ಮದುವೆಯಾದ 13 ವರ್ಷದಿಂದ ‘ಈ’ ಹಠ ಮಾಡಿತ್ತಿದ್ದಾಳೆ ಐಶ್ವರ್ಯ; ಆದರೆ ಅಭಿಷೇಕ್ ಇನ್ನೂ ಈಡೇರಿಸಿಲ್ಲ!

1994 ರಲ್ಲಿ ವಿಶ್ವಸುಂದರಿಯ ಪುರಸ್ಕಾರವನ್ನು ಕರ್ನಾಟಕದ ಈ ಸುಂದರಿ ಜಗತ್ತಿನ ತುಂಬ ಸದ್ದು ಮಾಡಿದಳು. ಮುಂದೆ ಅಲ್ಲಿಂದಲೇ ಐಶ್ವರ್ಯ ರೈ ತಮ್ಮ ಯಶಸ್ಸಿನ ಏಣಿಯನ್ನು ಏರುತ್ತಾ ಹೋದರು. ನೀಲಿ ಕಣ್ಣುಗಳ ಈ ತಾರೆಗೆ ಮುಂದೆ ಐಶ್ವರ್ಯ ಬಾಲಿವುಡ್ನಲ್ಲಿ ಸ್ಥಾನವನ್ನು ಗಿಟ್ಟಿಸಲು ಹೆಚ್ಚು ಕಷ್ಟವಾಗಲಿಲ್ಲ.

ಅದ್ಭುತ ಸೌಂದರ್ಯದ ಜೊತೆಗೆ ಉತ್ತಮ ನಟನೆ ಹಾಗೂ ಡಾನ್ಸ್ ಈ ಕಾರಣಗಳಿಂದ ಬಾಲಿವುಡ್ನಲ್ಲಿ ತಮ್ಮ ಸ್ಥಾನವನ್ನು ಗಳಿಸಿಕೊಂಡರು. ದೇಶ-ವಿದೇಶಗಳಲ್ಲಿ ಕೋಟ್ಯಾವಧಿ ಅಭಿಮಾನಿಗಳನ್ನು ಹೊಂದಿರುವ ಐಶ್ವರ್ಯ ರೈ ಅವರು 13 ವರ್ಷಗಳ ಹಿಂದೆ ಅಭಿಷೇಕ್ ಅವರನ್ನು ಮದುವೆಯಾಗಿ ಬಚ್ಚನ್ ಪರಿವಾರದ ಸೊಸೆಯಾದರು. ವಯಸ್ಸಿನಲ್ಲಿ ಅಭಿಷೇಕ್ ಅವರಿಗಿಂತ ಮೂರು ವರ್ಷ ದೊಡ್ಡವರಾದ ಐಶ್ವರ್ಯ ಅವರು ಈಗ 47 ವರ್ಷದವರಾಗಿದ್ದರೂ ಇಂದಿಗೂ ಸೌಂದರ್ಯದಲ್ಲಿ ಹೊಸ ನಟಿಯರನ್ನು ಮೀರಿಸುತ್ತಾರೆ.

ಮೀಡಿಯಾ ರಿಪೋರ್ಟಗಳ ಪ್ರಕಾರ ಐಶ್ವರ್ಯ ರೈ ಅವರು ಮೊದಲಿನಿಂದಲೂ ಸ್ವತಂತ್ರವಾಗಿ ಇರುವ ಇಚ್ಛೆಯನ್ನು ಹೊಂದಿದ್ದಾರೆ. ಇದಕ್ಕೆ ಅಭಿಷೇಕ್ ಅವರು ಸ್ಪಂದಿಸಿಲ್ಲ. ಅದಾದ ನಂತರ 2015 ರಲ್ಲಿ ದೊಡ್ಡ ಮನೆಯೊಂದನ್ನು ಖರೀದಿಸಿದ್ದಾರೆ. ಐಶ್ವರ್ಯ ರೈ ಅವರಿಗೆ ಈ ಮನೆಯಲ್ಲಿಯೂ ವಾಸ್ತವ್ಯ ಮಾಡುವ ಆಸೆ ಇದೆಯಂತೆ. ಆದರೆ ಇದಕ್ಕೆ ಅಭಿಷೇಕ್ ಅವರು ತಯಾರಿಲ್ಲ. ಸದ್ಯಕ್ಕೆ ಅಭಿಷೇಕ್-ಐಶ್ವರ್ಯ ದಂಪತಿಗಳು ಅಮಿತಾಭ್ ಬಚ್ಚನ್ ಅವರ ಜುಹುದಲ್ಲಿಯ ಜಲಸಾ ಹೆಸರಿನ ಬಂಗಲೆಯಲ್ಲಿ ಅಮಿತಾಬ್-ಜಯಾ ಅವರನ್ನೊಳಗೊಂಡ ತಮ್ಮ ಪೂರ್ಣ ಕುಟುಂಬದೊಂದಿಗೆ ಇದ್ದಾರೆ. ಆದರೆ ಐಶ್ವರ್ಯ ರೈ ಅವರು ತಾವು ಖರೀದಿಸಿದ ಮನೆಯಲ್ಲಿರುವದಕ್ಕೆ ಆಗ್ರಹಿಸುತ್ತಿದ್ದಾರೆ. ಅಭಿಷೇಕ್ ಅವರಿಗೆ ತಂದೆ ತಾಯಿಯರ ಜೊತೆ ಇರುವ ಇಚ್ಛೆ ಇದೆ.

ಈ ದಂಪತಿಗಳು ಇತ್ತಿತ್ತಲಾಗಿ ಮುಂಬಯಿಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿ 5500 ಸ್ಕ್ವೇರ್ ಫೀಟ್ ಏರಿಯಾದ ಲಕ್ಸುರಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದಾರೆ. ಈ ಹೊಸ ಮನೆಯ ಬೆಲೆ ಸುಮಾರು 21 ಕೋಟಿ ರೂಪಾಯಿಗಳಷ್ಟು ಇದೆ.