ಮದುವೆಯಲ್ಲಿ ಕೇಳಿದ ಒಂದೇ ಪ್ರಶ್ನೆಗೆ ಮದುಮಗಳಾದಳು ನಿರುತ್ತರ! ವಿಡಿಯೋದಲ್ಲಿ ನೋಡಿ ಮದುಮಗಳ ಪರದಾಟ…
ಮದುವೆಯಲ್ಲಿ ನಡೆದ ವಿವಿಧ ವಿಶೇಷ ಪ್ರಸಂಗಗಳ ವೈರಲ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಅನೇಕ ರೀತಿಯ ವಿಚಿತ್ರ ಪ್ರಸಂಗಗಳು ಮದುವೆಯಲ್ಲಿ ನಡೆಯುತ್ತವೆ. ಅವುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗುತ್ತವೆ. ಇಂತಹ ವಿಶೇಷ ವಿಡಿಯೋಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟವಾಗುತ್ತವೆ. ಸದ್ಯ ಇಂತದ್ದೇ ಮೋಜಿನ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಮದುಮಕ್ಕಳು ಇಬ್ಬರು ಜೊತೆ ಜೊತೆಯಾಗಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಬೇರೆ ಯುವತಿಯೊಬ್ಬಳು ಮದುಮಗಳಿಗೆ ಪ್ರಶ್ನೆ ಒಂದನ್ನು ಹಾಕುತ್ತಾಳೆ. ಹಾಗೆ ನೋಡಲು ಈ ಪ್ರಶ್ನೆ ಯಾವುದೇ ICSC ಸಿಲಬಸ್ ದ್ದೇನಲ್ಲ. ತುಂಬಾ ಸಹಜ ಮತ್ತು ಸರಳವಾದ ಪ್ರಶ್ನೆಯೇ ಆದರೂ ಮದುಮಗಳು ಮಾತ್ರ ಉತ್ತರ ನೀಡದೆ ಕಕ್ಕಾಬಿಕ್ಕಿಯಾಗಿ ಹೋಗುತ್ತಾಳೆ. ಅದ್ಯಾವ ಪ್ರಶ್ನೆಯನ್ನು ಆಕೆಗೆ ಕೇಳಲಾಗಿತ್ತು ನೋಡಿ.
ಯುವತಿ ಮದುಮಗಳಿಗೆ, ಮದುವೆಯ ನಂತರ ನಿನ್ನ ಪತಿಯ ಮೊಬೈಲ್ ಯಾವತ್ತೂ ಚೆಕ್ ಮಾಡುವುದಿಲ್ಲ ತಾನೇ? ಎಂದು ಕೇಳುತ್ತಾಳೆ. ಆ ಪ್ರಶ್ನೆ ಮದುಮಗಳ ದಿಕ್ಕನ್ನೇ ತಪ್ಪಿಸಿಬಿಡುತ್ತದೆ. ಯುವತಿ ಕೇಳಿದ ಆ ಪ್ರಶ್ನೆಗೆ ಮದುಮಗಳಿಗೆ ಏನು ಉತ್ತರ ನೀಡಬೇಕೆಂಬುದೇ ತೋಚುವುದಿಲ್ಲ. ಹೀಗಾಗಿ ಆಕೆ ಪೂರ್ತಿ ತಬ್ಬಿಬ್ಬಾಗಿಬಿಡುತ್ತಾಳೆ. ಆ ಸಂದರ್ಭದಲ್ಲಿ ಮದುಮಗಳ ಮುಖದ ಭಾವ ನೋಡುವಂತಿತ್ತು.
ವಿಡಿಯೋ ನೋಡಿ
View this post on Instagram
ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ witty_wedding ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದ್ದು ನೇಟಿಜನ್ಸ್ ಗಳು ಪ್ರಸ್ತುತ ವಿಡಿಯೋದ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ. ನೀವು ತಿಳಿದುಕೊಳ್ಳಿ ಮಜಾ…