ಮದುಮಕ್ಕಳಿಬ್ಬರೂ ಕೈ ಹಿಡಿದು ಕಾರಿನ ಹಿಂದೆ ದುಂಬಾಲು ಬಿದ್ದು ಓಡುತ್ತಿರುವ ಅಪರೂಪದ ದೃಶ್ಯದ ವಿಡಿಯೋ ವೈರಲ್! ಅಷ್ಟಕ್ಕೂ ಕಾರಣವೇನು ನೋಡಿ!
ಸದ್ಯ ಎಲ್ಲ ಕಡೆಗೆ ಮದುವೆಗಳು ಜೋರಾಗಿಯೇ ನಡೆದಿವೆ. ಈ ಮದುವೆಯಲ್ಲಿ ನಡೆಯುವ ವಿಶೇಷ ಪ್ರಸಂಗಗಳ ನಾನಾ ವಿಧದ ವಿಡಿಯೋಗಳು ಸೋಶಿಯಲ್ ಮೀಡಿಯಾದ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಿಂದ ಹಿಡಿದು ಫೇಸ್ಬುಕ್ ಹಾಗೂ ವಾಟ್ಸ್ಅಪ್ ಗಳಲ್ಲಿ ತುಂಬಾ ವೈರಲ್ ಆಗುತ್ತಿರುತ್ತವೆ. ಇದೇ ರೀತಿಯ ಮದುವೆಯ ನಂತರದ ತುಂಬಾ ಅಪರೂಪದ ದೃಶ್ಯ ಒಂದು ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಕಾಣಲು ಸಿಗುತ್ತಿದೆ.
ಈ ವಿಡಿಯೋದಲ್ಲಿ ಕಂಡುಬರುವ ಹಾಗೆ ಮದುಮಗ ಹಾಗೂ ಮದುಮಗಳು ಇಬ್ಬರೂ ಜೊತೆಯಾಗಿ ಮದುಮಕ್ಕಳ ವೇಷದಲ್ಲಿ ತುಂಬಾ ವೇಗವಾಗಿ ಕಾರಿನ ಹಿಂದೆ ಓಡುತ್ತಿರುವುದು ಕಂಡುಬರುತ್ತಿದೆ. ಸರಿಯಾಗಿ ವೀಕ್ಷಿಸಿ ನೋಡಿದಾಗ ಈ ದೃಶ್ಯ ಮದುವೆಯ ವಿಧಿ ವಿಧಾನಗಳು ಪೂರ್ಣವಾದ ನಂತರ ಮಗಳಿಗೆ ಬೀಳ್ಕೊಡುವ ಸಂದರ್ಭದಲ್ಲಿ ನಡೆದ ದೃಶ್ಯವಿರುವ ಹಾಗೆ ಕಂಡುಬರುತ್ತಿದೆ. ಕಾರಣ ಅಕ್ಷತೆಯ ಮುಹೂರ್ತ ಮುಗಿದ ನಂತರ ಇಬ್ಬರು ಮದುಮಕ್ಕಳು ವಧು-ವರರ ಡ್ರೆಸ್ ನಲ್ಲಿದ್ದು ವಧು ವರನ ಕೈಹಿಡಿದು ವರನಿಗಿಂತಲೂ ತುಂಬಾ ವೇಗದಲ್ಲಿಯೇ ಓಡುತ್ತಿದ್ದಾಳೆ. ಇವರ ಜೊತೆಗೆ ಮದುವೆಯಲ್ಲಿ ಶಾಮೀಲಾದ ಇನ್ನು ಅನೇಕರು ಓಡುತ್ತಿರುವುದು ಕಂಡು ಬರುತ್ತಿದೆ. ಮದುವೆಯ ನಂತರದಲ್ಲಿ ಕಂಡುಬಂದ ಈ ದೃಶ್ಯ ನಿಜಕ್ಕೂ ತುಂಬಾ ಅಪರೂಪದ್ದಾಗಿದೆ. ಈ ರೀತಿ ಕಾರಿನ ಹಿಂದೆ ದುಂಬಾಲು ಬಿದ್ದು ಮದುಮಕ್ಕಳ ಓಡಾಟದ ವಿಡಿಯೋ ಮೊದಲೆಂದು ಎಲ್ಲಿಯೂ ಕಂಡುಬಂದಿಲ್ಲ. ಇವರು ಯಾಕೆ ಈ ರೀತಿಯಾಗಿ ಓಡುತ್ತಿದ್ದಾರೆ ಎಂಬುದಕ್ಕೆ ಕಾರಣ ತುಂಬಾ ವಿಚಿತ್ರವಾಗಿದೆ. ಕೆಲವರು ಹೇಳುವ ಪ್ರಕಾರ ಮದುವೆ ನಂತರ ಮಗಳಿಗೆ ಬೀಳ್ಕೊಡುವ ಸಂದರ್ಭದಲ್ಲಿ ಈ ರೀತಿಯ ಒಂದು ವಿಧಾನ, ಪದ್ಧತಿಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ವಧು-ವರರು ಈ ರೀತಿ ಕಾರಿನ ಹಿಂದೆ ಅಥವಾ ವಾಹನದ ಹಿಂದೆ ಓಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ rkkhan6549 ಹೆಸರಿನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 12.3 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಹಾಗೂ 4.5 ಲಕ್ಷ ಜನ ವಿಡಿಯೋಗೆ ಲೈಕ್ ಮಾಡಿದ್ದಾರೆ.