ಮದುವೆಗೆ ಹುಡುಗಿ ಕೊಡಲ್ಲ ಅಂದಿದ್ದಕ್ಕೆ, ಹುಡುಗಿಯ ತಾಯಿಯನ್ನೇ ಯಾಮಾರಿಸಿ ಓಡಿಸಿಕೊಂಡು ಹೋದ ಭೂಪ!

ಪ್ರೇಯಸಿಗಾಗಿ ವ್ಯಕ್ತಿ ಯಾವ ಲೇವಲ್ ಗೆ ಹೋಗುತ್ತಾನೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಒನ್ ಸೈಡ್ ಪ್ರೀತಿಯಿಂದ ಅನೇಕ ದುರ್ಭಾಗ್ಯಕರ ಘಟನೆಗಳು ನಡೆಯುತ್ತವೆ.

ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯ ತರುಣನೊಬ್ಬ ತನಗೆ ಮಗಳನ್ನು ಕೊಡಲು ನಿರಾಕರಿಸಿದಾಗ ಆ ಹುಡುಗಿಯ ತಾಯಿಯನ್ನು ಮರಳು ಮಾಡಿ ಆಕೆಯನ್ನೇ ತನ್ನ ಬುಟ್ಟಿಗೆ ಹಾಕಿಕೊಂಡು ಯಾಮಾರಿಸಿ ಜೊತೆಗೆ ಓಡಿಸಿಕೊಂಡು ಹೋಗಿದ್ದಾನೆ. ಈ ಘಟನೆಯಿಂದ ಆ ಮಹಿಳೆಯ ಮನೆಯವರೆಲ್ಲರೂ ಶಾಕ್ ನಲ್ಲಿದ್ದಾರೆ.

ವಿಸ್ತೃತ ವರದಿಯ ಪ್ರಕಾರ ಕೆಲವು ದಿವಸಗಳ ಹಿಂದೆ ತರುಣ ಹುಡುಗಿಯ ಮನೆಗೆ ಹುಡುಗಿಯನ್ನು ನೋಡಲು ಹೋಗಿದ್ದ. ಆತನಿಗೆ ಹುಡುಗಿ ಹಿಡಿಸಿದಾಗ ಹುಡುಗಿಯ ಮನೆಯವರು ಹುಡುಗನಿಗೆ ಮಗಳನ್ನು ನೀಡಲು ನಿರಾಕರಿಸಿದರು. ಇದು ಹುಡುಗನಿಗೆ ಯಾಕೋ ರುಚಿಸಲಿಲ್ಲ. ಅದೇ ಸಿಟ್ಟಿನ ಭರದಲ್ಲಿ ಹುಡುಗಿಯ ಮನೆಯವರಿಗೆ ಚಾಕುವಿನ ಭಯ ತೋರಿಸಿ ನಿಮ್ಮ ಮಗಳಿಗೆ ಓಡಿಸಿಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ. ಆದರೂ ಹುಡುಗಿಯ ಮನೆಯವರೂ ಅದಕ್ಕೆ ಸೊಪ್ಪು ಹಾಕದೆ ಮದುವೆಗೆ ನಿರಾಕರಿಸಿದರು.

ಇಷ್ಟಾದರೂ ತರುಣನು ಆ ಹುಡುಗಿಯ ತಾಯಿಯ ಜೊತೆಗೆ ಫೋನ್ ನಲ್ಲಿ ಸಂಪರ್ಕವಿಟ್ಟಿದ್ದನು. ಈ ಮಾತುಕತೆಯಲ್ಲಿ ತರುಣ ಹುಡುಗಿಯ ತಾಯಿಯನ್ನು ಸರಿಯಾಗಿ ತನ್ನ ಸೆಳೆತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಮುಂದೆ ಆಕೆಯನ್ನೇ ಓಡಿಸಿಕೊಂಡು ಹೋಗಿದ್ದಾನೆ. ಹುಡುಗಿಯ ತಂದೆ ಮನೆಗೆ ಬಂದ ನಂತರ ಮನೆಯಲ್ಲಿ ಹೆಂಡತಿ ಕಾಣಿಸದಾದಾಗ ಗಂಡ ಕಾಲ್ ಮಾಡಿ ಕೇಳಿದ. ಆದರೆ ಆ ಕಡೆಯಿಂದ ಬೇರೆಯೇ ಉತ್ತರ ಬಂದಿತು. ಹುಡುಗಿಯ ತಾಯಿಯು ಹುಡುಗಿಯ ತಂದೆಗೆ ಸ್ಪಷ್ಟವಾಗಿ, ನಾವಿಬ್ಬರೂ ಮದುವೆಯಾಗುತ್ತೇವೆ ಹಾಗೂ ಕೂಡಿ ಇರುವ ವಿಚಾರ ಮಾಡಿದ್ದೇವೆ ಎಂದು ತನ್ನ ಗಂಡನಿಗೆ ಹೇಳಿದಳು.

ಏತನ್ಮಧ್ಯೆ ಓಡಿ ಹೋದ ತಾಯಿಯ ವಯಸ್ಸು 41 ಇದ್ದು ಆಕೆಗೆ 5 ಮಕ್ಕಳ ಜೊತೆಗೆ 4 ಮೊಮ್ಮಕ್ಕಳು ಇವೆ. ಆಕೆಯ ಮದುವೆಗೆ 25 ವರ್ಷಗಳು ಸಹ ಪೂರ್ಣವಾಗಿವೆ. ಹುಡುಗಿಯ ತಾಯಿ ಮಾಡಿದ ಈ ಪ್ರತಾಪದಿಂದ ಮನೆಯವರೆಲ್ಲರೂ ಚಿಂತೆಯಲ್ಲಿದ್ದಾರೆ.