ಮಗುವೊಂದನ್ನು ಗಿಫ್ಟ್ ಕೇಳಿದ ಗರ್ಲ್ ಫ್ರೆಂಡ್: ಅವಳ ಡಿಮ್ಯಾಂಡ್ ಪೂರ್ತಿ ಮಾಡಲು ಬಾಯ್ ಫ್ರೆಂಡ್ ಮಾಡಿದ ಕೆಲಸ ನೋಡಿ ಹೌಹಾರಿದ ಜನ

ಪ್ರೇಮಿಗಳು ತಾವು ಪ್ರೇಮಿಸಿದವರಿಗಾಗಿ ಯಾವುದೇ ಕಾಣಿಕೆಯನ್ನು ನೀಡಲು ಕೂಡಾ ಸಿದ್ಧರಿರುತ್ತಾರೆ. ಎಷ್ಟೇ ಆಗಲೀ ಪ್ರೇಮಕ್ಕಾಗಿ ತಾಜ್ ಮಹಲ್ ಕಟ್ಟಿಸಿದ ಅಪರೂಪದ ಕಥೆ ನಮ್ಮ ಮುಂದೆಯೇ ಇದೆ. ಅದಕ್ಕೆ ಪ್ರೇಮಿ ತನ್ನ ಪ್ರೇಯಸಿಯ ಆಸೆಯನ್ನು ಪೂರೈಸಲು ಯಾವುದೇ ಸ ವಾ ಲನ್ನು ಕೂಡಾ ಎದುರಿಸಲು ಸಿದ್ಧವಾಗಿರುತ್ತಾನೆ. ಆದರೆ ಇದು ಹದ್ದು ಮೀರಿದರೆ ಮಾತ್ರ ಅ ಪಾ ಯ ಖಂಡಿತ ಎನ್ನುವುದು ಕೂಡಾ ಒಪ್ಪಲೇ ಬೇಕಾಗಿದೆ. ಇಂತಹುದೇ ಒಂದು ವಿಚಿತ್ರವಾದ ಪ್ರಕರಣವೊಂದರಲ್ಲಿ ತಾನು ಪ್ರೇಮಿಸಿದವಳು ಕೇಳಿದ ಕಾಣಿಕೆಯನ್ನು ನೀಡುವುದಕ್ಕಾಗಿ ಪ್ರೇಮಿಯೊಬ್ಬನು ಕಿ ಡ್ನಾ ಪರ್ ಆಗಲು ಕೂಡಾ ಸಿದ್ದನಾಗಿ ಬಿಟ್ಟಿದ್ದಾನೆ‌. ಆದರೆ ಮಾಡಿದ ತಪ್ಪಿಗೆ ಅನಂತರ ಈ ಪ್ರೇಮಿಗಳಿಬ್ಬರು ಪೊಲೀಸರಿಗೆ ಅತಿಥಿಗಳಾದಂತಹ ಘಟನೆಯೊಂದು ನಡೆದಿದೆ. ಪ್ರೇಮಿಯೊಬ್ಬಳು ತಾನು ಪ್ರೀತಿಸುತ್ತಿರುವ ಹುಡುಗನ ಬಳಿ ತನ್ನ ವಿಚಿತ್ರವಾದ ಕೋರಿಕೆಯನ್ನು ಇಟ್ಟಿದ್ದಾಳೆ. ಆ ಕೋರಿಕೆಯನ್ನು ತೀರಿಸುವುದಕ್ಕಾಗಿ ಆ ಯುವಕ ಮಾಡಿರುವ ಕೆಲಸವನ್ನು ನೋಡಿ ಕೆಲವರು ಆಶ್ಚರ್ಯ ಪಟ್ಟಿದ್ದರೆ ಇನ್ನೂ ಕೆಲವರು ದಿಗ್ಭ್ರಾಂತಿ ಗೆ ಒಳಗಾಗಿದ್ದಾರೆ.

ಬಿಹಾರದ ಹಾಜಿಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜಡುವಾ ಬಜಾರ್ ಎನ್ನುವಲ್ಲಿ ಇಂತಹುದೊಂದು ಘಟನೆ ನಡೆದಿದೆ. ದೊರೆತಿರುವ ಮಾಹಿತಿಗಳ ಪ್ರಕಾರ ಜಡುವಾ ಬಜಾರ್ ನಲ್ಲಿ ಪ್ರಮೋದ್ ಶರ್ಮಾ ಎನ್ನುವವರು ಒಂದು ಬರ್ಗರ್ ಸ್ಟಾಲ್ ಅನ್ನು ಇಟ್ಟಿದ್ದಾರೆ. ಇವರು ಮೂಲತಃ ಆಜಂಗಡ್ ಜಿಲ್ಲೆಯವರು ಎನ್ನಲಾಗಿದ್ದು ಜಡುವಾದಲ್ಲಿ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಇವರ ಮೂರು ವರ್ಷದ ಮಗನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ. ಈ ವಿಷಯದ ಕುರಿತಾಗಿ ಪ್ರಮೋದ್ ಶರ್ಮ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ ನಂತರ ಪೊಲೀಸರು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು, ಆದರೆ ನಾಪತ್ತೆಯಾದ ಬಾಲಕನ ಪತ್ತೆಯಾಗಿರಲಿಲ್ಲ.

ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ಮಕ್ಕಳಾಗದ ಕಾರಣ ಆಕೆಯ ಪತಿ ಆಕೆಯನ್ನು ತೊರೆದಿದ್ದ. ಪತಿ ತನ್ನಿಂದ ದೂರವಾದ ಮೇಲೆ ಆ ಮಹಿಳೆಗೆ ಬೇರೊಬ್ಬ ವ್ಯಕ್ತಿಯೊಡನೆ ಸ್ನೇಹವಾಗಿ, ಅವನೊಡನೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ. ಆಕೆ ತನ್ನ ಪ್ರೇಮಿಯ ಬಳಿ ಒಂದು ಮಗು ಬೇಕೆಂದು ಕೇಳಿಕೊಂಡಿದ್ದಾಳೆ. ಮಗುವೊಂದನ್ನು ತನಗೆ ಕಾಣಿಕೆಯಾಗಿ ನೀಡುವಂತೆ ಪ್ರೇಮಿಯಲ್ಲಿ ಮನವಿ ಮಾಡಿದ್ದಾಳೆ. ಪ್ರೀತಿಸಿದವಳು ಕೇಳಿದ ಗಿಫ್ಟ್ ಅನ್ನು ನೀಡಬೇಕೆಂದು ಆಕೆಯನ್ನು ಪ್ರೇಮಿಸಿದ್ದ ವ್ಯಕ್ತಿಯು ತೀರ್ಮಾನಿಸಿದ್ದಾನೆ. ಆಗ ಅವನಿಗೆ ಒಂದು ಉಪಾಯ ಹೊಳೆದಿದೆ. ನಿತೇಶ್ ಕುಮಾರ್ ಎನ್ನುವ ಆತ ತಾನು ಪ್ರತಿದಿನ ಬರ್ಗರ್ ತಿನ್ನಲು ಹೋಗುತ್ತಿದ್ದ ಪ್ರಮೋದ್ ಶರ್ಮ ಅವರ ಸ್ಟಾಲ್ ನಲ್ಲಿ ಅವರ ಮೂರು ವರ್ಷದ ಮಗನನ್ನು ನೋಡಿದ್ದಾನೆ.

ಆ ಬಾಲಕನನ್ನು ನೋಡಿದ ಮೇಲೆ ತನ್ನ ಯೋಜನೆಗೆ ರೂಪ ನೀಡಲು ನಿರ್ಧರಿಸಿ ಸರಿಯಾದ ಸಮಯವೊಂದನ್ನು ನೋಡಿ, ಪ್ರಮೋದ್ ಶರ್ಮಾ ಅವರ ಮಗನನ್ನು ಅ ಪ ಹ ರಣ ಮಾಡಿ ತನ್ನ ಪ್ರೇಯಸಿಗೆ ಕಾಣಿಕೆಯಾಗಿ ನೀಡಿದ್ದಾನೆ. ಆದರೆ ಅ ಪ ಹ ರ ಣದ ನಾಲ್ಕು ತಿಂಗಳ ನಂತರ ಪ್ರೇಮಿಗಳ ನಡುವೆ ಯಾವುದೋ ಒಂದು ವಿಚಾರಕ್ಕೆ ಭಿನ್ನಅಭಿಪ್ರಾಯ ಗಳು ಮೂಡಿ, ಅವರ ಸಂಬಂಧದ ಮಧ್ಯೆ ಬಿರುಕು ಉಂಟಾಗಿದೆ. ಇದಾದ ನಂತರ ಮಗುವಿನ ಅ ಪ ಹ ರ ಣದ ವಿಷಯ ಕೂಡಾ ಹೊರಬಂದಿದೆ. ಅದೇ ವೇಳೆ ಪ್ರಮೋದ್ ಶರ್ಮಾ ತಮ್ಮ ಮಗ ಕಾಣೆಯಾಗಿರುವ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಪ್ರೇಮಿಗಳ ವಿಷಯದಲ್ಲಿ ಅನುಮಾನ ಮೂಡಿ ತನಿಖೆಯನ್ನು ನಡೆಸಿದ್ದಾರೆ.

ಈ ವೇಳೆ ಅವರನ್ನು ವಿಚಾರಣೆ ಮಾಡಿದಾಗ ಎಲ್ಲ ವಿಷಯಗಳು ಹೊರಬಂದಿದೆ. ಅಲ್ಲದೇ ಅ ಪ ಹ ರ ಣ ವಾಗಿದ್ದ ಪ್ರಮೋದ್ ಶರ್ಮ ಅವರ ಮೂರು ವರ್ಷದ ಮಗ ಕೂಡ ಸಿಕ್ಕಿದ್ದಾನೆ. ಮಗುವನ್ನು ಅಪಹರಣ ಮಾಡಿದ ಅಪರಾಧದ ಅಡಿಯಲ್ಲಿ ಇಬ್ಬರೂ ಪ್ರೇಮಿಗಳನ್ನು ಕೂಡಾ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಮೋದ್ ಶರ್ಮಾ ದಂಪತಿಯನ್ನು ಠಾಣೆಗೆ ಕರೆಸಿ ಆ ಪ್ರೇಮಿಗಳ ಜೊತೆ ಇದ್ದ‌ ಹುಡುಗನನ್ನು ತೋರಿಸಿದ್ದಾರೆ. ಆಗ ಪ್ರಮೋದ್ ಶರ್ಮಾ ತಮ್ಮ ಮಗನೆಂದು ಪೋಲಿಸರ ಬಳಿ ತಿಳಿಸಿದ್ದು, ನಿತೇಶ್ ತಮ್ಮ ಸ್ಟಾಲ್ ಗೆ ಬರ್ಗರ್ ತಿನ್ನಲು ಬರುತ್ತಿದ್ದ ಎನ್ನುವ ವಿಷಯ ಕೂಡಾ ತಿಳಿಸಿದ್ದಾರೆ. ಪ್ರಮೋದ್ ಅವರಿಗೆ ಅವರ ಮಗ ಸಿಕ್ಕಿದ್ದು ಅವರಿಗೆ ಸಂತೋಷ ನೀಡಿದೆ.