ಮಗ ಕಲ್ಯಾಣ ಮಂಟಪದಿಂದ ಪಲಾಯನ, 65 ವರ್ಷದ ಮಾವ 25 ವರ್ಷದ ಸೊಸೆಯೊಂದಿಗೆ ಮಾಡಿಕೊಂಡ ವಿವಾಹ!
ಮನೆಯವರು ಮಗನ ಮದುವೆಯನ್ನು ಅರೇಂಜ್ ಮಾಡಿದ್ದರು. ಇನ್ನೇನು ಮದುವೆಯಾಗಬೇಕೆನ್ನುವಷ್ಟರಲ್ಲಿ ಮಗ ಕಲ್ಯಾಣ ಮಂಟಪದಿಂದಲೇ ಪರಾರಿಯಾದನು. ಆ ಹುಡುಗನ ಪ್ರೇಮ ಸಂಬಂಧ ಪುಣೆಯಲ್ಲಿಯ ಹುಡುಗಿಯ ಜೊತೆಗೆ ಇತ್ತು.
ಮಗ ಓಡಿ ಹೋಗಿದ್ದರಿಂದ ಎರಡು ಕುಟುಂಬದವರು ಅವಮಾನಕ್ಕೆ ಒಳಗಾದರು. ಹಾಗಾಗಿ ಹುಡುಗಿಯ ಮನೆಯವರು ಹುಡುಗನ ತಂದೆ ಅಂದರೆ ಭಾವಿ ಮಾವನ ಜೊತೆಗೆ ಹುಡುಗಿಯ ಮದುವೆಯನ್ನು ನೆರವೇರಿಸಿ ಕೊಟ್ಟರು.
ಹುಡುಗಿಯ ವಯಸ್ಸು 25 ಮತ್ತು ಮದುಮಗನ ವಯಸ್ಸು 65. ಮೊದಲು ಹುಡುಗಿಯ ಮಾವನಾಗುವವನು ಈಗ ಹುಡುಗಿಯ ಗಂಡನಾದನು. ಪ್ರಸ್ತುತ ಘಟನೆ ಬಿಹಾರದ ಒಂದು ಚಿಕ್ಕ ಊರಿನಲ್ಲಿ ಘಟಿಸಿದೆ. ವಿಶೇಷವೆಂದರೆ, ಮಾವನು ಸಹಿತ ಮದುವೆಗೆ ವಿರೋಧ ಮಾಡಲಿಲ್ಲ.

ಬಿಹಾರದ ಸಮಸ್ತಿಪುರ್ ಜಿಲ್ಲೆಯ 65 ವರ್ಷ ವಯಸ್ಸಿನ ರೋಷನ್ ಲಾಲ್ ಈತ ಮದುವೆಯಾದ ವ್ಯಕ್ತಿ. ಈ ಸುದ್ದಿ ಕೇಳಿದ ಊರಿನ ಪ್ರತಿಯೊಬ್ಬನಿಗೆ ಆಶ್ಚರ್ಯವಾಗಿದೆ.
ಸೊಸೆಯಾಗುವಳನ್ನೇ ಪತ್ನಿಯನ್ನಾಗಿ ಮಾಡಿಕೊಳ್ಳಲು ಕಾರಣವೇನು?
ಮದುವೆಯ ಕಾರಣ ರೋಷನ್ ಲಾಲ್ ಗೆ ಕೇಳಲಾಗಿ, ನನಗೆ ಹುಡುಗಿಯ ಕಡೆಯವರು ತುಂಬಾ ಒತ್ತಾಯ ಮಾಡಿದರು. ಅದಕ್ಕಾಗಿ ಈ ಮದುವೆಗೆ ನಾನು ಒಪ್ಪಿದೆನು. ಮಗ ಕಲ್ಯಾಣ ಮಂಟಪದಿಂದ ಪರಾರಿಯಾದ ಕಾರಣದಿಂದ ಹುಡುಗಿಯ ಮನೆಯ ಕಡೆಯವರಿಗೆ ಅವಮಾನವಾದಂತೆನಿಸಿ ಅವರು ನನಗೆ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದರು, ಎಂದು ಹೇಳಿದನು.
ಇಲ್ಲಿ ಕುಟುಂಬದ ಅವಮಾನವೇ ಈ ರಾದ್ಧಾಂತಕ್ಕೆ ಕಾರಣ ಆದ್ದರಿಂದಲೇ ಹುಡುಗಿಯ ಮನೆಯವರು ಮಾವನಾಗುವ ವ್ಯಕ್ತಿಗೆ ಪತಿ ಮಾಡಿದರು, 65 ವರ್ಷದ ವ್ಯಕ್ತಿಯೂ ಇಲ್ಲಿ ವಿರೋಧ ಮಾಡದೆ ತುಟಿ ಬಿಚ್ಚದೆ ಮದುವೆಯಾದ. ಅಂದಾಗ ಇವರಿಬ್ಬರೂ ಕೂಡಿ ಹುಡುಗಿಯ ಜೀವನದ ಜೊತೆಗೆ ಮಾಡಿದ ಆಟ ಎಷ್ಟರ ಮಟ್ಟಿಗೆ ಸರಿ, ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆ ಏನು ಹೇಳುವಿರಾ?