ಮದುಮಗನ ಬದಲಾಗಿ ಆತನ ಮಿತ್ರನ ಜೊತೆಗೆ ಮದುವೆಗೆ ಪಟ್ಟು ಹಿಡಿದ ವಧು, ಪಂಚಾಯ್ತಿ ನೆರೆದ ನಂತರ…
ಉತ್ತರ ಪ್ರದೇಶದ ಗೋರಖಪೂರದ ಸಂತಕಬೀರ ನಗರದ ಧನಘಟಾ ಠಾಣೆಯ ಕ್ಷೇತ್ರದ ಊರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ, ಅದನ್ನು ಕೇಳಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಮದುವೆಯಲ್ಲಿ ಹೊಸ್ತಿಲು ಪೂಜೆ ಶುರು ಆಗುತ್ತಲೇ ಅಲ್ಲಿ ಗದ್ದಲ ಉಂಟಾಗಲು ಪ್ರಾರಂಭವಾಯಿತು. ಕಾರಣ, ವಧು ಮನೆಯೊಳಗಿನಿಂದ ಮದುಮಗನನ್ನು ನೋಡಿ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಮದುಮಗನ ಜೊತೆಗೆ ಬಂದಿದ್ದ ಆತನ ಗೆಳೆಯನ ಕಡೆಗೆ ಬೆರೆಳು ಮಾಡುತ್ತ ಆತನನ್ನು ಮದುವೆ ಯಾಗುವೆ ಎಂದು ಮದುಮಗಳು ಹೇಳಿದಳು. ಮದುಮಗಳು ಈ ಮಾತನ್ನೇ ಸತತವಾಗಿ ಹೇಳುತ್ತಿದ್ದಳು.
ಮದುಮಗಳ ಈ ಅಟ್ಟಹಾಸದಿಂದ ಎಲ್ಲ ಪೂಜೆಕಾರ್ಯಗಳು ನಿಂತು ಹೋದವು. ಎರಡು ಪರಿವಾರದ ಸದಸ್ಯರು ಮದುಮಗಳಿಗೆ ಸಾಕಷ್ಟು ತಿಳಿಸಿ ಹೇಳಿದರೂ ಸಹಿತ ಅವಳು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಜಗದೀಶ್ ಪೂರ್ ಪೊಲೀಸ್ ಸ್ಟೇಷನ್ ವರೆಗೆ ಮಾಹಿತಿ ತಲುಪಿತು. ತಕ್ಷಣ ಅಲ್ಲಿಯ ಪ್ರಭಾರಿ ಚತುರ್ಭುಜ ಪಾಂಡೆ ಯವರು ಸರಿಯಾದ ಸಮಯಕ್ಕೆ ಬಂದು ವಧುವಿಗೆ ತಿಳಿಹೇಳಲು ಪ್ರಯತ್ನಿಸಿದರು.

ಈ ಮಧ್ಯದಲ್ಲಿ ವಧು, ನನ್ನ ಮದುವೆಯ ಮಾತುಕತೆ ಈ ಬಂದ ವರನ ಜೊತೆಗೆ ಆಗಿಲ್ಲ ಹೊರತಾಗಿ ಆತನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಆಗಿತ್ತು. ನಾನು ಯಾವ ಹುಡುಗನ ಜೊತೆಗೆ ಫೋನ್ ನಲ್ಲಿ ಮತನಾಡುತ್ತಿದ್ದೆ ಆತನು ಇವನಲ್ಲ ,ಮದುಮಗನ ಗೆಳೆಯ ನಿದ್ದಾನೆ ಎಂದು ನಾನು ತಿಳಿದುಕೊಂಡಿದ್ದೆ ಎಂದು ಅವರ ಮೇಲೆ ದೂರು ನೀಡಿದಳು.
ಅಲ್ಲಿದ್ದ ಜನರು ಮದುಮಗಳಿಗೆ ಬಹಳಷ್ಟು ತಿಳಿಸಿ ಹೇಳಿದ ಮೇಲೆ ಮದುವೆಯಾಗಲು ತಯಾರಾದಳು. ರಾತ್ರಿ 2 ಗಂಟೆಯಲ್ಲಿ ದ್ವಾರಪೂಜೆಯ ಕಾರ್ಯ ಪೂರ್ಣ ಮಾಡಲಾಯಿತು. ತದನಂತರ ಮದುವೆ ಸಹ ಮಾಡಲಾಯಿತು. ಈ ಸಂಬಂಧದ ಕುರಿತು ಅಲ್ಲಿಯ ಪೊಲೀಸರ ಹೇಳಿಕೆ ಏನೆಂದರೆ, ಮದುಮಗಳ ಕುಟುಂಬದವರಿಗೆ ಯಾರೋ ತಲೆ ತುಂಬಿದ್ದರು. ಅವರ ಜೊತೆಗೆ ಮಾತುಕತೆ ಮಾಡಿದ ನಂತರ ಅವರ ಸಂ’ಶಯ ದೂರವಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.