿನ ವ್ಯಕ್ತಿ ಎಂದು ಹೇಳಿಕೊಂಡಿದ್ದು, ಫ್ಯೂಚರ್ ಟೈಮ್ ಟ್ರಾವೆಲ್ಲರ್ ಹೆಸರಿನ ಬ್ಲಾಗೊಂದನ್ನು ನಡೆಸುತ್ತಿದ್ದಾರೆ. ಈಗ ಈ ವ್ಯಕ್ತಿಯು ಏಲಿಯನ್ ಗಳು ಭೂಮಿಯ ಮೇಲೆ ಮನುಷ್ಯರ ಜೊತೆಗೆ ಯುದ್ಧವನ್ನು ಮಾಡಲಿವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದುವರೆಗೂ ಕೂಡಾ ಏಲಿಯನ್ ಗಳ ವಿಚಾರದಲ್ಲಿ, ಅವುಗಳ ಅಸ್ತಿತ್ವದ ಕುರಿತಾಗಿ ವಿಜ್ಞಾನಿಗಳ ನಡುವೆ ಏಕರೂಪದ ಅಥವಾ ಒಮ್ಮತದ ಅಭಿಪ್ರಾಯ ಮೂಡಿ ಬಂದಿಲ್ಲ. ಕೆಲವೇ ದಿನಗಳ ಹಿಂದೆ ಅಮೆರಿಕಾದ ಮಿಲಿಟರಿ ನೀಡಿರುವ ವರದಿಯಲ್ಲಿ ಸಹಾ ಏಲಿಯನ್ ಗಳು ಹಾಗೂ ಅವುಗಳು ಸಂಚರಿಸುವ ವಿಶೇಷ ವಾಹನಗಳ ಕುರಿತಾಗಿ ದೃಢೀಕರಣವನ್ನು ನೀಡಲು ನಿರಾಕರಿಸಿದೆ.
ಫ್ಯೂಚರ್ ಟೈಮ್ ಟ್ರಾವೆಲರ್ ತನ್ನ ವಿಡಿಯೋದ ಶೀರ್ಷಿಕೆಯಲ್ಲಿ, ನೀವು ಏಲಿಯನ್ ಗಳೆಂದು ಕರೆಯುವ ಜೀವಿಗಳು ಮುಂದಿನ ವರ್ಷ ಭೂಮಿಯ ಮೇಲೆ ಕಾಲಿಡಲಿವೆ. ಏಲಿಯನ್ ಗಳ ಮೊದಲ ನೋಟವು ನಿಖರವಾಗಿ 24 ಮೇ 2022 ರಂದು ಭೂಮಿಯ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. 2491 ರ ಸಮಯದಲ್ಲಿ ಭೂಮಿಯ ಮೇಲೆ ವಿವಿಧ ಬಗೆಯ ಏಲಿಯನ್ ಗಳು ಮನುಷ್ಯರ ಜೊತೆಗೆ ನಾಗರಿಕ ಸಮೂಹ ಗಳಾಗಿ ಜೀವನವನ್ನು ನಡೆಸುತ್ತವೆ ಎಂದು ಹೇಳಿರುವ ಅವರು, ಅವುಗಳನ್ನು ನಿರಾನ್ಸ್ ಗಳೆಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಟೈಮ್ ಟ್ರಾವೆಲರ್ ಏಲಿಯನ್ ಗಳ ವಿಚಾರ ಹೇಳುತ್ತಾ, ಅವರು ಭೂಮಿಗೆ ಬಹಳ ಶಾಂತಿಯಿಂದ ಬರುತ್ತಾರೆ. ಅವರಿಂದ ನಮಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೆ ಅಮೆರಿಕಾ ದೇಶವು ಅವರ ಮೇಲೆ ಯುದ್ಧವನ್ನು ಘೋಷಿಸುತ್ತದೆ. ಅನಂತರ ಹಲವು ಆಯಾಮಗಳಲ್ಲಿ ಯುದ್ಧವು ನಡೆಯುತ್ತದೆ. ಬರಲಿರುವ ಏಲಿಯನ್ ಗಳು ಸುಮಾರು 7.4 ಅಡಿ ಎತ್ತರ ವಾಗಿದ್ದು, ಅವುಗಳ ತಲೆ ಬುರುಡೆ ಉದ್ದವಾಗಿದ್ದು, ಗಾಢ ಕಂದು ಮೈ ಬಣ್ಣವನ್ನು ಹೊಂದಿದೆ. ಅವುಗಳ ದೇಹದ ಆಕಾರ ವಿ ಕೃ ತ ಎನಿಸಿದರೂ ಅವು ಅಪಾಯಕಾರಿಯಲ್ಲ. ಆದರೆ ಪ್ರಚೋದನೆ ನೀಡಿದರೆ ವಿಧ್ವಂಸವನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದಾರೆ.
ವೈಜ್ಞಾನಿಕವಾಗಿ ಇದುವರೆಗೂ ಕೂಡಾ ಕಾಲದಲ್ಲಿ ಸಂಚರಿಸಿದವರ ಬಗ್ಗೆಯಾಗಲಿ ಅಥವಾ ಏಲಿಯನ್ ಗಳ ಬಗ್ಗೆಯಾಗಲಿ ಯಾವುದೇ ದೃಢವಾದ, ಸ್ಪಷ್ಟವಾದ ಮಾಹಿತಿಗಳು ಲಭ್ಯವಿಲ್ಲ. ಆದ್ದರಿಂದಲೇ ಈ ಟೈಮ್ ಟ್ರಾವೆಲ್ಲರ್ ಹೇಳಿರುವ ವಿಚಾರಗಳನ್ನು ನಂಬುವುದು ಕಷ್ಟ ಎನಿಸಿದೆ. ಇದೇ ವೇಳೆಯಲ್ಲಿ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಏಲಿಯನ್ ಗಳು ಸಂಚರಿಸಲು ಬಳಸುವ UFO ಗಳು ಕಾಣಿಸಿಕೊಂಡಿವೆ ಎನ್ನುವ ವಿಚಾರಗಳು ಕೇಳಿ ಬಂದಿದೆಯಾದರೂ, ಇದರ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಮಾಡಲಾಗಿಲ್ಲ ಹಾಗೂ ವೈಜ್ಞಾನಿಕ ಸಾಕ್ಷಗಳನ್ನು ಪ್ರಸ್ತುತ ಪಡಿಸಲಾಗಿಲ್ಲ.
ಇನ್ನು ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನಟಿ ಅಬ್ಬಿ ಬೆಲ್ಲಾ ತನಗೆ ಏಲಿಯನ್ಸ್ ಗಳ ಜೊತೆ ಸ್ನೇಹ ಸಂಬಂಧ ಇರುವುದಾಗಿ ಹೇಳಿಕೊಂಡಿದ್ದರು. ಈ ನಟಿ ತಾನು ಐದು ಏಲಿಯನ್ ಗಳನ್ನು ಭೇಟಿಯಾಗಿರುವುದಾಗಿ ಹೇಳಿ ಜನರ ಗಮನ ಸೆಳೆದಿದ್ದಾರೆ. ಆಕೆ ನೋಡಿದ ಏಲಿಯನ್ ಗಳ ದೇಹವು ಮನುಷ್ಯರಿಗಿಂತ ತೆಳ್ಳಗೆ ಹಾಗೂ ಎತ್ತರವಾಗಿತ್ತು ಎಂದು ಹೇಳಿದ್ದು, ಅವು ಸುಮಾರು 20 ನಿಮಿಷಗಳ ಕಾಲ ತನ್ನನ್ನು ಅನ್ಯ ಗ್ರಹ ಕ್ಕೆ ಕರೆದುಕೊಂಡು ಹೋಗಿದ್ದರು, ತಾನು ಮರಳಿ ಬರಲು ಬಯಸಿದ ಕಾರಣ ತನ್ನನ್ನು ಕರೆ ತಂದು ಬಿಟ್ಟವು ಎನ್ನುವ ಮಾತುಗಳನ್ನು ಹೇಳಿದ್ದರು.