ಮದುವೆಯ ಔತಣದಲ್ಲಿ ಎಲ್ಲರೂ ಡಾನ್ಸ್ ಮಾಡುತ್ತಿರುವಾಗಲೇ ಹಠಾತ್ ಕುಸಿದ ಫ್ಲೋರ್! ಕ್ಯಾಮೆರಾ ಮ್ಯಾನ್…ವೈರಲ್ ವಿಡಿಯೋ
ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಕೆಲವೊಂದು ಸಲ ಏನಾದರೂ ರೋಚಕ ಘಟನೆಗಳು ನಡೆದೇ ಹೋಗುತ್ತವೆ. ಈ ರೀತಿ ನಡೆದ ಘಟನೆಗಳನ್ನು ಜನರು ತಮ್ಮ ಜೀವನದ ಕೊನೆಯವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಮದುವೆಗಳಲ್ಲಿ ಘಟಿಸಿದ ಭಯಾನಕ ಘಟನೆಗಳನ್ನು ಜನ ಮದುವೆಗಿಂತ ಹೆಚ್ಚು ಅದನ್ನೇ ನೆನಪಿಸಿಕೊಳ್ಳುತ್ತಾರೆ. ಇದೇ ರೀತಿಯ ಒಂದು ಮದುವೆಯಲ್ಲಿ ನಡೆದ ಕಲ್ಪನೆಗೂ ಮೀರಿದ ಇನ್ಸಿಡೆಂಟ್ ಒಂದನ್ನು ವಿಡಿಯೋ ರೂಪದಲ್ಲಿ ನಿಮಗಾಗಿ ತಂದಿದ್ದೇವೆ. ಈ ದೃಶ್ಯ ನೋಡಿದ ನಂತರ ಮೈನವಿರೇಳುವದು ನಿಶ್ಚಿತ. ಸದ್ಯ ಮದುವೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನೊಂದು ವಿಶೇಷವೇನೆಂದರೆ, ಇಲ್ಲಿ ನಡೆದ ಇಂಥ ರೋಚಕ ಘಟನೆಯಲ್ಲಿಯೂ ಕ್ಯಾಮೆರಾಮ್ಯಾನ್ ತನ್ನ ಡ್ಯೂಟಿ ಸರಿಯಾಗಿ ಬಜಾಯಿಸುತ್ತಿದ್ದಾನೆ. ನೇಟಿಜನ್ಸ್ ಗಳು ಈತನ ಮೇಲೆಯೇ ಹೆಚ್ಚು ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ಸಮಾರಂಭ ಜೋರಾಗಿ ನಡೆದಿರುವುದು ಕಂಡು ಬರುತ್ತಿದೆ. ಎಲ್ಲೆಡೆಯೂ ಸಂತೋಷದ ವಾತಾವರಣ ಎದ್ದು ಕಾಣುತ್ತಿದೆ. ಮದುವೆಯಲ್ಲಿ ಜಮಾಯಿಸಿದ ಸಂಬಂಧಿಕರು ಮಿತ್ರ ವರ್ಗ ತುಂಬಾ ಅನಂದದಿಂದ ಡಾನ್ಸ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಠಾತ್ತನೆ ಒಂದು ಘಟನೆ ನಡೆದು ಹೋಗುತ್ತದೆ. ಅದನ್ನು ನೋಡಿದವರೆಲ್ಲರೂ ಒಮ್ಮೆಲೆ ಸ್ತಬ್ಧರಾಗುತ್ತಾರೆ. ಕಾರಣ ಡಾನ್ಸ್ ಮಾಡುತ್ತಿರುವ ಸ್ಥಳ ಅಥವಾ ಫ್ಲೋರ್ ಅವರ ಭಾರವನ್ನು ತಾಳದೆ ಒಮ್ಮೆಲೆ ಕುಸಿದುಬಿದ್ದಿದೆ. ಅದೃಷ್ಟವೆಂದರೆ ಇಲ್ಲಿ ಯಾರಿಗೂ ಅಂತ ಯಾವುದೇ ರೀತಿಯ ಗಾಯವಾಗಿಲ್ಲ. ಆದರೆ ಇಂಥ ಭಯ ಹುಟ್ಟಿಸುವ ಕ್ಷಣದಲ್ಲಿ ಕ್ಯಾಮೆರಾಮೆನ್ ಮಾತ್ರ ಸ್ವಲ್ಪವೂ ಅಂಜದೆ ಅಳುಕದೆ ತನ್ನ ಡ್ಯೂಟಿ ಮಾತ್ರ ಹಾಗೆಯೇ ಮಾಡುತ್ತಿದ್ದಾನೆ. ಫ್ಲೋರ್ ಕುಸಿದು ಕೆಳಗೆ ಬಿದ್ದರೂ ಕ್ಯಾಮೆರಾಮ್ಯಾನ್ ಆ ದೃಶ್ಯದ ಫೂಟೇಜ್ ತೆಗೆದುಕೊಳ್ಳುವ ಹಂಬಲದಲ್ಲಿದ್ದಾನೆ. ಕೆಲವರಿಗೆ ಕ್ಯಾಮೆರಾ ಮೆನ್ ಈ ಅವಾಂತರ ನೋಡಿ ನಗು ತಡೆಯಲಾಗುತ್ತಿಲ್ಲ. ಹೀಗಾಗಿ ಆತನ ಮೇಲೆ ಅನೇಕ ಕಮೆಂಟುಗಳ ಬರುತ್ತಿವೆ.
ವಿಡಿಯೋ ನೋಡಿ
View this post on Instagram
ಒಬ್ಬ ಯೂಸರ್ ಈ ವಿಡಿಯೋ ನೋಡಿದ ನಂತರ, ಇಂಥ ಭಯಾನಕ ಪರಿಸ್ಥಿತಿಯಲ್ಲಿಯೂ ‘ಕ್ಯಾಮೆರಾಮೆನ್ ತನ್ನ ಡ್ಯೂಟಿಯನ್ನು ಮರೆತಿಲ್ಲ’ ಎಂದಿದ್ದಾನೆ. ಇನ್ನೊಬ್ಬ ಯೂಸರ್, ‘ಕ್ಯಾಮೆರಾಮೆನ್ ಯಾವತ್ತು ಕ್ಯಾಮೆರಮೆನ್ ಆಗಿಯೇ ಇರುತ್ತಾನೆ’ ಎಂದಿದ್ದಾನೆ. ಈ ರೀತಿ ಇನ್ನೂ ಅನೇಕ ಹತ್ತು ಹಲವು ಕಮೆಂಟ್ ಗಳು ಬರುತ್ತಿವೆ.