ಮಗುವಿನೊಂದಿಗೆ ತಾಯಿಯನ್ನು ಜಲಪ್ರಳಯದಿಂದ ಕಾಪಾಡಲು ಹೋಗಿ ಆಯತಪ್ಪಿ ತಾವೇ ಜಲಪಾತಕ್ಕೆ ಬಿದ್ದ ಅರಣ್ಯ ಸಿಬ್ಬಂದಿ!! ನೋಡಿ ವೈರಲ್ ವಿಡಿಯೋ…..
ಸಾಮಾನ್ಯವಾಗಿ ಮಳೆಗಾಲ ಬಂದರೆ ಸಾಕು ನಾವು ಎಲ್ಲಾದರೂ ಡ್ಯಾಮ್, ವಾಟರ್ ಫಾಲ್ಸ್ ಗೆ ಭೇಟಿ ಕೊಡುವ ಯೋಚನೆ ಮಾಡುತ್ತೇವೆ. ಏಕೆಂದರೆ ಮಳೆಗಾಲದಲ್ಲಿ ಸುತ್ತ ಮುತ್ತಲಿನ ಪರಿಸರ ಹಚ್ಚು ಹಸಿರಾಗಿರುತ್ತದೆ. ಇದನ್ನು ನೋಡಲು ಕಣ್ಣು ತುಂಬಾ ಹಾತೊರೆಯುತ್ತದೆ. ಹಸಿರು ಬಣ್ಣ ನಮ್ಮ ಕಣ್ಣುಗಳಿಗೆ ತಂಪು ನೀಡುತ್ತದೆ. ಮಳೆಗಾಲದಲ್ಲಿ ಹೆಚ್ಚು ಮಳೆ ಬರುವದು ಇದರಿಂದ ಎತ್ತ ನೋಡಿದರು ಹಸಿರಾದ ಹೊದಿಕೆ ಕಂಡು ಬರುವದು. ಇಂತಹ ಪ್ರಸಂಗದಲ್ಲಿ ಕೆಲವೊಮ್ಮೆ ಬಾರದ ಘಟನೆಗಳು ಸಹ ನಡೆಯುತ್ತವೆ. ಇದರಿಂದ ನಮ್ಮ ಜೀವಕ್ಕೂ ಸಹ ಅ#ಪಾಯವಿರುತ್ತದೆ. ಅಂತಹ ಪ್ರಸಂಗಗಳು ಎಂದರೆ ಒಮ್ಮೆಲೇ ಜೋರಾಗಿ ಮಳೆ ಬಂದು ಜಲಪ್ರಳಯ ಉಂಟಾಗುವದು, ಸಿಡಿಲು ಬೀಳುವದು , ಜೋರಾದ ಗಾಳಿ ಬಿಸುವದು ಇವೆಲ್ಲ ಮಳೆಗಾಲದಲ್ಲಿ ನಿರ್ಮಾಣವಾಗುವ ಸಮಸ್ಯೆಗಳು. ಈ ಸಮಸ್ಯೆಗಳು ಎದುರಾದಾಗ ಕೆಲವೊಮ್ಮೆ ನಮ್ಮ ಪ್ರಾಣ ಸಹ ಕಳೆದುಕೊಳ್ಳುವ ಪರಸ್ಥಿತಿ ಬರುತ್ತದೆ.
ನಮಗೆಲ್ಲ ಮಳೆಗಾಲದಲ್ಲಿ ವಾಟರ್ ಫಾಲ್ಸ್ ಎಂದರೆ ತುಂಬಾ ಇಷ್ಟ. ನಾವೆಲ್ಲ ಒಂದಲ್ಲ ಒಂದು ವಾಟರ್ ಫಾಲ್ಸ್ ಗೆ ಹೊಗೆ ಹೋಗುತ್ತೇವೆ. ಏಕೆಂದರೆ ಅಲ್ಲಿ ಮೇಲಿಂದ ಬೀಳುವ ನೀರನ್ನು ಕಂಡು ತುಂಬಾ ಖುಷಿ ಪಡುತ್ತೇವೆ ಅಷ್ಟೇ ಅಲ್ಲ ಆ ಬೀಳುವ ನೀರಿನ ಕೆಳಗಡೆ ಹೋಗಿ ನಿಂತು ನೀರಿನ ಆಸ್ವಾದ ತಗೆದುಕೊಳ್ಳುವ ಮಜಾನೆ ಬೇರೆ ಯಾಗಿರುತ್ತದೆ. ನಮ್ಮ ನಾಡಿನಲ್ಲಿಯ ಜೋಗ ಜಲಪಾತ ಕಂಡರೆ ಸಾಕು ಸ್ವರ್ಗ ಕಂಡಂತಾಗುತ್ತದೆ. “ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, ಸಾಯುವತನಕ ಸಂಸಾರದೊಳಗೆ ಗಂಡಾಗುಂಡಿ, ಇರುವದರೊಳಗೆ ನೋಡು ಒಮ್ಮೆ ಜೋಗದ ಗುಂಡಿ” ಈ ಹಾಡು ನಮಗೆಲ್ಲ ನೆನಪಿಗೆ ಬರುವದು ಜೋಗ ಜಲಪಾತ ಹೆಸರು ತಗೆದಾಗ. ನಮ್ಮ ಜೀವನದಲ್ಲಿ ಒಮ್ಮೆಯಾದರೂ ಜೋಗದ ಜಲಪಾತ ನೋಡಬೇಕು ಎಂದು ಆ ಹಾಡು ಹೇಳುತ್ತದೆ.
ಕೇರಳದಲ್ಲಿ ಸಹ ಅನೇಕ ಜಲಪಾತಗಳು ಕಂಡು ಬರುತ್ತವೆ. ಸದ್ಯಕ್ಕೆ ಮಳೆಗಾಲ ಇರುವದರಿಂದ ಎಲ್ಲ ಜಲಪಾತಗಳು ತುಂಬಿ ಹರಿಯುತ್ತಿವೆ. ಇಂಥ ಸಮಯದಲ್ಲಿ ಜಲಪಾತಗಳಿಗೆ ಭೇಟಿ ನೀಡುವದು ಎಷ್ಟು ಅ#ಪಾಯಕಾರಿ ಎಂಬುದು ಈ ವಿಡಿಯೋ ಮೂಲಕ ತಿಳಿದು ಬರುವದು. ಏಕೆಂದರೆ ನಮಗೆ ತಿಳಿಯದ ಹಾಗೆ ನಿಸರ್ಗದಲ್ಲಿ ನಿಮಿಷದಿಂದ ನಿಮಿಷಕ್ಕೆ ಬದಲಾವಣೆ ಯಾಗುತ್ತಿರುತ್ತದೆ. ಆ ಬದಲಾವಣೆಯಿಂದಾಗಿ ನಮ್ಮ ಜೀವಕ್ಕೆ ಧಕ್ಕೆ ಉಂಟಾಗಿ ಕೆಲವೊಮ್ಮೆ ಜೀವ ಕಳೆದುಕೊಳ್ಳುವ ಸಮಯ ಬರುತ್ತದೆ. ಅಂತಹ ಉದಾಹರಣೆಗೆ ಈ ವಿಡಿಯೋನೆ ಸಾಕ್ಷಿ.
ವಿಡಿಯೋ ನೋಡಿ.
Brave effort by forest staff while saving life of a mother with infant at #Anaivari waterfalls in #Salem district of #TamilNadu #TNForesters
— Surender Mehra IFS (@surenmehra) October 26, 2021
Via:@Shilpa1308 @supriyasahuias @SudhaRamenIFS pic.twitter.com/TN1maKbWsv
ಪ್ರಸ್ತುತ ವಿಡಿಯೋ ತಮಿಳುನಾಡಿನ ಸೇಲಂ ಜಿಲ್ಲೆಯ ಅನೈವರಿ ಎಂಬ ಹೆಸರಿನ ವಾಟರ್ ಫಾಲ್ಸ್ ನಲ್ಲಿಯ ವಿಡಿಯೋ ಇದೆ. ಈ ವಿಡಿಯೋವನ್ನು ಸುರೇಂದ್ರ ಮೆಹ್ರಾ ಐ ಎಫ್ ಎಸ್ ಅಧಿಕಾರಿಯವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡುವಾಗ “ಮಗುವಿನೊಂದಿಗೆ ತಾಯಿಯ ಜೀವ ಉಳಿಸಲು ಅರಣ್ಯ ಸಿಬ್ಬಂದಿಯ ಕೆಚ್ಚೆದೆಯ ಪ್ರಯತ್ನ” ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ.
ಪ್ರಸ್ತುತ ವಿಡಿಯೋದಲ್ಲಿ ಒಬ್ಬ ತಾಯಿ ತನ್ನ ಒಂದು ವರ್ಷದ ಮಗುವನ್ನು ಕರೆದುಕೊಂಡು ಈ ವಾಟರ್ ಫಾಲ್ಸ್ ಗೆ ಬಂದಿರುತ್ತಾಳೆ. ಆಕೆ ಬರುವ ಮುನ್ನ ವಾಟರ್ ಫಾಲ್ಸ್ ನಲ್ಲಿಯ ನೀರು ಶಾಂತವಾಗಿ ಮೇಲಿಂದ ಕೆಳಗಡೆ ಬಿಳುತ್ತಿರುತ್ತವೆ ಕೆಲವು ಸಮಯದ ವರೆಗೆ ವಾಟರ್ ಫಾಲ್ಸ್ ನಲ್ಲಿ ಮಗುವಿನೊಂದಿಗೆ ಆನಂದ ಪಡೆಯುತ್ತಾಳೆ. ಹಾಗೆ ಆ ಸಮಯದಲ್ಲಿ ಎತ್ತರದ ಭಾಗದಲ್ಲಿ ಮಳೆ ಬರಲು ಶುರು ವಾಗುತ್ತದೆ. ಎತ್ತರದ ಪ್ರದೇಶದಲ್ಲಿ ಮಳೆ ಬಂದ ಕಾರಣ ಈ ವಾಟರ್ ಫಾಲ್ಸ್ ನಲ್ಲಿಯ ನೀರಿನ ಪ್ರಮಾಣ ಹೆಚ್ಚಾಗಿ ಪ್ರ#ಳಯ ಬರಲು ಪ್ರಾರಂಭ ವಾಗುತ್ತದೆ. ಇನ್ನೇನು ಹೊರಗಡೆ ಹೋಗಬೇಕು ಅನ್ನೋ ಹೊತ್ತಿಗೆ ಜಲಪಾತ ರೌ#ದ್ರರೂಪ ತಾಳುತ್ತದೆ. ಇನ್ನೇನು ನಾವು ಉಳಿಯುವದಿಲ್ಲ ಎಂಬುದನ್ನು ಅರಿತ ತಾಯಿ ತನ್ನ ಮಗುವನ್ನು ಮಡಿಲಲ್ಲಿ ಜೋರಾಗಿ ಹಿಡಿದುಕೊಂಡು ಬದಿಯ ಒಂದು ಕಲ್ಲಿನ ಮೇಲೆ ನಿಂತು ಕೊಳ್ಳುತ್ತಾಳೆ.
ಇದನ್ನರಿತ ಜನರು ಅಲ್ಲಿಯ ಸ್ಥಾನಿಕ ಅರಣ್ಯ ಅಧಿಕಾರಿಗಳಿಗೆ ಈ ಕುರಿತು ಸುದ್ದಿ ತಿಳಿಸುತ್ತಾರೆ. ತಕ್ಷಣ ಅಲ್ಲಿಯ ರೇಸ್ಕ್ಯೂ ಟೀಮ್ ಅಲ್ಲಿಗೆ ಬರುತ್ತದೆ. ತಾಯಿ ಮಗುವನ್ನು ಹೇಗಾದರೂ ಮಾಡಿ ಕಾಪಾಡಬೇಕು ಎಂಬ ಎಂಬ ಉದ್ದೇಶದಿಂದ ಅವರ ಒಂದು ಟೀಮ್ ತಾಯಿ ಮತ್ತು ಮಗುವಿದ್ದ ಬದಿಯಲ್ಲಿ ಹೋಗಿ ಹಗ್ಗದಿಂದ ಒಬ್ಬರಿಗೊಬ್ಬರು ಕೆಳಗಡೆ ಇಳಿಯುತ್ತಾರೆ. ಮೊದಲು ತಾಯಿಯ ಬಳಿಯಲ್ಲಿದ ಕೂಸನ್ನು ಮೇಲೆ ತಗೆದುಕೊಳ್ಳುತ್ತಾರೆ. ತದನಂತರ ತಾಯಿಯನ್ನು ಹಗ್ಗದಿಂದ ಮೇಲೆ ಹತ್ತಿಸುತ್ತಾರೆ. ತಾಯಿ ಮಗು ಇಬ್ಬರು ಸೇಫ್ ಆಗಿ ಬದುಕಿಸಿದ ರೇಸ್ಕ್ಯೂ ಟೀಮ್ ನವರಿಗೆ ಚಪ್ಪಾಳೆಯೊಂದಿಗೆ ಅಭಿನಂದನೆಗಳು ಸಲ್ಲಿಸುತ್ತಾರೆ. ಸ್ವಲ್ಪ ನಿಮಿಷದ ನಂತರ ಅಲ್ಲಿ ಒಂದು ದುರ್ಘ#ಟನೆ ನಡೆಯುತ್ತದೆ.
ತಾಯಿ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆ ಕಳುಹಿಸಿದ ಕೆಳಗೆ ನಿಂತಿರುವ ಇಬ್ಬರು ಅಧಿಕಾರಿಗಳು ಆಯತಪ್ಪಿ ಆ ಜಲಪ್ರಳಯದಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಇದನ್ನು ಕಂಡ ಜನ ಪಾಪ ಎಂದು ಗೋಳಾಡುತ್ತಾರೆ. ಏಕೆಂದರೆ ಬೇರೊಬ್ಬರ ಜೀವ ಉಳಿಸಲು ಬಂದ ವ್ಯಕ್ತಿಗಳು ತಮ್ಮ ಜೀವವನ್ನೇ ಕಳೆದುಕೊಂಡರು ಎಂಬ ವಿಚಾರದಿಂದ ಎಲ್ಲರೂ ವಿಷಾದ ಪಡಿಸುತ್ತಾರೆ.
They could safely come out
— Surender Mehra IFS (@surenmehra) October 26, 2021
ಆದರೆ ಸಂತಸದ ಸುದ್ದಿ ಏನೆಂದರೆ ರೇಸ್ಕ್ಯೂ ಟೀಮ್ ನ ಕೊಚ್ಚಿಕೊಂಡು ಹೋದ ಇಬ್ಬರು ಸಿಬ್ಬಂದಿಗಳು ಈಜುತ್ತಾ ಮರಳಿ ಸೇಫಯಾಗಿ ಬಂದಿದ್ದಾರೆ ಎಂದು ಸ್ವತಃ ಸುರೇಂದ್ರ ಮೆಹ್ರಾ ಅವರು ಟ್ವಿಟ್ಟರ್ ಮೂಲಕ ಪ್ರಶ್ನೆ ಕೇಳಿದ ನೆಟ್ಟಿಗರಿಗೆ ಉತ್ತರಿಸಿದ್ದಾರೆ. ರೇಸ್ಕ್ಯೂ ಟೀಮ್ ಇರುವದೇ ಅದಕ್ಕೆ ಅಲ್ಲವೇ. ಅವರಿಗೆ ಇಂತಹ ಪರಿಸ್ಥಿತಿಯಲ್ಲಿ ಹೇಗೆ ಉಳಿಯಬೇಕು ಎಂಬ ಟ್ರೇನಿಂಗ್ ಸಹನೀಡಿರುತ್ತಾರೆ. ಅದಕ್ಕಾಗಿ ಅವರ ಎಂತಹ ಕಠಿಣ ಪರಸ್ಥಿತಿಕಂಡರು ಸಹ ಎದೆಗುಂದದೆ ಮುನ್ನುಗ್ಗಿ ಜನರ ಪ್ರಾಣ ರಕ್ಷಣೆ ಮಾಡುತ್ತಾರೆ. ಅಂತಹ ನಿಷ್ಠಾವಂತ ಅಧಿಕಾರಿಗಳಿಗೆ ನಮ್ಮವತಿಯಿಂದ ಹ್ಯಾಟ್ಸಪ್.