ಮದುವೆಯಾಗಿದ್ದರೂ ‘ಈ’ 50 ವರ್ಷದ ನಟಿಯೊಂದಿಗೆ ಮದುವೆಯಾಗಲು ಬಯಸಿದ್ದ ನಟ ಅನಿಲ್ ಕಪೂರ್! ಹೆಸರು ಕೇಳಿದರೆ…

ಕನ್ನಡದಲ್ಲಿ ರಮೇಶ್ ಅವರಂತೆ ಯಾವತ್ತು ಉತ್ಸಾಹದ ಚಿಲುಮೆಯಾದ ಬಾಲಿವುಡ್ ನಟ ಅನಿಲ್ ಕಪೂರ್ ಆಗಿನ ಸಮಯದ ಸೂಪರ್ ಸ್ಟಾರ್ ಆಗಿದ್ದರು. ಹಿಂದಿ ಜೊತೆಗೆ ಹಾಲಿವುಡ್ ಚಿತ್ರದಲ್ಲಿಯೂ ನಟಿಸಿ ತಮ್ಮ ಅಭಿನಯವನ್ನು ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ತಮ್ಮ ಫಿಲಂ ಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನಾಗಿ ಇಷ್ಟೊಂದು ಚಿತ್ರಗಳಲ್ಲಿ ಮಾಡುವಾಗ ಅನೇಕ ನಟಿಯರ ಜೊತೆಗೆ ಅನಿಲ್ ಅವರ ಸಂಬಂಧ ಬಂದಿದೆ. ಹೀಗಾಗಿ ಅನೇಕ ತಾರೆಯರ ಜೊತೆಗೆ ಅವರ ಅಫೆಯರ್ ಗಳಿದ್ದ ಬಗ್ಗೆ ಬಾಲಿವುಡ್ ನಲ್ಲಿ ಆಗ ಗುಸುಗುಸು ಚರ್ಚೆ ನಡೆಯುತ್ತಿತ್ತು. ಅದರಲ್ಲೇ ಒಬ್ಬಳು ನಟಿ ಅನಿಲ ಕಪೂರ್ ಜೊತೆ ಮದುವೆಯಾಗುವ ಸಲುವಾಗಿ ಯಾವುದೇ ಹಂತಕ್ಕೂ ಇಳಿಯಲು ತಯಾರಿದ್ದಳು, ಯಾರವಳು ನೋಡಿ.

ತೇಜಾಬ್ ಫೆಮ್ ಸೂಪರ್ ಡಾನ್ಸರ್ ಮಾಧುರಿ ದೀಕ್ಷಿತ್ ಅನಿಲ್ ಕಪೂರ್ ಜೊತೆಗೆ ಅನೇಕ ಚಿತ್ರಗಳನ್ನು ಮಾಡಿದರು. ಇವರಿಬ್ಬರ ಕೆಮಿಸ್ಟ್ರಿ ಚಿತ್ರ ರಸಿಕರಿಗೆ ತುಂಬಾ ಇಷ್ಟವಾಗಿತ್ತು. ಇವರಿಬ್ಬರ ಮೊದಲ ಚಿತ್ರ ಹಿಫಾಜತ್ ತೆರೆ ಕಂಡ ನಂತರದಲ್ಲಿ ಇಬ್ಬರೂ ಕೂಡಿ ಸುಮಾರು 20 ಚಿತ್ರಗಳಲ್ಲಿ ಕೆಲಸ ಮಾಡಿದರು. ಒಟ್ಟಿಗೆ ಕೂಡಿ ಕೆಲಸ ಮಾಡುವದರಿಂದಲೇ ಇವರಿಬ್ಬರಲ್ಲಿ ಅಫೇಯರ್ ಶುರುವಾಗಲು ಕಾರಣವಾಯಿತು. ಅವರ ಪ್ರೇಮ ನಂತರ ಮದುವೆಯಲ್ಲಿಯೂ ರೂಪಾಂತರವಾಗುವ ಬಗ್ಗೆ ಬಾಲಿವುಡ್ ನಲ್ಲಿ ಆಗ ಚರ್ಚೆ ತುಂಬಾ ಜೋರಾಗಿತ್ತಂತೆ. ಇದರಲ್ಲಿ ಮಾಧುರಿಯವರು ಅನಿಲ್ ರನ್ನು ಮದುವೆಯಾಗಲು ತುಂಬಾ ಉತ್ಸುಕರಾಗಿದ್ದರು.

ಅನಿಲ್ ಕಪೂರ್ ಅವರು ಮೊದಲೇ ವಿವಾಹಿತರಾದ ಕಾರಣ ಮತ್ತು ಮಾಧುರಿಯ ಜೊತೆಗೆ ಮದುವೆಯಾಗಲು ಬಯಸದ ಕಾರಣ ಇಬ್ಬರ ಪ್ರೇಮಕ್ಕೆ ಅಲ್ಲಿಯೇ ವಿರಾಮ ಬಿದ್ದಿತು. ಕೊನೆಗೆ ಮಾಧುರಿ ದೀಕ್ಷಿತ್ ಅವರು ವ್ಯವಸಾಯದಲ್ಲಿ ಡಾಕ್ಟರ್ ಆಗಿರತಕ್ಕಂತಹ ಶ್ರೀರಾಮ್ ಮಾಧವ್ ನೇನೇ ಅವರನ್ನು 1999 ರಲ್ಲಿ ಮದುವೆಯಾದರು. ಈಗ ಅವರಿಗೆ ಎರಡು ಮಕ್ಕಳು ಸಹ ಇದ್ದಾರೆ.