ಮಗಳಿಗೆ ಬುಧವಾರ ಗಂಡನ ಮನೆಗೆ ಏಕೆ ಕಳುಹಿಸುವುದಿಲ್ಲ? ಇದರ ಹಿಂದಿನ ಕಾರಣ ಪ್ರತಿಯೊಬ್ಬ ತಂದೆ-ತಾಯಿಗೆ ಗೊತ್ತಿರಬೇಕು

ನಮ್ಮ ಹಿಂದೂ ಧರ್ಮದ ಪರಂಪರೆ, ಪದ್ಧತಿಗಳು ಬಹಳ ಪ್ರಾಚೀನವಾಗಿವೆ. ಹಾಗೂ ತುಂಬಾ ಮಹತ್ವವನ್ನು ಪಡೆದಿವೆ. ಪ್ರತಿಯೊಂದು ಪದ್ಧತಿ ಅಥವಾ ಪರಂಪರೆಗೆ ಯಾವುದಾದರೂ ಒಂದು ಮಹತ್ವದ ಸಂಬಂಧ ಇದ್ದೇ ಇದೆ. ಅದಕ್ಕೊಂದು ಉಪಯುಕ್ತ ಮಾರ್ಮಿಕವಾದ ಕಥೆ ಅಥವಾ ರೂಢಿ, ನಿಯಮ ಇದೆ.

ಅದರ ಹಾಗೆಯೇ ನಮ್ಮ ಪ್ರತಿಯೊಂದು ವಾರದ ದಿನವೂ ಒಂದೊಂದು ಮಹತ್ವವನ್ನು, ವಿಶೇಷತೆಯನ್ನು ಹೇಳುತ್ತದೆ. ನಮ್ಮಲ್ಲಿ ದೇವರುಗಳು ಸಾಕಷ್ಟು ಇರುವದರಿಂದ ದಿನಂಪ್ರತಿ ಒಂದೊಂದು ವಾರದ ದಿನದಂದು ಒಂದೊಂದು ದೇವರ ಪೂಜೆ, ವ್ರತಗಳು ನಡೆದೇ ಇರುತ್ತವೆ. ಸೋಮವಾರ ಶಿವ ಆರಾಧನೆ, ಮಂಗಳವಾರ ಲಕ್ಷ್ಮಿ, ಬುಧವಾರ ಗಣೇಶನ, ಮತ್ತು ಗುರುವಾರ ರಾಯರ ಹೀಗೆ ಪೂಜೆಗಳು ನಡೆದೇ ಇರುತ್ತವೆ.

ಆದರೆ ಒಂದು ನಿದರ್ಶನದ ಪ್ರಕಾರ ಅಥವಾ ರೂಢಿಯ ಪ್ರಕಾರ ನಿಮಗೆ ಗೊತ್ತಿರಬೇಕು, ಮಗಳಿಗೆ ಬುಧವಾರದಂದು ಗಂಡನ ಮನೆಗೆ ಕಳಿಸುವದಿಲ್ಲ. ಇದರ ಹಿಂದಿನ ಮಹತ್ವದ ಕಾರಣವೆನಾದರೂ ನಿಮಗೆ ಗೊತ್ತಾ? ಒಂದು ವೇಳೆ ಗೊತ್ತಿಲ್ಲದಿದ್ದರೆ ಅದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ನೋಡಿ.

ಬುಧವಾರದಂದು ಮಗಳಿಗೆ ಗಂಡನ ಮನೆಗೆ ಕಳುಹಿಸಿ ಕೊಡುವದು ಎಂದರೆ, ಜ್ಯೋತಿಷ ಶಾಸ್ತ್ರದ ಪ್ರಕಾರ ತುಂಬಾ ಅಶುಭವೆಂದು ತಿಳಿಯಲಾಗುತ್ತದೆಯಂತೆ. ಕಾರಣ ಈ ದಿನ ಮಗಳಿಗೆ ಕಳುಹಿಸಿ ಕೊಟ್ಟರೆ ನಡುದಾರಿಯಲ್ಲಿ ಅ ಪಾಯ ಅಥವಾ ಅಪ ಘಾ ತವಾಗುವ ಸಂಭವ ಇರುತ್ತದೆ. ಇದರ ಜೊತೆಗೆ ಗಂಡನ ಮನೆಯವರ ಜೊತೆಗೆ ಮಗಳ ಸಂಬಂಧವು ಕೆಟ್ಟು ಹೋಗುವ ಸಾಧ್ಯತೆಗಳು ಇರುತ್ತವೆಯಂತೆ. ಇದಕ್ಕೆ ಹೊಂದುವ ಅನೇಕ ಕಾರಣಗಳನ್ನು ಶಾಸ್ತ್ರಗಳಲ್ಲಿ ನೀಡಿದ್ದಾರೆ. ಇದರಿಂದ ವಾದವಿವಾದಗಳು ಹೆಚ್ಚಾಗಿ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಗಳು ಇರುತ್ತವೆ.

ಪೌರಾಣಿಕ ಮಾನ್ಯತೆಯ ಪ್ರಕಾರ, ಬುಧ ಗ್ರಹ ಚಂದ್ರನಿಗೆ ತನ್ನ ಶತ್ರು ಎಂದು ತಿಳಿಯುತ್ತದೆ. ಆದರೆ ಚಂದ್ರ ಬುಧಕ್ಕೆ ತನ್ನ ಶತ್ರು ತಿಳಿಯುವುದಿಲ್ಲ. ಚಂದ್ರ ಪ್ರಯಾಣದ ಕಾರಣವೆಂದೂ ಮತ್ತು ಬುಧ ಲಾಭದ ಕಾರಣವೆಂದು ತಿಳಿಯಲಾಗುತ್ತದೆ. ಹೀಗಾಗಿ ಬುಧವಾರ ಯಾವುದೇ ಪ್ರಕಾರದ ಪ್ರಯಾಣ ಹಾನಿಕಾರಕವಾಗಬಹುದು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನಮ್ಮ ಕುಂಡಲಿಯಲ್ಲಿ ಬುಧನ ಸ್ಥಿತಿ ಗಂಭೀರವಿದ್ದರೆ ಅಪಘಾತವಾಗುವ ಸಂಭವ ವಿರುತ್ತದೆ. ಅಥವಾ ಯಾವುದೇ ಅಹಿತ ಘಟನೆಗಳು ನಡೆಯುವ ಸಂಭವ ವಿದ್ದುದರಿಂದ ಮಗಳನ್ನು ಬುಧವಾರದಂದು ಗಂಡನ ಮನೆಗೆ ಕಳುಹಿಸುದಿಲ್ಲ.