ಮಗಳು ಸ್ವಂತ ತಂದೆಗೆ ಹಾಲುಣಿಸಿದಳು! ಈ ಫೋಟೋದಲ್ಲಿನ ನಿಜಾಂಶ ಗೊತ್ತಾದರೆ ಕಣ್ಣಲ್ಲಿ ನೀರು ಬರದೆ ಇರಲಾರದು!
ಮಾನವತೆಯ ಮೌಲ್ಯಗಳಿಗೆ ಧಕ್ಕೆ ತಗುಲಿದಾಗ ಕೆಲವೊಂದು ಸಲ ಸಮಾಜದಲ್ಲಿ ಇಬ್ಭಾಗವಾಗುವದು ನಿಶ್ಚಿತ. ಪ್ರತಿಯೊಬ್ಬರ ವಿಚಾರಮಾಡುವ ದೃಷ್ಟಿಕೋನವು ಬೇರೆ ಬೇರೆಯಾಗಿರುತ್ತದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ವ್ಯಕ್ತಿ ಸರಿ ಎನ್ನುತ್ತಿದ್ದರೆ ಇನ್ನೊಂದು ವ್ಯಕ್ತಿಗೆ ಅದು ತಪ್ಪು ಎನಿಸುತ್ತದೆ.
ಈ ಲೇಖನದಲ್ಲಿ 17 ನೇ ಶತಮಾನದಲ್ಲಿ ಯುರೋಪಿನಲ್ಲಿ ಚರ್ಚೆಗೆ ಗ್ರಾಸವಾದ ಒಂದು ಪೇಂಟಿಂಗ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಚಿತ್ರ ಬಿಡಿಸಿದ ಕಲಾಕಾರ ಬಾರ್ಟೋಲೋಮಿಯೋ ಎಸ್ಟೇಬೆನ್ ಮುರಿಲೋ. ಆ ಸಮಯದ ಪ್ರಸಿದ್ಧ ಚಿತ್ರಕಾರರಲ್ಲಿ ಒಬ್ಬರಾಗಿದ್ದರು. ಇವರೇ ಬಿಡಿಸಿದ ಒಂದು ಚಿತ್ರವು ಯುರೋಪಿನಲ್ಲಿ ಮಾನವತೆಯ ಮೌಲ್ಯಗಳಿಗೆ ಮಸಿ ಬಳೆಯುವ ಪ್ರಯತ್ನವೆಂದು ಕೆಲವರು ಬೊಬ್ಬಿಡುತ್ತಿದ್ದರೆ, ಇನ್ನು ಕೆಲವರು ತನ್ನ ತಂದೆಗಾಗಿ ಮಗಳು ಮಾಡಿದ ಈ ಯತ್ನವು ನಿಜವಾಗಿಯೂ ವಾತ್ಸಲ್ಯ ಮತ್ತು ಮಮತೆಯ ಪ್ರತೀಕವೆಂದು ಹೇಳಿದರು.
ಅದು ಯಾವ ಪೇಂಟಿಂಗ್? ಮತ್ತು ಪೇಂಟಿಂಗ್ ಹಿಂದೆ ವಾಸ್ತವಿಕವಾಗಿ ಯಾವ ರಹಸ್ಯ ಅಥವಾ ಸತ್ಯ ಅಡಗಿದೆ ಎಂಬುದನ್ನು ತಿಳಿದುಕೊಂಡಾಗ ನಿಜವಾಗಿಯೂ ಇದನ್ನು ಓದುವ ವ್ಯಕ್ತಿಯ ವಿಚಾರ ಮಾಡುವ ದೃಷ್ಟಿಕೋನವೇ ಬದಲಾಗುವುದು.
ಮುರಿಲೋ ತಯಾರಿಸಿದ ಪೇಂಟಿಂಗ್ ನಲ್ಲಿ ಹದಿ ಹರೆಯದ ಮಹಿಳೆಯೊಬ್ಬಳು ವೃದ್ಧ ವ್ಯಕ್ತಿಗೆ ತನ್ನ ಎದೆಹಾಲನ್ನು ಕುಡಿಸುತ್ತಿದ್ದಾಳೆ. ಆ ವೃದ್ಧ ವ್ಯಕ್ತಿ ಬೇರೆ ಯಾರು ಆಗಿರದೆ ಆಕೆಯ ತಂದೆಯೇ ಆಗಿದ್ದಾನೆ. ಇದೇ ಕಾರಣದಿಂದಾಗಿ ಈ ಪೇಂಟಿಂಗ್ ಜನರ ರೋಷಕ್ಕೆ ಕಾರಣವಾಗಿತ್ತು.
ಒಬ್ಬ ವೃದ್ಧ ವ್ಯಕ್ತಿಗೆ ಯಾವುದೋ ಒಂದು ತಪ್ಪಿನ ಕಾರಣಕ್ಕಾಗಿ ಆಹಾರವಿಲ್ಲದೆ ಹಾಗೆಯೇ ಉಪವಾಸ ವಿರುವ ಕಠಿಣ ಶಿಕ್ಷೆಯನ್ನು ನೀಡಲಾಗಿತ್ತು. ಆ ವೃಧ್ಧನಿಗೆ ಒಬ್ಬಳು ವಯಸ್ಕರಳಾದ ಮಗಳಿದ್ದಳು. ಆಕೆ ಶಿಕ್ಷೆ ಅನುಭವಿಸುತ್ತಿರುವ ತನ್ನ ತಂದೆಗೆ ದಿನಾಲು ಭೇಟಿಯಾಗುವ ಅನುಮತಿ ಕೋರಿದ್ದಳು. ಅದಕ್ಕೆ ಅಲ್ಲಿಯ ವ್ಯವಸ್ಥಾಪನೆಯು ಆಕೆಯ ಕೋರಿಕೆಗೆ ಮಾನ್ಯತೆಯನ್ನು ನೀಡಿತ್ತು.
ಶಿಕ್ಷೆಯ ಪ್ರಕಾರ ಜೈಲಿನಲ್ಲಿದ್ದ ತಂದೆಗೆ ಭೇಟಿಯಾಗಲು ಹೋಗುವ ಸಂದರ್ಭದಲ್ಲಿ ಮಗಳನ್ನು ಚೆನ್ನಾಗಿ ಪರಿಶೀಲಿಸಿ ಬಿಡಲಾಗುತ್ತಿತ್ತು. ಕಾರಣ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬಾರದೆಂದು. ಉಪವಾಸದ ಶಿಕ್ಷೆಯಿಂದಾಗಿ ವೃದ್ಧ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡಲು ಶುರುವಾಯಿತು.
ದಿನದಿಂದ ದಿನಕ್ಕೆ ತಂದೆಯ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಮಗಳ ಕಳವಳ ಹೆಚ್ಚಾಯಿತು. ತನ್ನ ಕಣ್ಣ ಮುಂದೆ ತಂದೆಯ ಸಾವು ಸಮೀಪಿಸುತ್ತಿರುವದನ್ನು ಮನಗಂಡರೂ ತನಗೆ ಏನು ಮಾಡಲಾಗುತ್ತಿಲ್ಲವಲ್ಲ ಎಂಬ ಹತಾಶೆ ಆಕೆಯನ್ನು ಕಾಡತೊಡಗಿತ್ತು. ಇದರಿಂದ ಆಕೆ ಮತ್ತಷ್ಟು ಉದಾಸಳಾದಳು.
ತಂದೆಯ ದುಸ್ಥಿತಿಯನ್ನು ಕಣ್ಣಿಂದ ನೋಡದಾದಳು. ಕೊನೆಗೆ ಒಂದು ದಿನ ಬೇರೆಯೇ ಕೆಲಸವನ್ನು ಮಾಡಿದಳು. ಆಕೆ ಮಾಡಿದ ಕೆಲಸ ಭಿನ್ನ ವಿಚಾರ ಸರಣಿಯವರಿಗೆ ಸರಿ ಬರಲಿಲ್ಲ. ಜನರಿಗೆ ಅದು ಪಾಪ-ಪುಣ್ಯದ ವಿಷಯವಾಯಿತು. ತಂದೆಗೆ ಭೇಟಿಯಾಗಲು ಹೋಗುತ್ತಿರುವಾಗ ಯಾವುದೇ ಆಹಾರ ಪದಾರ್ಥಗಳನ್ನೊಯ್ಯಲು ನಿರ್ಭಂಧವಿದ್ದುದರಿಂದ ತಂದೆಯ ಅವಸ್ಥೆಯನ್ನು ನೋಡಿ ಮರುಗಿ ಆಕೆ ಬೇರೆ ಯಾವುದೇ ದಾರಿಯನ್ನು ಕಾಣದೆ ತನ್ನದೆಯ ಹಾಲನ್ನೇ ದಿನಂಪ್ರತಿ ತನ್ನ ತಂದೆಗೆ ಕುಡಿಸಲು ಶುರು ಮಾಡಿದಳು.
ಇದರಿಂದ ತಂದೆಯ ಪ್ರಕೃತಿಯಲ್ಲಿ ಸುಧಾರಣೆ ಕಂಡು ಬರತೊಡಗಿತು. ಒಂದು ದಿನ ಅಲ್ಲಿಯ ಕಾವಲುಗಾರನು ಮಹಿಳೆ ಹಾಲು ಕುಡಿಸುವ ಈ ದೃಶ್ಯವನ್ನು ನೋಡಿ ಮೇಲಾಧಿಕಾರಿಗೆ ಹೇಳಿದನು. ಈ ಘಟನೆಯಿಂದ ಸಮಾಜದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು. ಈ ಒಂದು ಕಾರಣದಿಂದ ಸಮಾಜವು ಎರಡು ಗುಂಪುಗಳಲ್ಲಿ ಇಬ್ಭಾಗವಾಯಿತು. ಒಂದು ಗುಂಪು ಈ ಕೃತ್ಯವನ್ನು ನಿಷೇಧಿಸಿತು. ಅವರ ಪ್ರಕಾರ ತಂದೆ ಮಗಳ ಪವಿತ್ರವಾದ ಸಂಬಂಧಕ್ಕೆ ಮಸಿ ಬಳಿಯುವ ಕೆಲಸವಾಯಿತು ಎಂದರು. ಹಾಗೂ ಇದು ಸಮಾಜದಲ್ಲಿ ನಡೆದ ದೊಡ್ಡ ತಪ್ಪು ಎಂದರು.
ಆದರೆ ಎರಡನೆಯ ಗುಂಪು ಮಾತ್ರ ಮಗಳ ಮನಸ್ಸಿನಲ್ಲಿ ತನ್ನ ತಂದೆಯ ಬಗ್ಗೆ ಇದ್ದ ಕಾಳಜಿ ವಾತ್ಸಲ್ಯದ ಉದಾಹಾರಣೆ ಅಂದರೆ ಇದೇ ಎಂದು ಹೇಳತೊಡಗಿದರು. ಹಾಗೂ ಮಗಳ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಬೆಂಬಲ ಸಿಕ್ಕಿತು. ಮತ್ತು ಆಕೆಯನ್ನು ಎಲ್ಲರೂ ಕೊಂಡಾಡತೊಡಗಿದರು. ಆಗಿನ ಜನ ಇದಕ್ಕೆ ಬಹಳೇ ಮನಸ್ಸಿನ ಮೇಲೆ ತೆಗೆದುಕೊಂಡರು. ಕೊನೆಗೆ ಮನುಷ್ಯತ್ವದ ಮೌಲ್ಯಗಳೇ ಗೆದ್ದವು. ಹೀಗಾಗಿ ತಂದೆ ಮಗಳಿಗೆ ಯಾವುದೇ ಶಿಕ್ಷೆ ನೀಡದೆ ಬಿಡಲಾಯಿತು. ಅನೇಕ ಚಿತ್ರಕಾರರು ಈ ಘಟನೆಯನ್ನು ತಮ್ಮ ಕ್ಯಾನ್ವಾಸ್ ಮೇಲೆ ಇಳಿಸಿದರು. ಅವರಲ್ಲಿಯೇ ಮೋರಿಲೋ ಇಳಿಸಿದ ಚಿತ್ರ ಜಗತ್ಪ್ರಸಿದ್ಧವಾಯಿತು.