ಮದುವೆಯಾದ ಎರಡೇ ದಿನಕ್ಕೆ ಚಹಲ್ ಪತ್ನಿ ಧನಶ್ರೀಯ ‘ದಾರು ಬದನಾಮ್’ ಹಾಡಿಗೆ ಮಾಡಿದ ಡಾನ್ಸ್ ವೈರಲ್! ನೋಡಿ Video
ಕೊನೆಗೂ ಭಾರತದ ಯುವ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಹಲ್ ಮತ್ತು ಯೂಟ್ಯೂಬ್ ಫೇಮಸ್ ಸ್ಟಾರ್ ಹಾಗು ಕೊರಿಯೋಗ್ರಾಫರ್ ಳಾದ ಧನಶ್ರೀ ವರ್ಮ ಅವರ ಮದುವೆ ನೆರವೇರಿತು. ಧನಶ್ರೀ ವರು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಬಿತ್ತರಿಸುವ ಅನೇಕ ಡ್ಯಾನ್ಸ್ ಗಳ ಮುಖಾಂತರ ತುಂಬಾ ಫೇಮಸ್ ಆಗಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಜರಗಿತ್ತು. ಅದಾದ ನಂತರ ಚಹಲ್ ಅವರು ಐಪಿಎಲ್ t20 ಹಣಾಹಣಿಗಾಗಿ ದುಬೈಗೆ ಹೋಗಿದ್ದರು. ಧನಶ್ರೀ ಅವರು ಸಹ ಚಹಲ್ ಜೊತೆಗೆ ದುಬೈನಲ್ಲಿ ಮಸ್ತಿ ಮಾಡಿದ ಫೋಟೋಗಳು ತುಂಬಾನೇ ವೈರಲ್ ಆಗಿದ್ದವು.
ಚಹಲ್ ಅವರ ಪತ್ನಿ ಧನಶ್ರೀ ಅವರು ಡ್ಯಾನ್ಸ್ ಮಾಡಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗದಲ್ಲಿ ಸಂಚಲನ ಮೂಡಿಸುತ್ತವೆ.
ಈಗ ಅವರ ಮದುವೆಯಾದ ಎರಡನೇ ದಿನವೇ ಮಾಡಿದ ಡ್ಯಾನ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ‘ದಾರು ಬದನಾಮ್ ಕರ್ದಿ’ ಹಾಡಿನ ಮೇಲೆ ಮಾಡಿದ ಡ್ಯಾನ್ಸ್ ತುಂಬಾ ವೈರಲ್ ಆಗಿದೆ. ಈ ವಿಡಿಯೋ ಹಳೆಯದಾದರೂ ಅವರ ಮದುವೆಯಾದ ಎರಡನೇ ದಿನದಿಂದ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು ಸಹ ಅನೇಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಧನಶ್ರೀ ವರ್ಮ ಅವರು ಮುಂಬೈ ದವರಾಗಿದ್ದು ಟಿಕ್ ಟಾಕ್ ನಲ್ಲೂ ಸಹ ತುಂಬಾ ಆಕ್ಟಿವ್ ಆಗಿದ್ದರು. ಯಾವಾಗ ಚಹಲ್ ಅವರ ಜೊತೆಗೆ ನಿಶ್ಚಿತಾರ್ಥವಾಯಿತು, ಆಗ ಹಠಾತ್ ಬೆಳಕಿಗೆ ಬಂದರು. ಇದರಿಂದ ಅವರ ಜನಪ್ರಿಯತೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಗಳ ಸಂಖ್ಯೆ ಒಮ್ಮೆಲೆ ಹೆಚ್ಚಿತು. ಧನಶ್ರೀ ಯವರು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಡಾನ್ಸ್ ಅಪ್ಲೋಡ್ ಮಾಡಿದ ನಂತರ ಅವರ ಫ್ಯಾನ್ಸ್ ಗಳು ಈ ಹಾಡಿನ ಮೇಲೆ ಮುಗಿಬಿದ್ದಿದ್ದಾರೆ. ಅವರ ಯುಟ್ಯೂಬ್ ಚಾನೆಲ್ ಗೆ ಒಟ್ಟು 20 ಲಕ್ಷ ಸಬ್ ಸ್ಕ್ರೈಬರ್ಸ್ ಇದ್ದಾರೆ. ಅವರ ಈ ವಿಡಿಯೋವನ್ನು ಇಲ್ಲಿಯವರೆಗೆ 73 ಲಕ್ಷ ಜನರು ನೋಡಿದ್ದಾರೆ. ಚಹಲ್ ಅವರು ಸಹ ಸೋಶಿಯಲ್ ಮೀಡಿಯಾದಲ್ಲಿ ಯಾವತ್ತು ಆಕ್ಟಿವ್ ಇರುತ್ತಾರೆ. ಟಿಕ್ ಟಾಕ್ ಬ್ಯಾನ್ ಆಗುವ ಮುನ್ನ ಧನಶ್ರೀ ಅವರ ಎಷ್ಟು ವಿಡಿಯೋ ಗಳನ್ನು ಚಹಲ್ ಅವರೇ ಶೇರ್ ಮಾಡಿದ್ದಾರೆ.
ವಿಡಿಯೋ ನೋಡಿ
ಯೂಟ್ಯೂಬ್ ಜೊತೆಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿಯೂ ಧನಶ್ರೀ ಯವರಿಗೆ 25 ಲಕ್ಷ ಫಾಲೋವರ್ಸ್ ಗಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿಯೂ ಸಹ ತಮ್ಮ ಡ್ಯಾನ್ಸ್ ನ ಅನೇಕ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಐಪಿಎಲ್ ಪಂದ್ಯಗಳ ಸಮಯದಲ್ಲಿ ಧನ ಶ್ರೀಯವರು ಚಹಲ್ ಮತ್ತು ಆರ್ಸಿಬಿ ತಂಡಕ್ಕೆ ಪ್ರೋತ್ಸಾಹ ನೀಡಲು ದುಬೈ ತೆರಳಿದ್ದರು. ದುಬೈನಲ್ಲಿ ಬಾಲಿವುಡ್ ಹಾಡುಗಳ ಮೇಲೆ ಕುಣಿದ ಕೆಲವೊಂದು ಡಾನ್ಸಗಳ ವಿಡಿಯೋ ಆ ಸಮಯದಲ್ಲಿ ತುಂಬಾ ವೈರಲ್ ಆಗಿದ್ದವು. ಸದ್ಯ ಚಹಲ್ ಅವರು ಮದುವೆ ಕಾರಣಕ್ಕಾಗಿ ಭಾರತ ತಂಡದಿಂದ ಹೊರಗಿದ್ದಾರೆ. ಮುಂಬರುವ ಇಂಗ್ಲೆಂಡ್ ಜೊತೆಗಿನ ಪಂದ್ಯಗಳಿಗಾಗಿ ಚಹಲ್ ಅವರ ಪ್ರಾಕ್ಟೀಸ್ ಶುರುವಾಗಿದೆ. ಮದುವೆಯಾದ ನಂತರ ಚಹಲ್ ಅವರು ತಮ್ಮ ಹೆಂಡತಿಯ ಸೂಚನೆಗಳ ಮೇಲೆ ಕುಣಿಯುತ್ತಾರೋ ಅಥವಾ ಹೆಂಡತಿಯನ್ನೇ ಕುಣಿಸುತ್ತಾರೋ ನೋಡಬೇಕಿದೆ.