ಮಗುವಿನ ಬಾಯಿಗೆ ರಸಭರಿತ ನಿಂಬೆಹಣ್ಣು ತಾಗಿಸಿದಾಗ..! ಸೂಪರ್ ವೈರಲ್ ವಿಡಿಯೋ.

ಮಕ್ಕಳ ವಿಡಿಯೋಗಳು ತುಂಬಾ ಕ್ಯೂಟ್ ಆಗಿರುತ್ತವೆ. ಅವು ಯಾವುದಕ್ಕಾದರೂ ಸ್ಪಂದಿಸುವ ರೀತಿ ತುಂಬಾ ಅಮೋಘ ಮತ್ತು ಹೃದಯ ತಟ್ಟುವ ಹಾಗೆ ಇರುತ್ತದೆ. ಮಕ್ಕಳು ನಾವು ತಿನ್ನುವ ಪ್ರತಿಯೊಂದು ವಸ್ತು ನಮ್ಮ ಹಾಗೆ ತಿನ್ನಲು ಟೆಸ್ಟ್ ನೋಡಲು, ಅನುಕರಿಸಲು ತುಂಬಾ ಯತ್ನಿಸುತ್ತದೆ. ತಿನ್ನುವ ಆ ಪದಾರ್ಥಗಳ ಟೆಸ್ಟ್ ಅವುಗಳಿಗೆ ಗೊತ್ತಿರುವುದಿಲ್ಲ. ಆದರೂ ತಿನ್ನಲು ಹಠ ಮಾಡುತ್ತವೆ. ಈ ವಿಡಿಯೋದಲ್ಲಿ ಇಂಥದ್ದೇ ಒಂದು ದೃಶ್ಯವಿದೆ ಅದನ್ನು ನೋಡಿದ ನಂತರ ತುಂಬಾ ಮಜವೆನಿಸುತ್ತದೆ.

ಇಲ್ಲಿ ಪುಟ್ಟ ಮಗುವಿನ ಬಾಯಿಗೆ ಅರ್ಧ ಹೋಳಿದ ರಸಭರಿತ ನಿಂಬೆಹಣ್ಣನ್ನು ತಾಗಿಸಲಾಗುತ್ತಿದೆ. ಮಗು ತುಂಬಾ ಆಸೆಯಿಂದ ನಿಂಬೆಹಣ್ಣಿನ ರಸ ಸ್ವಲ್ಪ ಸಖತ್ತಾಗಿಯೇ ಹೀರಿಕೊಳ್ಳುತ್ತದೆ. ಆಗ ನೋಡಬೇಕು ಮಗುವಿನ ಮುಖ. ಮಗು ಮೊದಲು ರಸದ ಸ್ವಾದ ತೆಗೆದುಕೊಳ್ಳುತ್ತದೆ, ನಂತರ ಯಾವಾಗ ರಸದ ಹುಳಿಯಂಶ ಬಾಯಿಗೆ ಚೆನ್ನಾಗಿ ತಾಗುತ್ತದೆ ಆಗ ಮಗುವಿನ ಮುಖ ತುಂಬಾ ರೋಚಕವಾಗುತ್ತದೆ. ಈ ದೃಶ್ಯ ಮೇಲಿಂದಮೇಲೆ ನೋಡಬೇಕೆನಿಸುತ್ತದೆ. ಮಗು ಹುಳಿ ತಾಗಿದ ನಂತರ ಮೊದಲು ತಲೆ ಜಾಡಿಸುತ್ತದೆ, ನಂತರ ಕಣ್ಣುಗಳನ್ನು ಮುಚ್ಚಿ ಪ್ರತಿಕ್ರಿಯಿಸುತ್ತದೆ. ಈ ರೀತಿ ಮಗು ಮೇಲಿಂದ ಮೇಲೆ ಮಾಡುವದನ್ನು ನೋಡಬಹುದು. ನಿಜವಾಗಿಯೂ ಮಗುವಿನ ಈ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆ.

ವಿಡಿಯೋ ನೋಡಿ.

ಈ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಆಕಾಂಕ್ಷಾ ಅಗರ್ವಾಲ್ ಹೆಸರಿನ ಚಾನೆಲ್ ನಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋಗೆ ಲಕ್ಷಾವಧಿ ನೋಡಿದ್ದಾರೆ.