ಮದುವೆಯಾದ 8 ವರ್ಷಗಳ ನಂತರ ಪ್ರಿಯಕರನ ಜೊತೆ ಇರಲು ಪಟ್ಟು ಹಿಡಿದ 2 ಮಕ್ಕಳ ತಾಯಿ! ಏನಿದು ಲವ್ ಸ್ಟೋರಿ ನೋಡಿ.
ರಾಜಸ್ಥಾನದ ಭರತಪುರದಲ್ಲಿಯ ಒಂದು ಲವ್ ಸ್ಟೋರಿ ವೈರಲ್ ಆಗಿದೆ. ಪ್ರೇಮಿಯೊಬ್ಬ ಪೊಲೀಸ್ ರ ಬಳಿಯೇ ಕುಳಿತಿದ್ದಾನೆ. ಅಷ್ಟೇ ಅಲ್ಲ ಆತ ವಿಷ ತೆಗೆದುಕೊಂಡು ಸಾಯುವ ಯತ್ನವನ್ನೂ ಮಾಡಿದ್ದಾನೆ. ಎರಡು ಮಕ್ಕಳ ತಾಯಿ ತನ್ನ ಗಂಡನನ್ನು ತೊರೆದು ಪ್ರೇಮಿಯ ಜೊತೆಗೆ ಇರುವ ಪಟ್ಟು ಹಿಡಿದಿದ್ದಾಳೆ.
ಸುದ್ದಿ ಮೂಲಗಳ ಪ್ರಕಾರ ಭರತಪುರದ ಭುಸಾವರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಿಂಗೊಟಾ ಊರಿನ ವ್ಯಕ್ತಿ, ತನ್ನ ಪತ್ನಿಗೆ ನೆರೆಯ ಯುವಕನು ಓಡಿಸಿಕೊಂಡು ಹೋಗಿದ್ದಾನೆಂದು ದೂರು ದಾಖಲಿಸಿದ್ದಾನೆ.
ಆತನ ದೂರಿನ ಪ್ರಕಾರ ಪೊಲೀಸರು ಸಂಬಂಧಿತ ವ್ಯಕ್ತಿಯನ್ನು ಬಂಧಿಸಿ ಕರೆ ತಂದರು. ಯುವಕ ಮತ್ತು ಮಹಿಳೆ ತಮ್ಮ ಒಪ್ಪಿಗೆಯಿಂದಲೇ ಕೂಡಿ ಇರುತ್ತೇವೆ ಎಂಬ ಮಾತನ್ನು ಆಡಿದ್ದಾರೆ. ಸೆರೆ ಸಿಕ್ಕ ಯುವಕ ಪೊಲೀಸರ ವಶದಲ್ಲಿದ್ದಾಗ ವಿಷ ಸೇವಿಸಿದಾಗ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಎಂಟು ವರ್ಷ ಮೊದಲೇ ಆಗಿತ್ತು ಮಹಿಳೆಯ ಮದುವೆ.
ಪೊಲೀಸರ ಪ್ರಕಾರ ತನಿಖೆಯಲ್ಲಿ ನಿಷ್ಪನ್ನವಾದ ವಿಷಯವೇನೆಂದರೆ, ಜಿತೇಂದ್ರ ಹೆಸರಿನ ಯುವಕನಿಗೆ ಊರಿನಲ್ಲಿಯ ವಿವಾಹಿತ ಸ್ತ್ರೀ ಜೊತೆಗೆ ಪ್ರೇಮವಾಗಿತ್ತು. ಮಹಿಳೆಯ ಮದುವೆ ಎಂಟು ವರ್ಷ ಮೊದಲೇ ಆಗಿತ್ತು. ಹಾಗೂ ಎರಡು ಮಕ್ಕಳು ಸಹಿತ ಇವೆ. ಜಿತೇಂದ್ರ ಮತ್ತು ಮಹಿಳೆ ಊರಿನಿಂದ ಓಡಿ ಹೋಗಿ ಮದುವೆಯಾಗಬೇಕೆನ್ನುವಷ್ಟರಲ್ಲಿಯೇ ಪೊಲೀಸರ ಕೈಗೆ ಸಿಕ್ಕಿ ಹಾಕಿ ಕೊಂಡಿದ್ದಾರೆ.
ಪತಿಯು ಕೊಟ್ಟ ದೂರಿನಿಂದಾಗಿ ಯುವಕನನ್ನು ಪೊಲೀಸರು ಹಿಡಿದು ತಂದರು.
ಭುಸಾವರ್ ಪೊಲೀಸರು ಮೀಡಿಯಾದ ಮುಂದೆ, ವಿವಾಹಿತೆ ಮತ್ತು ಯುವಕ ಜಿತೇಂದ್ರನ ಮದ್ಯೆ ಬಹಳ ದಿನಗಳಿಂದ ಪ್ರಣಯ ನಡೆದಿತ್ತು. ಆ ಕಾರಣದಿಂದಲೇ ಇಬ್ಬರು ಮನೆಯಿಂದ ಪರಾರಿಯಾಗಿದ್ದರೆಂದು ಹೇಳಿದ್ದಾರೆ. ಪತಿಯ ದೂರಿನಿಂದಾಗಿ ಯುವಕನನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಪೊಲೀಸರು ಯುವಕ ಜಿತೇಂದ್ರನ ವಿರುದ್ಧ ಕೇಸು ದಾಖಲಿಸಿ ಕೋರ್ಟಿನ ಮುಂದೆ ಹಾಜರು ಪಡಿಸಲಾಗಿ, ಮಹಿಳೆ ಜಡ್ಜ ನ ಮುಂದೆ ತಾನು ಪ್ರಿಯಕರನ ಜೊತೆಗೆ ಇರುತ್ತೇನೆಂದು ತನ್ನ ಇಚ್ಛೆ ವ್ಯಕ್ತ ಪಡಿಸಿದ್ದಾಳೆ.

ಯುವಕನ ಹತ್ತಿರ ಪೊಲೀಸ್ ಠಾಣೆಯಲ್ಲಿ ಹೇಗೆ ಬಂತು ವಿಷ?
ಭುಸಾವರ್ ಪೊಲೀಸ್ ರ ಮೇಲೂ ಕೆಲವು ಸಂಶಯದ ಪ್ರಶ್ನೆಗಳು ಉಪಸ್ಥಿತವಾಗುತ್ತಿವೆ. ಠಾಣೆಯಲ್ಲಿ ಬಂಧಿತನಾದ ವ್ಯಕ್ತಿಯ ಹತ್ತಿರ ವಿಷ ಹೇಗೆ ಬಂತು? ಈ ಘಟನೆಯ ನಂತರ ಭುಸಾವರ್ ಪೊಲೀಸರು ಗಡಿಬಿಡಿಯಲ್ಲಿ ಯುವಕನನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಅಲ್ಲಿ ಆತನ ಉಪಚಾರ ನಡೆದಿದೆ. ಡಾಕ್ಟರ್ ಪ್ರಕಾರ ಆತನ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡಿದೆ.