ಮದುವೆಯಲ್ಲಿ ವರನಿಗೇ No Entry! ಹಾಲ್ ಹೊರಗಡೆಯೇ ಕುಳಿತು ಫೋನ್ ನಲ್ಲಿ ನೋಡುತ್ತಿದ್ದ ಸ್ವಂತದ ವೆಡ್ಡಿಂಗ್ ಕಾರ್ಯಕ್ರಮ! ಏನಿದು ಪ್ರಕರಣ? ನೋಡಿ.

ಮದುವೆಯ ಕಾರ್ಯಕ್ರಮ ಒಮ್ಮೆ ಶುರುವಾಯಿತೆಂದರೆ ಸಾಕು ಮುಗಿಯುವವರೆಗೆ ಅನೇಕ ಕೆಲಸಗಳು, ಒತ್ತಡಗಳು ಎದುರಾಗುತ್ತವೆ. ಎಲ್ಲ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆಯಲು ಸರಿಯಾದ ನಿಯೋಜನೆಯ ಅವಶ್ಯಕತೆ ಇರುತ್ತದೆ. ಆದರೂ ಮದುವೆಯಲ್ಲಿ ಎಷ್ಟೇ ಸರಿಯಾದ ನಿಯೋಜನ ಮಾಡಿದರೂ ಕೆಲವೊಂದು ಸಲ ಏನಾದರೂ ತಪ್ಪುಗಳು ನಡೆದೇ ಹೋಗುತ್ತವೆ. ಚಿಕ್ಕಪುಟ್ಟ ತಪ್ಪುಗಳಾದರೆ ಹೇಗಾದರೂ ಮ್ಯಾನೇಜ್ ಆಗುತ್ತವೆ. ಆದರೆ ಅಲ್ಲಿ ನಡೆಯುವ ಕೆಲವೊಂದು ದೊಡ್ಡ ತಪ್ಪುಗಳು ವರ್ಷಾನು ವರ್ಷಗಳವರೆಗೆ ಜನರ ಮನದಲ್ಲಿ ನೆನಪಿರುತ್ತದೆ. ಈಗ ಇದೇ ರೀತಿಯ ಒಂದು ವಿಚಿತ್ರ ಘಟನೆ ಚೀನಾದ ಬೀಜಿಂಗನಲ್ಲಿ ನಡೆದದ್ದು ವರದಿಯಾಗಿದೆ.

ಇಲ್ಲಿ ವರ ತನ್ನದೇ ಮದುವೆಯ ಕಾರ್ಯಕ್ರಮವನ್ನು ಮದುವೆ ಮಂಟಪದ ಹೊರಗೆ ಕುಳಿತು ವೀಕ್ಷಿಸಿದ್ದಾನೆ. ಕಾರಣ ಆತನಿಗೆ ಮದುವೆಯ ಹಾಲ್ ನಲ್ಲಿ ಎಂಟ್ರಿಗೆ ಅನುಮತಿ ನೀಡದ ಕಾರಣ ಈ ಇನ್ಸಿಡೆಂಟ್ ಘಟಿಸಿದೆ. ಚೀನಾದಲ್ಲಿ ನಡೆದ ಈ ವಿಚಿತ್ರ ಮದುವೆ ಪ್ರಸಂಗದ ಚರ್ಚೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ರಿಪೋರ್ಟ್ ನ ಇನ್ಸೈಡ್ ಸ್ಟೋರಿ ಪ್ರಕಾರ, ಚೀನಾದಲ್ಲಿ ಕೊರೋನಾದ ಪ್ರಕರಣಗಳು ದಿನದಿಂದ ದಿನಕ್ಕೆ ಮತ್ತೆ ಹೆಚ್ಚುತ್ತಲಿವೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ನಿಯಮಗಳನ್ನು ಮತ್ತಷ್ಟು ಕಠೋರ ಮಾಡಲಾಗಿದೆ. ಈ ಕಠೋರ ನಿಯಮಗಳ ಕಾರಣದಿಂದಾಗಿ ವರ ತನ್ನ ಮದುವೆಯ ಮಂಟಪದ ಹೊರಗೆ ಕುಳಿತು ತನ್ನದೇ ಮದುವೆಯ ಕಾರ್ಯಕ್ರಮಗಳನ್ನು ಹೊರಗಿನಿಂದ ನೋಡುವ ಪ್ರಸಂಗ ಬಂದಿತ್ತು. ಕೋರೋನಾ ನಿಯಮದಲ್ಲಿ ಹಠಾತ್ ಬದಲಾವಣೆ ಮಾಡಿರುವ ಕಾರಣದಿಂದಾಗಿ ಪ್ರಮಾದ ನಡೆದಿದೆ. ಮೊದಲು ಹೋಟೆಲ್ ಮ್ಯಾನೇಜ್ಮೆಂಟ್ ನಾಲ್ಕು ದಿವಸಗಳ ಒಳಗಿನ ಕೋರೋನಾ ಟೆಸ್ಟಿಂಗ್ ರಿಪೋರ್ಟ್ ಕೇಳಿದ್ದರು. ನಂತರ ಒಮ್ಮೆಲೆ 48 ಗಂಟೆಗಳ ಒಳಗೆ ಟೆಸ್ಟ್ ಮಾಡಿಸಿಕೊಂಡ ಕೋರೋನಾ ರಿಪೋರ್ಟ್ ಕೇಳಿದ್ದರಿಂದ ಈ ಎಲ್ಲ ಸಮಸ್ಯೆ ನಿರ್ಮಾಣವಾಗಿದೆ. ಆತನ ಹತ್ತಿರ ಹೊಸದಾದ ರಿಪೋರ್ಟ್ ಇರಲಿಲ್ಲ. ಹೀಗಾಗಿ ಮದುಮಗನಿಗೆ ಹೋಟೆಲೊಳಗೆ ಪ್ರವೇಶ ನಿರಾಕರಿಸಿದರು. ಕಡೆಗೆ ಬೇಸತ್ತು ಅಲ್ಲಿಯೇ ಸಮೀಪದ ಲ್ಯಾಬ್ ನಲ್ಲಿ ಮತ್ತೊಮ್ಮೆ ಕೋರೋನಾ ಟೆಸ್ಟ್ ಮಾಡಿಸಿಕೊಂಡ ನಂತರ ರಿಪೋರ್ಟ್ ಬರಲು ಇನ್ನಷ್ಟು ಸಮಯ ಬೇಕಾಗಿತ್ತು. ಅಲ್ಲಿಯವರೆಗೆ ಆತ ಮದುವೆಯ ಹಾಲ್ ಹೊರಗಡೆ ಕುಳಿತುಕೊಳ್ಳಬೇಕಾಯಿತು.

ಮದುವೆ ಮಧ್ಯಾಹ್ನ ಎರಡು ಗಂಟೆಗೆ ಇತ್ತು, ಮದುವೆಯ ವಿಧಿ-ವಿಧಾನಗಳು ನಡೆಯುತ್ತಲೇ ಇದ್ದವು. ಎಲ್ಲ ಕಾರ್ಯಕ್ರಮಗಳನ್ನು ಮದುಮಗ ಹೊರಗೆ ಕುಳಿತು ತನ್ನ ಮೊಬೈಲ್ ನಲ್ಲಿ ನೋಡುತ್ತಿದ್ದ. ಕೊನೆಗೆ 4:30 ಸುಮಾರಿಗೆ ಕೊರೋನಾದ ರಿಪೋರ್ಟ್ ನೆಗೆಟಿವ್ ಅಂತ ಬಂದಾಗ ಮದುಮಗನಿಗೆ ಒಳಗೆ ಪ್ರವೇಶ ನೀಡಲಾಯಿತು. ತದನಂತರ ಮದುವೆ 6:30 ಕ್ಕೆ ನೆರವೇರಿತು.