ಮದುವೆ ನಂತರ ಪಿಕ್ನಿಕ್ ಎಂದು ಕಾಡಿಗೆ ಹೋದ ಜೋಡಿಗೆ ಎದುರಾಯ್ತು ಸಂಕಟ: ಹತ್ತು ದಿನಗಳ ಕಾಲ ಸಾವಿನೊಂದಿಗೆ ನಡೆದಿತ್ತು ಕಣ್ಣಾಮುಚ್ಚಾಲೆ!
ಮದುವೆಯ ನಂತರ ನವಜೋಡಿಯು ಒಂದು ಪಿಕ್ ನಿಕ್ ಮಜಾ ಅನುಭವಿಸಬೇಕೆಂದು ಪ್ಲಾನ್ ಮಾಡಿ ದಟ್ಟ ಕಾಡಿಗೆ ಹೋಗಿದ್ದಾರೆ. ಅವರು ಹೋಗಿದ್ದೇನೋ ಪಿಕ್ ನಿಕ್ ಆಚರಣೆ ಮಾಡಲು ಆದರೆ ಕಾಡಿನಲ್ಲಿ ನಡೆದ ಒಂದು ಘಟನೆ ಯಿಂದಾಗಿ ಆ ಜೋಡಿಯ ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ಹತ್ತು ದಿನಗಳ ಕಾಲ ಕಾಡಿನಲ್ಲೇ ಉಳಿಯ ಬೇಕಾದಂತಹ ದುಸ್ಥಿತಿ ಉಂಟಾಗಿದೆ. ಈ ಘಟನೆಯು ನವಜೋಡಿಗೆ ಯಾವುದೇ ಒಂದು ದುಸ್ವಪ್ನ ಕ್ಕಿಂತ ಕಡಿಮೆಯೇನಿಲ್ಲ ಎಂದೇ ಹೇಳಬಹುದಾಗಿದೆ. ಆಂಟನ್ ಮತ್ತು ನಿನಾ ಬೋಗ್ಡಾನೋವ್ ಎನ್ನುವ ನವ ಜೋಡಿಗೆ ಈ ಹತ್ತು ದಿನಗಳ ಕಾಲವೂ ಸಾವಿನ ಜೊತೆಗೆ ಕಣ್ಣಾಮುಚ್ಚಾಲೆ ಆಡಿದಂತಹ ಭ ಯಾ ನಕ ಅನುಭವ ಉಂಟಾಗಿದೆ
ಈ ಜೋಡಿಗೆ ಮರಗಳ ಆಶ್ರಯ ಸಿಕ್ಕಿದ್ದು ಅವರ ಅದೃಷ್ಟವಾಗಿದ್ದು, ಇಲ್ಲದೇ ಹೋಗಿದ್ದರೆ ಹಸಿದ ಕಾಡು ಕರಡಿಗೆ ಇವರಿಬ್ಬರು ಬ ಲಿ ಯಾಗಬೇಕಿತ್ತು ಎನ್ನಲಾಗಿದೆ.
ಇಂತಹದೊಂದು ಭಯಾನಕ ಘಟನೆಯು ಸೈಬೀರಿಯಾದ ಕಮ್ಚಟ್ಕ ಎನ್ನುವಂತಹ ಪ್ರದೇಶದಲ್ಲಿ ನಡೆದಿದೆ. ದಟ್ಟ ಕಾಡಿನಲ್ಲಿ ಹಸಿದ ಕರಡಿಯ ಕೈಗೆ ಸಿಕ್ಕಿದರು ಎನ್ನುವ ವಿಷಯ ಕೇಳಿದರೇನೇ ಭಯ ಪಡುವ ನಾವು, ಅಂತಹ ಕಡೆ ಕರಡಿಯಿಂದ ಪ್ರಾಣವನ್ನು ಉಳಿಸಿಸಿಕೊಳ್ಳಲು ಹತ್ತು ದಿನಗಳ ಕಾಲ ಪರದಾಡಿದ ಈ ಜೋಡಿಯ ಪರಿಸ್ಥಿತಿಯನ್ನು ಊಹೆ ಮಾಡಿಕೊಂಡರೆ ಅದು ಭೀ ತಿಯನ್ನು ಹುಟ್ಟಿಸುತ್ತದೆ.
ಆಂಟನ್ ಮತ್ತು ನಿನಾ ಬೋಗ್ಡಾನೋವ್ ಇಬ್ಬರೂ ಒಂದು ಸಾಹಸಯಾತ್ರೆ ಮಾಡಬೇಕೆಂದು ಒಂದು ದಿನ ರಾತ್ರಿಯನ್ನು ಕಾಡಿನಲ್ಲಿ ಕಳೆಯಲು ನಿರ್ಧಾರ ಮಾಡಿದರು. ಅದಕ್ಕಾಗಿ ಅವರು ದಟ್ಟವಾದ ಅರಣ್ಯಕ್ಕೆ ಪ್ರವೇಶಿಸಿದರು, ಆದರೆ ಅವರ ಕಾರು ಮಾರ್ಗಮಧ್ಯದಲ್ಲಿ ಹಳ್ಳ ಒಂದರಲ್ಲಿ ಸಿಲುಕಿಕೊಂಡಿತು. ಅಲ್ಲಿಂದ ಅವರು ಭ ಯಾ ನಕ ಅನುಭವದ ಕಥೆ ಪ್ರಾರಂಭವಾಯಿತು.
ಎಲ್ಲಿ ಇವರ ಕಾರು ಸಿಲುಕಿಕೊಂಡಿತ್ತೋ, ಅಲ್ಲಿ ಫೋನ್ ನೆಟ್ ವರ್ಕ್ ಅವರೇ ಆಗಲೀ ಅಥವಾ ಬೇರೆ ವಾಹನಗಳೇ ಆಗಲೀ ಇರಲಿಲ್ಲ. ಹಾಗಾಗಿ ಜೋಡಿ ಹತ್ತಿರದಲ್ಲೇ ಇರುವ ಟೂರಿಸ್ಟ್ ಬೇಸ್ ಬಳಿಗೆ ನಡೆದುಕೊಂಡು ಹೋಗುವ ತೀರ್ಮಾನ ಮಾಡಿ, ಒಂದಷ್ಟು ದೂರ ನಡೆದು ಬರುವಾಗಲೇ, ಅವರ ಹಿಂದೆ ಕರಡಿಯೊಂದು ಬರುವುದನ್ನು ನೋಡಿದ್ದಾರೆ. ಅವರು ಮೊದಲು ಭಯ ಪಡದೆ ಕರಡಿಯನ್ನು ಭಯಪಡಿಸುವ, ಅದನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಮೊದಲು ಕರಡಿ ಭಯಪಟ್ಟಿದ್ದೇನೋ ನಿಜ, ಆದರೆ ಅನಂತರ ಅದು ಇವರನ್ನು ಅಟ್ಟಿಸಿಕೊಂಡು ಬಂದಿದೆ.

ಆಗ ಬೇರೆ ದಾರಿಯಿಲ್ಲದೆ ಪತಿ-ಪತ್ನಿ ಇಬ್ಬರು ಓಡಿ ಹೋಗಿ, ಒಂದು ಮರವನ್ನು ಏರಿದ್ದಾರೆ. ನೀನಾ ಈ ವಿಷಯದ ಕುರಿತು ಹೇಳುವಾಗ ಒಂದು ಸಂದರ್ಭದಲ್ಲಿ ಕರಡಿ ತನ್ನ ಪತಿಯನ್ನು ಕೊಂದು ಹಾಕಿತೇನೋ ಎನ್ನುವಷ್ಟು ಹತ್ತಿರಕ್ಕೆ ಬಂದಿತ್ತು. ಆದರೆ ಅವರು ನೀರಿನ ಬಾಟಲ್ ಎಸೆಯುವ ಮೂಲಕ ಅದರ ಗಮನವನ್ನು ಬೇರೆಡೆಗೆ ಸೆಳೆದು, ಮರವನ್ನು ಏರಿದರು ಎಂದು ಹೇಳಿದ್ದಾರೆ. ಇಬ್ಬರು ಸಹಾ ಎರಡು ದಿನಗಳ ಕಾಲ ಮರದ ಮೇಲೆ ಇದ್ದರು ಎನ್ನಲಾಗಿದ್ದು ಕರಡಿಯ ನಿರಂತರವಾಗಿ ಇವರನ್ನೇ ನೋಡುತ್ತಿತ್ತು ಎಂದು ಹೇಳಿದ್ದಾರೆ. ಎರಡು ದಿನಗಳ ನಂತರ ಜೋಡಿಯು ಮಾಡಿ ತಪ್ಪಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದಾರೆ.
ಅಲ್ಲೇ ಇದ್ದ ನದಿಯನ್ನು ದಾಟಿ ಇನ್ನೊಂದು ತೀರಕ್ಕೆ ಹೋಗುವ ಉಪಾಯವನ್ನು ಹೂಡಿದ ಅವರು ಬಹಳ ಸಾವಧಾನವಾಗಿ ಮರದಿಂದ ಕೆಳಗಿಳಿದು ಕಷ್ಟ ಪಟ್ಟು ನದಿಯ ತೀರಕ್ಕೆ ಬಂದಿದ್ದಾರೆ.. ಆದರೆ ದುರಾದೃಷ್ಟ ಎನ್ನುವಂತೆ ಮತ್ತೊಮ್ಮೆ ಕರಡಿ ಅವರನ್ನು ಹಿಂದಕ್ಕೆ ಅಟ್ಟಿಸಿಕೊಂಡು ಬಂದಿದೆ. ಇಬ್ಬರು ತಡಮಾಡದೆ ಮತ್ತೆ ಬಂದು ಮರವನ್ನು ಏರಿ ಕುಳಿತಿದ್ದಾರೆ. ಕರಡಿ ನಿರಂತರವಾಗಿ ಅವರ ಚಲನವಲನಗಳನ್ನು ಗಮನಿಸುತ್ತಿತ್ತು ಎನ್ನಲಾಗಿದೆ. ಪತಿ ಪತ್ನಿ ಯಲ್ಲಿ ಒಬ್ಬರು ಎಚ್ಚರವಾಗಿದ್ದಾಗ ಮತ್ತೊಬ್ಬರು ನಿದ್ದೆ ಮಾಡುತ್ತಿದ್ದರು. ಆದರೆ ತಿನ್ನಲು, ಕುಡಿಯಲು ನಮಗೆ ಏನು ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೇ ದಟ್ಟವಾದ ಅರಣ್ಯದಲ್ಲಿ ಮರಗಳ ಕೊಂಬೆಗಳ ಮೇಲೆ ನಡೆಯುತ್ತಾ ಒಂದು ಮರದಿಂದ ಇನ್ನೊಂದು ಮರಕ್ಕೆ ಅವರು ನಡೆದು ಹೋಗಿದ್ದಾರೆ.
ಹೀಗೆ ಹತ್ತು ದಿನಗಳು ಕಾದು ನಂತರ ಕೊನೆಗೂ ಕರಡಿ ಸೋಲನ್ನು ಒಪ್ಪಿಕೊಂಡು ಬೇರೆ ಬೇಟೆಯನ್ನು ಹುಡುಕಿಕೊಂಡು ಅಲ್ಲಿಂದ ಹೊರಟು ಹೋಗಿದೆ. ಕರಡಿ ಹೋದನಂತರ ಇಬ್ಬರು ಮರದಿಂದ ಕೆಳಗೆ ಇಳಿದು, ತಮ್ಮ ಕಾರು ಸಿಲುಕಿಕೊಂಡಿದ್ದ ಸ್ಥಳಕ್ಕೆ ತಲುಪಿದ್ದಾರೆ. ಆ ವೇಳೆಗೆ ಅಲ್ಲಿ ಇನ್ನೊಂದಷ್ಟು ವಾಹನಗಳು ಹಾಗೂ ರಕ್ಷಣಾ ತಂಡವು ಬಂದಿರುವುದನ್ನು ಗಮನಿಸಿ ನಿಟ್ಟುಸಿರುಬಿಟ್ಟಿದ್ದಾರೆ. ಕಳೆದ ವರ್ಷ ಇದೇ ಜಾಗದಲ್ಲಿ ಕರಡಿಯು ನಾಲ್ಕು ಜನರನ್ನು ಕೊಂ ದು ಹಾಕಿತ್ತು ಎನ್ನಲಾಗಿದೆ. ಇವರು ಮರವೇರಿ ಕುಳಿತಿದ್ದ ಆ ಕಾಡಿನಲ್ಲಿ ಒಟ್ಟು 23000 ಕರಡಿಗಳು ಇವೆ ಎನ್ನಲಾಗಿದೆ.